2019ರಲ್ಲಿ 198 ಕೋಟಿ ರೂಪಾಯಿಗೆ ಖರೀದಿಸಿದ ವಿಮಾನ ನಿರ್ವಹಣೆಗೆ 20 ಕೋಟಿ ರೂ. ಖರ್ಚು ಮಾಡಿದ ಗುಜರಾತ್ ಸರ್ಕಾರ!

2019 ರ ನವೆಂಬರ್‌ನಲ್ಲಿ ಗುಜರಾತ್ ಸರ್ಕಾರವು 198 ಕೋಟಿ ರೂಪಾಯಿಗೆ ಖರೀದಿಸಿದ ಹೊಸ ವಿಮಾನಕ್ಕೆ ಎರಡು ವರ್ಷಗಳಲ್ಲಿ ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ 20.8 ಕೋಟಿ ರೂಪಾಯಿ ಖರ್ಚು ಮಾಡಿದೆ ಎಂದು ಗುಜರಾತ್ ಸರ್ಕಾರ ನಿನ್ನೆ ಶುಕ್ರವಾರ ರಾಜ್ಯ ವಿಧಾನಸಭೆಗೆ ತಿಳಿಸಿದೆ. 
ಗುಜರಾತ್ ಸಿಎಂ ಭೂಪೇಂದ್ರ ಪಟೇಲ್
ಗುಜರಾತ್ ಸಿಎಂ ಭೂಪೇಂದ್ರ ಪಟೇಲ್

ಅಹಮದಾಬಾದ್: 2019 ರ ನವೆಂಬರ್‌ನಲ್ಲಿ ಗುಜರಾತ್ ಸರ್ಕಾರವು 198 ಕೋಟಿ ರೂಪಾಯಿಗೆ ಖರೀದಿಸಿದ ಹೊಸ ವಿಮಾನಕ್ಕೆ ಎರಡು ವರ್ಷಗಳಲ್ಲಿ ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ 20.8 ಕೋಟಿ ರೂಪಾಯಿ ಖರ್ಚು ಮಾಡಿದೆ ಎಂದು ಗುಜರಾತ್ ಸರ್ಕಾರ ನಿನ್ನೆ ಶುಕ್ರವಾರ ರಾಜ್ಯ ವಿಧಾನಸಭೆಗೆ ತಿಳಿಸಿದೆ. 

ಕಾಂಗ್ರೆಸ್ ಶಾಸಕರಾದ ಇಮ್ರಾನ್ ಖೇದವಾಲಾ ಮತ್ತು ಅರ್ಜುನ್ ಮೊದ್ವಾಡಿಯಾ ಅವರು ಕೇಳಿದ ಪ್ರಶ್ನೆಗಳಿಗೆ ನಾಗರಿಕ ವಿಮಾನಯಾನ ಸಚಿವ ಬಲ್ವಂತ್ ಸಿಂಗ್ ರಜಪೂತ್ ಪ್ರತಿಕ್ರಿಯೆ ನೀಡಿ, ಡಿಸೆಂಬರ್ 31, 2022ರ ಎರಡು ವರ್ಷಗಳಲ್ಲಿ, ರಾಜ್ಯ ಸರ್ಕಾರವು ಎರಡು ವಿಮಾನಗಳು ಮತ್ತು ಹೆಲಿಕಾಪ್ಟರ್‌ನ ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ಒಟ್ಟು 36 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ ಎಂದು ಉತ್ತರಿಸಿದರು. 

ನವೆಂಬರ್ 2019 ರಲ್ಲಿ 197.90 ಕೋಟಿ ರೂಪಾಯಿಗೆ ಖರೀದಿಸಲಾದ ಅವಳಿ-ಎಂಜಿನ್ ಬೊಂಬಾರ್ಡಿಯರ್ ಚಾಲೆಂಜರ್ 650ರ ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ಸರ್ಕಾರವು ಎರಡು ಖಾಸಗಿ ಏಜೆನ್ಸಿಗಳಿಗೆ ಡಿಸೆಂಬರ್ 31, 2022 ಕ್ಕೆ ಕೊನೆಗೊಳ್ಳುವ ಎರಡು ವರ್ಷಗಳ ಅವಧಿಗೆ 20.80 ಕೋಟಿ ರೂಪಾಯಿ ನೀಡಿದೆ.

ಕಳೆದ ಜನವರಿ 31ಕ್ಕೆ ವಿಮಾನವು 183 ಬಾರಿ ಪ್ರಯಾಣಿಸಿದೆ ಎಂದು ಹೇಳಿದರು. ಜನವರಿ 31, 2023 ಮತ್ತು ಎರಡನೇ ವರ್ಷದ ಅಂತ್ಯದ ನಡುವೆ ರಾಜ್ಯದ ಎರಡು ವಿಮಾನಗಳು ಮತ್ತು ಒಂದು ಹೆಲಿಕಾಪ್ಟರ್ ಬಳಸಿ 486 ಬಾರಿ ಪ್ರಯಾಣಗಳನ್ನು ಮಾಡಲಾಗಿದೆ ಎಂದು ಸಚಿವರು ಹೇಳಿದರು.

ಎರಡು ವರ್ಷಗಳಲ್ಲಿ ಸರ್ಕಾರವು ಚಾಪರ್‌ಗೆ 7.4 ಕೋಟಿ ರೂಪಾಯಿ ಮತ್ತು ಹಳೆಯ ಜೆಟ್‌ನ ನಿರ್ವಹಣೆಗೆ 8.04 ಕೋಟಿ ರೂಪಾಯಿ ಖರ್ಚು ಮಾಡಿದೆ. ಸಿಎಮ್ ಮತ್ತು ಇತರ ಗಣ್ಯರಿಗೆ ಐಷಾರಾಮಿ ಬೊಂಬಾರ್ಡಿಯರ್ ಚಾಲೆಂಜರ್ 650 ಗೆ ಪ್ರವೇಶವನ್ನು ನೀಡಲಾಯಿತು. ನಾಗರಿಕ ವಿಮಾನಯಾನ ಇಲಾಖೆ ಅಧಿಕಾರಿಗಳ ಪ್ರಕಾರ, ಇದು 12 ಪ್ರಯಾಣಿಕರನ್ನು ಸಾಗಿಸಬಲ್ಲದು ಮತ್ತು ಸುಮಾರು 7,000 ಕಿಮೀ ಹಾರುವ ವ್ಯಾಪ್ತಿಯನ್ನು ಹೊಂದಿದೆ, ಇದು ಹಳೆಯದಾದ ಬೀಚ್‌ಕ್ರಾಫ್ಟ್ ಸೂಪರ್ ಕಿಂಗ್ ವಿಮಾನಕ್ಕಿಂತ ಹೆಚ್ಚು. 20 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ.

2002ರಲ್ಲಿ ಗೋಧ್ರಾ ಹತ್ಯಾಕಾಂಡ ಹಾಗೂ ನಂತರದ ಗಲಭೆ ಕುರಿತ ಸಾಕ್ಷ್ಯಚಿತ್ರದೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸು ಮತ್ತು ಜನಪ್ರಿಯತೆಗೆ ಕಳಂಕ ತಂದಿರುವ ಬಿಬಿಸಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಗುಜರಾತ್ ವಿಧಾನಸಭೆ ನಿರ್ಣಯವನ್ನು ಅಂಗೀಕರಿಸಿದೆ.

ಬಿಬಿಸಿಯ ಎರಡು ಭಾಗಗಳ ಸರಣಿಯ 'ಇಂಡಿಯಾ: ಮೋದಿ ಕ್ವಷ್ಚನ್' ಎಂಬ ಶೀರ್ಷಿಕೆಯು 2002 ರ ಘಟನೆಗಳನ್ನು ದುರುದ್ದೇಶಪೂರಿತ ಮತ್ತು ಜಾಗತಿಕವಾಗಿ ಭಾರತದ ಇಮೇಜ್ ನ್ನು ಕಳಂಕಗೊಳಿಸುವ ಕೀಳು ಮಟ್ಟದ ಪ್ರಯತ್ನವಾಗಿದೆ ಎಂದು ಬಿಜೆಪಿ ಶಾಸಕ ವಿಪುಲ್ ಪಟೇಲ್ ನಿರ್ಣಯವನ್ನು ಮಂಡಿಸುವಾಗ ಸದನದಲ್ಲಿ ಹೇಳಿದರು.

ಮೋದಿ ರಾಜ್ಯದ ಸಿಎಂ ಆಗಿದ್ದಾಗ ಗೋಧ್ರಾ ರೈಲು ದಹನ ಘಟನೆಯ ನಂತರ ನಡೆದ ಗಲಭೆಯ ಕೆಲವು ಅಂಶಗಳನ್ನು ತನಿಖೆ ಮಾಡಿರುವುದಾಗಿ ಸಾಕ್ಷ್ಯಚಿತ್ರ ಹೇಳಿಕೊಂಡಿದೆ. ಸಾಕ್ಷ್ಯಚಿತ್ರ ಬಿಡುಗಡೆಯಾದ ಕೂಡಲೇ ಭಾರತದಲ್ಲಿ ನಿಷೇಧಿಸಲಾಯಿತು. ಪಟೇಲ್ ಅವರ ನಿರ್ಣಯವನ್ನು ಬಿಜೆಪಿ ಶಾಸಕರಾದ ಮನೀಶಾ ವಕೀಲ್, ಅಮಿತ್ ಠಾಕರ್, ಧವಲ್ಸಿನ್ಹ್ ಝಾಲಾ ಮತ್ತು ಸಚಿವ ಹರ್ಷ ಸಂಘವಿ ಬೆಂಬಲಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com