ಹೈದರಾಬಾದ್ ನಲ್ಲಿ ಅಮಿತ್ ಶಾ ಗೆ ವಾಷಿಂಗ್ ಪೌಡರ್ ನಿರ್ಮಾ ಪೋಸ್ಟರ್ ಸ್ವಾಗತ!: ಹೀಗ್ಯಾಕೆ ಅಂದರೆ... 

ಕೇಂದ್ರ ಗೃಹ ಸಚಿವ ಅಮಿತ್ ಶಾ ಹೈದರಾಬಾದ್ ಗೆ ಭೇಟಿ ನೀಡಿದ್ದು, ಅವರನ್ನು ಭಾರತ್ ರಾಷ್ಟ್ರ ಸಮಿತಿ (ಬಿಆರ್ ಎಸ್ ) ವಾಷಿಂಗ್ ಪೌಡರ್ ನಿರ್ಮಾ ಪೋಸ್ಟರ್ ಮೂಲಕ ಸ್ವಾಗತಿಸಿದೆ. 
ಅಮಿತ್ ಶಾ ಅವರನ್ನು ಸ್ವಾಗತಿಸಲು ಬಿಎಸ್ ಆರ್ ಪಕ್ಷದ ಪೋಸ್ಟರ್
ಅಮಿತ್ ಶಾ ಅವರನ್ನು ಸ್ವಾಗತಿಸಲು ಬಿಎಸ್ ಆರ್ ಪಕ್ಷದ ಪೋಸ್ಟರ್

ಹೈದರಾಬಾದ್: ಕೇಂದ್ರ ಗೃಹ ಸಚಿವ ಅಮಿತ್ ಶಾ ಹೈದರಾಬಾದ್ ಗೆ ಭೇಟಿ ನೀಡಿದ್ದು, ಅವರನ್ನು ಭಾರತ್ ರಾಷ್ಟ್ರ ಸಮಿತಿ (ಬಿಆರ್ ಎಸ್ ) ವಾಷಿಂಗ್ ಪೌಡರ್ ನಿರ್ಮಾ ಪೋಸ್ಟರ್ ಮೂಲಕ ಸ್ವಾಗತಿಸಿದೆ. 

ಸಿಐಎಸ್ಎಫ್ ರೈಸಿಂಗ್ ಡೇ ಪರೇಡ್ ನಲ್ಲಿ ಅಮಿತ್ ಶಾ ಭಾಗವಹಿಸಲಿದ್ದು, ನಿರ್ಮಾ ಜಾಹಿರಾತಿನ ಪೋಸ್ಟರ್ ನಲ್ಲಿ ಬಿಜೆಪಿ ನಾಯಕರಾದ ನಾರಾಯಣ ರಾಣೆ, ಸುವೇಂದು ಅಧಿಕಾರಿ, ಹಿಮಂತ ಬಿಸ್ವ ಶರ್ಮಾ, ಈಶ್ವರಪ್ಪ ಸೇರಿದಂತೆ ಹಲವು ನಾಯಕರ ಫೋಟೋಗಳು ಕಂಡುಬಂದಿದ್ದು ಅಚ್ಚರಿ ಮೂಡಿಸಿದೆ.

ನಿರ್ಮ ಜಾಹಿರಾತಿನಲ್ಲಿರುವ ಬಾಲಕಿಯ ಫೋಟೋಗೆ ಮೇಲೆ ಉಲ್ಲೇಖಿಸಿರುವ ಬಿಜೆಪಿ ನಾಯಕರ ಫೋಟೋ ಜೋಡಿಸಲಾಗಿದ್ದು, ಈ ನಾಯಕರೆಲ್ಲರೂ ಬಿಜೆಪಿ ಸೇರಿದ ಮೇಲೆ ಭ್ರಷ್ಟಾಚಾರ ಮುಕ್ತರಾಗಿದ್ದಾರೆ ಎಂದು ಬಿಆರ್ ಎಸ್ ವ್ಯಂಗ್ಯವಾಡಿದೆ. ಈ ರೀತಿಯ ಪೋಸ್ಟರ್ ಹಾಕುವ ಮೂಲಕ ಅಮಿತ್ ಶಾ ಅವರನ್ನು ಬಿಆರ್ ಎಸ್ ಸ್ವಾಗತಿಸಿದೆ. 

ಇದೇ ರೀತಿಯಲ್ಲಿ ಬಿಜೆಪಿ ನಾಯಕರನ್ನೊಳಗೊಂಡ ವಾಷಿಂಗ್ ಪೌಡರ್ ಬ್ರಾಂಡ್ ನ ಮತ್ತೊಂದು ಪೋಸ್ಟರ್ ಹಾಕಿದ್ದ ಬಿಆರ್ ಎಸ್, ಟೈಡ್ ಡಿಟರ್ಜೆಂಟ್ ನ ಮಾದರಿಯ ಜಾಹಿರಾತಿನಲ್ಲಿ ತನಿಖಾ ಸಂಸ್ಥೆಗಳ ರೈಡ್ ನ್ನು ವ್ಯಂಗ್ಯವಾಡಿತ್ತು. ಅದರಲ್ಲಿ ಹಿಮಂತ ಬಿಸ್ವ ಶರ್ಮಾ, ಜ್ಯೋತಿರಾದಿತ್ಯ ಸಿಂಧಿಯಾ ರೈಡ್ ಗಳ ಪರಿಣಾಮದಿಂದ ಬಿಜೆಪಿಗೆ ಸೇರ್ಪಡೆಯಾಗಿರುವುದು ಹಾಗೂ  ಎಷ್ಟೇ ರೈಡ್ ಗಳಾದರೂ ತೆಲಂಗಾಣ ಸಿಎಂ ಪುತ್ರಿ ಕವಿತಾ ಅವರ ಬಣ್ಣ ಬದಲಾಗಿಲ್ಲ ಎಂದು ಬಿಆರ್ ಎಸ್ ಹೇಳಿದೆ.

ಇದೇ ವೇಳೆ  ಪ್ರಧಾನಿಯನ್ನು ಬಿಆರ್ ಎಸ್ ರಾವಣನಿಗೆ ಹೋಲಿಕೆ ಮಾಡಿ ಪ್ರಜಾಪ್ರಭುತ್ವ ನಾಶ ಮಾಡಿದ ವ್ಯಕ್ತಿ, ಬೂಟಾಟಿಕೆಯ ಪಿತಾಮಹ ಎಂದು ಹೇಳಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com