ರಾಜಸ್ಥಾನದಲ್ಲಿ 19 ಹೊಸ ಜಿಲ್ಲೆಗಳು, 3 ಹೊಸ ವಿಭಾಗಗಳನ್ನು ಘೋಷಿಸಿದ ಸಿಎಂ ಗೆಹ್ಲೋಟ್

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ರಾಜ್ಯದಲ್ಲಿ 19 ಹೊಸ ಜಿಲ್ಲೆಗಳು ಮತ್ತು ಮೂರು ಹೊಸ ವಿಭಾಗಗಳನ್ನು ರಚಿಸಲು ತಮ್ಮ ಸರ್ಕಾರ ನಿರ್ಧರಿಸಿದೆ ಎಂದು ಶುಕ್ರವಾರ ಘೋಷಿಸಿದ್ದಾರೆ.
ಅಶೋಕ್ ಗೆಹ್ಲೋಟ್
ಅಶೋಕ್ ಗೆಹ್ಲೋಟ್

ಜೈಪುರ: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ರಾಜ್ಯದಲ್ಲಿ 19 ಹೊಸ ಜಿಲ್ಲೆಗಳು ಮತ್ತು ಮೂರು ಹೊಸ ವಿಭಾಗಗಳನ್ನು ರಚಿಸಲು ತಮ್ಮ ಸರ್ಕಾರ ನಿರ್ಧರಿಸಿದೆ ಎಂದು ಶುಕ್ರವಾರ ಘೋಷಿಸಿದ್ದಾರೆ.

2008ರ ನಂತರ ಇದೇ ಮೊದಲ ಬಾರಿಗೆ ಹೊಸ ಜಿಲ್ಲೆಗಳನ್ನು ರಚಿಸಲಾಗುತ್ತಿದ್ದು, ರಾಜ್ಯದಲ್ಲಿ ಜಿಲ್ಲೆಗಳ ಸಂಖ್ಯೆ 50ಕ್ಕೆ ಏರಿಕೆಯಾಗಿದೆ.

ಇಂದು ರಾಜಸ್ಥಾನ ವಿಧಾನಸಭೆಯಲ್ಲಿ ಗೆಹ್ಲೋಟ್ ಅವರು ರಾಜ್ಯದಲ್ಲಿ 19 ಹೊಸ ಜಿಲ್ಲೆಗಳು ಮತ್ತು ಮೂರು ಹೊಸ ವಿಭಾಗಗಳನ್ನು ರಚಿಸುವುದಾಗಿ ಘೋಷಣೆ ಮಾಡಿದರು. ನಂತರ 2023-24ನೇ ಸಾಲಿನ ಬಜೆಟ್ ಅನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು.

ಹೊಸ ಜಿಲ್ಲೆಗಳ ರಚನೆ ಕುರಿತು ಅಧ್ಯಯನ ನಡೆಸಲು ಉನ್ನತ ಮಟ್ಟದ ಸಮಿತಿ ರಚಿಸಲಾಗಿತ್ತು. ಈ ಸಮಿತಿ ರಾಜ್ಯ ಸರ್ಕಾರಕ್ಕೆ ವರದಿ ನೀಡಿದೆ ಎಂದರು.

ಬನ್ಸ್ವಾರಾ, ಪಾಲಿ ಮತ್ತು ಸಿಕರ್‌ ಅನ್ನು ಮೂರು ಹೊಸ ವಿಭಾಗಗಳಾಗಿ ರಚಿಸಲಾಗವುದು ಎಂದು ರಾಜಸ್ಥಾನ ಸಿಎಂ ಹೇಳಿದರು.

ಹೊಸ ಜಿಲ್ಲೆಗಳು ಮತ್ತು ವಿಭಾಗಗಳಿಗೆ ಮೂಲಸೌಕರ್ಯ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಯ ಮೊದಲ ಹಂತದ ಅನುಷ್ಠಾನಕ್ಕಾಗಿ 2,000 ಕೋಟಿ ರೂ. ನೀಡುವುದಾಗಿ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com