ಒಡಿಶಾ: ಕಾಲಿಗೆ ಕ್ಯಾಮರಾ ಅಳವಡಿಸಿದ್ದ ಗೂಢಚಾರ ಪಾರಿವಾಳ ಸೆರೆ

ಕಾಲಿಗೆ ಕ್ಯಾಮರಾ ಮತ್ತು ಮೈಕ್ರೋಚಿಪ್ ನ್ನು ಅಳವಡಿಸಿ ಹಾರಿಬಿಡಲಾಗಿದ್ದ ಗೂಢಚಾರ ಪಾರಿವಾಳವನ್ನು ಒಡಿಶಾದ ಕಡಲ ತೀರದಲ್ಲಿ ಸೆರೆ ಹಿಡಿಯಲಾಗಿದೆ. 
ಪಾರಿವಾಳ ಸೆರೆ
ಪಾರಿವಾಳ ಸೆರೆ

ಭುವನೇಶ್ವರ್: ಕಾಲಿಗೆ ಕ್ಯಾಮರಾ ಮತ್ತು ಮೈಕ್ರೋಚಿಪ್ ನ್ನು ಅಳವಡಿಸಿ ಹಾರಿಬಿಡಲಾಗಿದ್ದ ಗೂಢಚಾರ ಪಾರಿವಾಳವನ್ನು ಒಡಿಶಾದ ಕಡಲ ತೀರದಲ್ಲಿ ಸೆರೆ ಹಿಡಿಯಲಾಗಿದೆ. 

ಒಡಿಶಾದ ಜಗತ್‌ಸಿಂಗ್‌ಪುರ ಜಿಲ್ಲೆಯ ಪರದೀಪ್ ಕರಾವಳಿ ಪ್ರದೇಶದಲ್ಲಿ ಈ ಘಟನೆ ವರದಿಯಾಗಿದ್ದು,  ಈ ಪಾರಿವಾಳವನ್ನು ಗೂಢಚಾರಿಕೆಗಾಗಿ ಬಳಕೆ ಮಾಡಲಾಗುತ್ತಿತ್ತು ಎಂಬ ಶಂಕೆ ವ್ಯಕ್ತವಾಗಿದೆ.

ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿದ್ದಾಗ ಈ ಪಾರಿವಾಳ ತಮ್ಮ ಟ್ರಾಲರ್‌ನಲ್ಲಿ ಕುಳಿತಿದ್ದನ್ನು ಕೆಲವು ಮೀನುಗಾರರು ಕಂಡಿದ್ದರು.

ಪಾರಿವಾಳವನ್ನು ಹಿಡಿದು ಅದನ್ನು ಸಮುದ್ರ ಪ್ರದೇಶದ ಪೊಲೀಸರಿಗೆ ಒಪ್ಪಿಸಲಾಗಿದೆ.
 
ನಮ್ಮ ಸಿಬ್ಬಂದಿಗಳು ಪಾರಿವಾಳವನ್ನು ಪರೀಕ್ಷೆ ಮಾಡಲಿದ್ದಾರೆ, ಅದರ ಕಾಲುಗಳಿಗೆ ಜೋಡಿಸಲಾದ ಸಾಧನಗಳನ್ನು ಪರೀಕ್ಷಿಸಲು ರಾಜ್ಯ ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯದ ಸಹಾಯವನ್ನು ಪಡೆಯಲಾಗುತ್ತದೆ. ಸಾಧನಗಳು ಕ್ಯಾಮೆರಾ ಮತ್ತು ಮೈಕ್ರೋಚಿಪ್ ನ್ನು ಪಾರಿವಾಳದಲ್ಲಿ ಅಳವಡಿಸಿದಂತೆ ತೋರುತ್ತದೆ "ಎಂದು ಜಗತ್ಸಿಂಗ್‌ಪುರ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಪಿಆರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com