ಅರುಣಾಚಲ ಪ್ರದೇಶದಲ್ಲಿ ಚೀತಾ ಹೆಲಿಕಾಪ್ಟರ್ ಪತನ: ಪೈಲಟ್ ಗಾಗಿ ಶೋಧ ಕಾರ್ಯಾಚರಣೆ

ಭಾರತೀಯ ಸೇನಾಯ 'ಚೀತಾ' ಹೆಲಿಕಾಪ್ಟರ್ ಇಂದು ಬೆಳಿಗ್ಗೆ ಅರುಣಾಚಲ ಪ್ರದೇಶದ ಬೊಮ್ಡಿಲಾ ಬಳಿ ಪತನಗೊಂಡಿದ್ದು ಪೈಲಟ್ ಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಭಾರತೀಯ ಸೇನಾಯ 'ಚೀತಾ' ಹೆಲಿಕಾಪ್ಟರ್ ಇಂದು ಬೆಳಿಗ್ಗೆ ಅರುಣಾಚಲ ಪ್ರದೇಶದ ಬೊಮ್ಡಿಲಾ ಬಳಿ ಪತನಗೊಂಡಿದ್ದು ಪೈಲಟ್ ಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

ಚೀತಾ ಹೆಲಿಕಾಪ್ಟರ್ ಇಂದು ಬೆಳಗ್ಗೆ 09:15ರ ಸುಮಾರಿಗೆ ಕಾರ್ಯಾಚರಣೆ ಹಾರಾಟ ಪ್ರಾರಂಭಿಸಿತ್ತು. ಸ್ವಲ್ಪ ಸಮಯದ ನಂತರ ಹೆಲಿಕಾಪ್ಟರ್ ATC ಸಂಪರ್ಕವನ್ನು ಕಳೆದುಕೊಂಡಿತು. ನಂತರ ಬೋಮ್ಡಿಲಾ ಪಶ್ಚಿಮದ ಮಂಡ್ಲಾ ಬಳಿ ಪತನಗೊಂಡಿದೆ ಎಂದು ವರದಿಯಾಗಿದೆ. ಸದ್ಯ ಪೈಲಟ್ ಗಳಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

2022ರಲ್ಲಿ ತವಾಂಗ್‌ನಲ್ಲಿ ಹೆಲಿಕಾಪ್ಟರ್ ಒಂದು ಪತನಗೊಂಡಿತ್ತು
ಅರುಣಾಚಲ ಪ್ರದೇಶದಲ್ಲಿ ಚೀತಾ ಹೆಲಿಕಾಪ್ಟರ್ ಬಲಿಯಾಗುತ್ತಿರುವುದು ಇದೇ ಮೊದಲಲ್ಲ, 2022ರ ಅಕ್ಟೋಬರ್‌ನಲ್ಲಿ ತವಾಂಗ್‌ನಲ್ಲಿ ಇದೇ ರೀತಿಯ ಘಟನೆ ಸಂಭವಿಸಿತ್ತು. ಅಂದು ಹೆಲಿಕಾಪ್ಟರ್ ನಲ್ಲಿದ್ದ ಇಬ್ಬರು ಪೈಲಟ್‌ಗಳ ಪೈಕಿ ಒಬ್ಬರು ಸಾವನ್ನಪ್ಪಿದರು. ಪೈಲಟ್ ಕರ್ನಲ್ ಸೌರಭ್ ಯಾದವ್ ಅವರು ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com