ಚಾರ್ಟರ್ ವಿಮಾನ ಪತನ: ಇಬ್ಬರು ಪೈಲಟ್ ಗಳು ಸಾವು; 100 ಅಡಿ ಆಳದಲ್ಲಿ ಅವಶೇಷಗಳು ಪತ್ತೆ!
ಮಧ್ಯಪ್ರದೇಶದ ಬಾಲಘಾಟ್‌ನಲ್ಲಿ ಚಾರ್ಟರ್ ವಿಮಾನವೊಂದು ಪತನಗೊಂಡಿದ್ದು ವಿಮಾನದ ಪೈಲಟ್ ಮತ್ತು ಟ್ರೈನಿ ಪೈಲಟ್ ಇಬ್ಬರೂ ಮೃತಪಟ್ಟಿದ್ದಾರೆ. ಬಂಡೆಗಳ ನಡುವೆ ಒಬ್ಬರು ದೇಹ ಉರಿಯುತ್ತಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ. ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.
Published: 18th March 2023 09:25 PM | Last Updated: 18th March 2023 09:25 PM | A+A A-

ವಿಮಾನ ಪತನದ ದೃಶ್ಯ
ಮಧ್ಯಪ್ರದೇಶದ ಬಾಲಘಾಟ್‌ನಲ್ಲಿ ಚಾರ್ಟರ್ ವಿಮಾನವೊಂದು ಪತನಗೊಂಡಿದ್ದು ವಿಮಾನದ ಪೈಲಟ್ ಮತ್ತು ಟ್ರೈನಿ ಪೈಲಟ್ ಇಬ್ಬರೂ ಮೃತಪಟ್ಟಿದ್ದಾರೆ. ಬಂಡೆಗಳ ನಡುವೆ ಒಬ್ಬರು ದೇಹ ಉರಿಯುತ್ತಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ. ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಬಾಲಾಘಾಟ್ ಜಿಲ್ಲೆಯ ಲಾಂಜಿ ಮತ್ತು ಕಿರ್ನಾಪುರ ನಡುವಿನ ಭಕ್ಕುಟೋಲಾ-ಕೋಸ್ಮಾರಾ ಬೆಟ್ಟದಲ್ಲಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಟ್ರೈನಿ ಪೈಲಟ್ ರುಕಾಶಂಕ ವರ್ಸುಕ ಮತ್ತು ಪೈಲಟ್ ಮೋಹಿತ್ ಸಾವನ್ನಪ್ಪಿದ್ದಾರೆ ಎಂದು ಎಟಿಸಿ ಗೊಂಡಿಯಾ ಎಜಿಎಂ ಕಮಲೇಶ್ ಮೆಶ್ರಮ್ ಹೇಳಿದ್ದಾರೆ.
ಈ ವಿಮಾನವು ತರಬೇತಿ ವಿಮಾನವಾಗಿದ್ದು, ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯ ಬಿರ್ಸಿ ಏರ್‌ಸ್ಟ್ರಿಪ್‌ನಿಂದ ಹಾರಿದೆ ಎಂದು ಬಾಲಘಾಟ್ ಎಸ್‌ಪಿ ಸಮೀರ್ ಸೌರಭ್ ಹೇಳಿದ್ದಾರೆ. ಈ ಸ್ಥಳವು ಬಾಲಘಾಟ್ ಜಿಲ್ಲಾ ಕೇಂದ್ರದಿಂದ ಸುಮಾರು 40 ಕಿ.ಮೀ ದೂರದಲ್ಲಿದೆ. ಟೆಕ್ ಆಫ್ ಆದ 15 ನಿಮಿಷಗಳ ಬಳಿಕ ಮಧ್ಯಾಹ್ನ 3.20ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಸದ್ಯ ರಕ್ಷಣಾ ತಂಡ ಅಲ್ಲಿಗೆ ತಲುಪಿದ್ದು ಅಪಘಾತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ.
ಇದನ್ನೂ ಓದಿ: ಅರುಣಾಚಲ ಪ್ರದೇಶದಲ್ಲಿ ಚೀತಾ ಹೆಲಿಕಾಪ್ಟರ್ ಪತನ: ಇಬ್ಬರು ಪೈಲಟ್ ಸಾವು!
ಬಾಲಾಘಾಟ್ ಜಿಲ್ಲೆಯಲ್ಲಿ ವಿಮಾನ ಬಿದ್ದ ಸ್ಥಳದಲ್ಲಿ ಎರಡು ಕಡೆ ಪರ್ವತಗಳಿವೆ. ಪರ್ವತಗಳ ಮಧ್ಯದಲ್ಲಿರುವ 100 ಅಡಿ ಆಳದ ಕಮರಿಯಲ್ಲಿ ವಿಮಾನದ ಅವಶೇಷಗಳು ಪತ್ತೆಯಾಗಿವೆ. ದಟ್ಟ ಅರಣ್ಯ ಮತ್ತು ಗುಡ್ಡಗಾಡು ಪ್ರದೇಶವಾದ್ದರಿಂದ ರಕ್ಷಣಾ ತಂಡ ಹಾಗೂ ಅಧಿಕಾರಿಗಳು ಸ್ಥಳಕ್ಕೆ ತಲುಪಲು ಸಮಸ್ಯೆ ಎದುರಿಸುತ್ತಿದ್ದಾರೆ. ಅಪಘಾತದ ಸ್ಥಳವನ್ನು ತಲುಪಲು ಸುಮಾರು 7 ಕಿ.ಮೀ ಅರಣ್ಯ ಮತ್ತು ಪರ್ವತ ಮಾರ್ಗವನ್ನು ಕಾಲ್ನಡಿಗೆಯಲ್ಲಿ ಕ್ರಮಿಸಬೇಕಾಗಿದೆ. ಅಪಘಾತದ ನಂತರ, ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯ ಎಸ್ಪಿ, ವೈದ್ಯಕೀಯ ತಂಡದೊಂದಿಗೆ ಹಾಕ್ ಫೋರ್ಸ್ ಜವಾನರು ಸ್ಟ್ರೆಚರ್ನೊಂದಿಗೆ ಸ್ಥಳಕ್ಕೆ ತೆರಳಿದ್ದಾರೆ.
ಪೈಲಟ್‌ಗಳಿಗೆ ಮಹಾರಾಷ್ಟ್ರದ ಗೊಂಡಿಯಾದಲ್ಲಿರುವ ಬಿರ್ಸಿ ಏರ್‌ಸ್ಟ್ರಿಪ್‌ನಲ್ಲಿ ತರಬೇತಿ ನೀಡಲಾಗುತ್ತದೆ. ಅನೇಕ ಬಾರಿ ಇಲ್ಲಿಂದ ಮಧ್ಯಪ್ರದೇಶದ ಗಡಿಯತ್ತ ವಿಮಾನಗಳು ಹಾರುತ್ತವೆ. 2017ರ ಏಪ್ರಿಲ್‌ನಲ್ಲಿ ಬಾಲಘಾಟ್ ಜಿಲ್ಲೆಯ ಖೈರ್ಲಾಂಜಿ ತಹಸಿಲ್‌ನ ಲಾವಣಿ ಪುರ ಗ್ರಾಮದಲ್ಲಿ ತರಬೇತಿ ವಿಮಾನ ಪತನಗೊಂಡಿತ್ತು. ಆಗ ಎಟಿಸಿ (ಏರ್ ಟ್ರಾಫಿಕ್ ಕಂಟ್ರೋಲ್) ಜೊತೆಗಿನ ವಿಮಾನದ ಸಂಪರ್ಕ ಕಳೆದುಕೊಂಡಿತ್ತು. ಇದರ ನಂತರ, ವಿಮಾನವು ರೋಪ್‌ವೇಯ ಮರ ಮತ್ತು ಟವರ್‌ಗೆ ಡಿಕ್ಕಿ ಹೊಡೆದು ನದಿಗೆ ಬಿದ್ದಿತು.
A flying instructor & a trainee female co-pilot of Indira Gandhi Rashtriya Udan Academy IGRUA #Gondia were killed after an aircraft they were flying crashed in the dense forest of village Bhakkutola, Kirnapur near #Balaghat in Madhya Pradesh. Cause of the #crash are yet unknown. pic.twitter.com/BaOvEzlXQq
— Praveen Mudholkar (@JournoMudholkar) March 18, 2023