ಉತ್ತರಪ್ರದೇಶದಲ್ಲಿ ಗುಡಿಸಲಿಗೆ ಬೆಂಕಿ: ಮೂವರು ಮಕ್ಕಳು ಸೇರಿ ಒಂದೇ ಕುಟುಂಬ ಐವರು ಸಜೀವ ದಹನ!
ಉತ್ತರಪ್ರದೇಶದ ಕಾನ್ಪುರದ ದೇಹತ್‌ನ ಹರಾಮೌ ರೂರಾದಲ್ಲಿ ರೈತರ ಗುಡಿಸಲಿನಲ್ಲಿ ಅನುಮಾನಾಸ್ಪದವಾಗಿ ಬೆಂಕಿ ಕಾಣಿಸಿಕೊಂಡಿದ್ದು ಈ ಅವಘಡದಲ್ಲಿ ದಂಪತಿ ಮತ್ತು ಮೂವರು ಮಕ್ಕಳು ಸುಟ್ಟು ಕರಕಲಾಗಿದ್ದಾರೆ.
Published: 12th March 2023 09:31 PM | Last Updated: 12th March 2023 09:31 PM | A+A A-

ಬೆಂಕಿ ಅವಘಡ
ಕಾನ್ಪುರ್: ಉತ್ತರಪ್ರದೇಶದ ಕಾನ್ಪುರದ ದೇಹತ್‌ನ ಹರಾಮೌ ರೂರಾದಲ್ಲಿ ರೈತರ ಗುಡಿಸಲಿನಲ್ಲಿ ಅನುಮಾನಾಸ್ಪದವಾಗಿ ಬೆಂಕಿ ಕಾಣಿಸಿಕೊಂಡಿದ್ದು ಈ ಅವಘಡದಲ್ಲಿ ದಂಪತಿ ಮತ್ತು ಮೂವರು ಮಕ್ಕಳು ಸುಟ್ಟು ಕರಕಲಾಗಿದ್ದಾರೆ.
ಘಟನೆಯ ಮಾಹಿತಿ ತಿಳಿದ ನಂತರ ಗ್ರಾಮದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಪೊಲೀಸರು ಕೂಡ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ, ಆದರೆ ಐವರೂ ಅದಾಗಲೇ ಸಾವನ್ನಪ್ಪಿದ್ದರು. ತೀವ್ರವಾಗಿ ಸುಟ್ಟ ಗಾಯಗೊಂಡಿರುವ ಮಹಿಳೆಯನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲರೂ ಗುಡಿಸಲಿನಲ್ಲಿ ಮಲಗಿದ್ದರು. ಮಾಹಿತಿ ತಿಳಿದ ಕೂಡಲೇ ಡಿಎಂ ಎಸ್ಪಿ ಸೇರಿದಂತೆ ಎಲ್ಲ ಉನ್ನತಾಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಘಟನೆಗೆ ಕಾರಣಗಳು ಸದ್ಯಕ್ಕೆ ತಿಳಿದುಬಂದಿಲ್ಲ.
ಹರಮಾವು ಗ್ರಾಮದಲ್ಲಿ ಬಂಜಾರ ಡೇರಾ ಇದೆ. ಡೇರಾದ ಗುಡಿಸಲಿನಿಂದ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಾಗ ಗ್ರಾಮದಲ್ಲಿ ಕೋಲಾಹಲ ಉಂಟಾಯಿತು. ಮಾಹಿತಿ ತಿಳಿದ ಅಗ್ನಿಶಾಮಕ ದಳ ಆಗಮಿಸಿ ಬೆಂಕಿಯನ್ನು ನಿಯಂತ್ರಿಸಿದರು. ಅಪಘಾತದಲ್ಲಿ ದಂಪತಿಗಳಾದ ಸತೀಶ್ (30) ಮತ್ತು ಕಾಜಲ್ (26) ಮೂವರು ಮಕ್ಕಳಾದ ಸನ್ನಿ (6), ಸಂದೀಪ್ (5), ಗುಡಿಯಾ (3) ಸುಟ್ಟು ಕರಕಲಾಗಿದ್ದಾರೆ.
ಠಾಣಾ ಪ್ರಭಾರಿ, ಸಿಒ ಮತ್ತು ಎಸ್ಪಿ ತಡರಾತ್ರಿ ಘಟನಾ ಸ್ಥಳಕ್ಕೆ ಧಾವಿಸಿ, ತನಿಖೆ ನಂತರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ರೂರಾ ಪೊಲೀಸ್ ಠಾಣೆಯ ಹರಮೌ ಗ್ರಾಮದ ಬಂಜಾರರ ದೊಡ್ಡ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಕಾನ್ಪುರದ ಎಸ್ಪಿ ದೇಹತ್ ಬಿಬಿಜಿಟಿಎಸ್ ಮೂರ್ತಿ ಮಾತನಾಡಿ, ಶನಿವಾರ ತಡರಾತ್ರಿ ಗುಡಿಸಲಿಗೆ ಬೆಂಕಿ ಹೊತ್ತಿಕೊಂಡು ಅವಘಡ ಸಂಭವಿಸಿದೆ ಎಂದರು.