ಮಹಾರಾಷ್ಟ್ರದಲ್ಲಿ H3N2ಗೆ ಇಬ್ಬರು ಬಲಿ; ಮಾಸ್ಕ್ ಧರಿಸುವಂತೆ ಆರೋಗ್ಯ ಸಚಿವರ ಸಲಹೆ
ಮಹಾರಾಷ್ಟ್ರದಲ್ಲಿ H3N2 ನಿಂದ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಅವರಲ್ಲಿ 74 ವರ್ಷದ ವ್ಯಕ್ತಿಯೊಬ್ಬರು H3N2 ಉಪಥಳಿಯಿಂದ ಸಾವನ್ನಪ್ಪಿದ್ದು, ಇನ್ನೊಬ್ಬ ವ್ಯಕ್ತಿ COVID-19 ಮತ್ತು ಇನ್‌ಫ್ಲುಯೆಂಜಾ ವೈರಸ್‌ನಿಂದ ಮೃತಪಟ್ಟಿದ್ದಾರೆ....
Published: 15th March 2023 08:20 PM | Last Updated: 15th March 2023 08:20 PM | A+A A-

H3N2 ಇನ್‌ಫ್ಲುಯೆಂಜಾ (ಸಾಂಕೇತಿಕ ಚಿತ್ರ)
ಮುಂಬೈ: ಮಹಾರಾಷ್ಟ್ರದಲ್ಲಿ H3N2 ನಿಂದ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ.
ಅವರಲ್ಲಿ 74 ವರ್ಷದ ವ್ಯಕ್ತಿಯೊಬ್ಬರು H3N2 ಉಪಥಳಿಯಿಂದ ಸಾವನ್ನಪ್ಪಿದ್ದು, ಇನ್ನೊಬ್ಬ ವ್ಯಕ್ತಿ COVID-19 ಮತ್ತು ಇನ್‌ಫ್ಲುಯೆಂಜಾ ವೈರಸ್‌ನಿಂದ ಮೃತಪಟ್ಟಿದ್ದಾರೆ ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ತಾನಾಜಿ ಸಾವಂತ್ ಬುಧವಾರ ವಿಧಾನಸಭೆಗೆ ತಿಳಿಸಿದ್ದಾರೆ.
ರಾಜ್ಯದಲ್ಲಿ ಒಟ್ಟು 361 H3N2 ಸೋಂಕು ಪ್ರಕರಣಗಳು ವರದಿಯಾಗಿದ್ದು, ಈ ಸಂಬಂಧ ಇನ್ನೆರಡು ದಿನಗಳಲ್ಲಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ: ಎಚ್3ಎನ್2 ವೈರಸ್ ಸೋಂಕು ಭೀತಿ: ಮಾರ್ಚ್ 16 ರಿಂದ 26ರವರೆಗೆ ಶಾಲೆಗಳಿಗೆ ರಜೆ ಘೋಷಿಸಿದ ಪುದುಚೇರಿ ಸರ್ಕಾರ
ಜನಸಂದಣಿ ಇರುವ ಸ್ಥಳಗಳಲ್ಲಿ ಮಾಸ್ಕ್ ಬಳಕೆ ಮಾಡುವಂತೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮಹಾರಾಷ್ಟ್ರ ಸಚಿವರು ಜನರಿಗೆ ಸಲಹೆ ನೀಡಿದ್ದಾರೆ.
"ಅಹ್ಮದ್‌ನಗರದಲ್ಲಿ 23 ವರ್ಷದ MBBS ಮೊದಲ ವರ್ಷದ ವಿದ್ಯಾರ್ಥಿ ಸೇರಿದಂತೆ ಇಬ್ಬರು ವ್ಯಕ್ತಿಗಳು ಇನ್ಫ್ಲುಯೆನ್ಸದಿಂದ ಸಾವನ್ನಪ್ಪಿದ್ದಾರೆ. ಅವರಿಗೆ COVID-19 ಮತ್ತು H1N1 ಹಾಗೂ H3N2 ಪಾಸಿಟಿವ್ ಬಂದಿತ್ತು. ಇನ್ನೊಬ್ಬ ವ್ಯಕ್ತಿ 74 ವರ್ಷದ ವ್ಯಕ್ತಿಯಾಗಿದ್ದು, ಎಚ್3ಎನ್2 ನಿಂದ ನಾಗಪುರದಲ್ಲಿ ಸಾವನ್ನಪ್ಪಿದ್ದಾರೆ" ಎಂದು ಸಾವಂತ್ ಹೇಳಿದ್ದಾರೆ.
ಎಚ್1ಎನ್1 ಮತ್ತು ಎಚ್3ಎನ್2 ಎಂಬ ಎರಡು ರೀತಿಯ ವೈರಸ್‌ಗಳಿಂದ ಇನ್‌ಫ್ಲುಯೆಂಜಾ ಉಂಟಾಗುತ್ತದೆ. ಮುಂದಿನ ಎರಡು ದಿನಗಳಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರೊಂದಿಗೆ ವಿವರವಾದ ಚರ್ಚೆಯ ನಂತರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.