'ಭಾರತದ ನೈತಿಕತೆ ಕುಗ್ಗಿಸಿದ್ದಾರೆ': ವಿದೇಶಿ ನೆಲದಲ್ಲಿ ರಾಹುಲ್ ಗಾಂಧಿ ಟೀಕೆಗೆ ಜೈಶಂಕರ್ ತಿರುಗೇಟು

ಇತ್ತೀಚೆಗಷ್ಟೇ ಬ್ರಿಟನ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರಾಹುಲ್‌ ಗಾಂಧಿ ಚೀನಾದ ಕುರಿತು ಮಾಡಿದ ಟೀಕೆಗಳಿಗಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌ ಜೈಶಂಕರ್‌ ಶನಿವಾರ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್‌ ನಾಯಕ ಭಾರತದ ಬಗ್ಗೆ ತಿರಸ್ಕಾರ ಮಾತನಾಡುತ್ತಿದ್ದು, ಚೀನಾದ ಮೇಲೆ ಜೊಲ್ಲು ಸುರಿಸುತ್ತಿರುವುದನ್ನು ಕಂಡು ಬೇಸರವಾಗಿದೆ ಎಂದಿದ್ದಾರೆ.
ಎಸ್ ಜೈಶಂಕರ್ vs ರಾಹುಲ್ ಗಾಂಧಿ
ಎಸ್ ಜೈಶಂಕರ್ vs ರಾಹುಲ್ ಗಾಂಧಿ

ನವದೆಹಲಿ: ಇತ್ತೀಚೆಗಷ್ಟೇ ಬ್ರಿಟನ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರಾಹುಲ್‌ ಗಾಂಧಿ ಚೀನಾದ ಕುರಿತು ಮಾಡಿದ ಟೀಕೆಗಳಿಗಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌ ಜೈಶಂಕರ್‌ ಶನಿವಾರ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್‌ ನಾಯಕ ಭಾರತದ ಬಗ್ಗೆ ತಿರಸ್ಕಾರ ಮಾತನಾಡುತ್ತಿದ್ದು, ಚೀನಾದ ಮೇಲೆ ಜೊಲ್ಲು ಸುರಿಸುತ್ತಿರುವುದನ್ನು ಕಂಡು ಬೇಸರವಾಗಿದೆ ಎಂದಿದ್ದಾರೆ.
 
ಇಂಡಿಯಾ ಟುಡೇ ಕಾನ್‌ಕ್ಲೇವ್‌ನಲ್ಲಿ ನಡೆದ ಸಂವಾದಾತ್ಮಕ ಅಧಿವೇಶನದಲ್ಲಿ ಪಾಲ್ಗೊಂಡು ಮಾತನಾಡಿದ ಎಸ್ ಜೈಶಂಕರ್, 'ಯಾರೋ ಚೀನಾದ ಮೇಲೆ ಜೊಲ್ಲು ಸುರಿಸುವುದನ್ನು ಭಾರತದ ಪ್ರಜೆಯಾಗಿ ನೋಡುವುದು ಕಷ್ಟವಾಗುತ್ತಿದೆ. ಪಾಂಡಾವೊಂದು ಚೀನಾದ ಗಿಡುಗವಾಗಲು ಪ್ರಯತ್ನಿಸಿದರೆ ಅದು ಹಾರುವುದಿಲ್ಲ ಎಂದು ಹೇಳಿದರು.

ಅಮೆರಿಕ ಮೂಲದ ಲೇಖಕ ಮೈಕೆಲ್ ಪಿಲ್ಸ್‌ಬರಿ ಹೇಳಿಕೆಗಳನ್ನು ಉಲ್ಲೇಖಿಸಿದ ಸಚಿವರು, "ಪಾಂಡಾ ಹಗ್ಗರ್‌ಗಳು ಚೀನಾ ಗಿಡುಗಗಳಾಗಿರಲು ಪ್ರಯತ್ನಿಸಿದಾಗ ಅದು ಹಾರುವುದಿಲ್ಲ. ರಾಹುಲ್ ಗಾಂಧಿ ಅವರು ಬ್ರಿಟನ್ ನಲ್ಲಿದ್ದಾಗ ಹೇಳಿದ ಕೆಲವನ್ನು ನಾನು ಕೂಡ ಇತರರಂತೆ ನೋಡಿದ್ದೇನೆ. ನಿಸ್ಸಂಶಯವಾಗಿ, ಅದರಲ್ಲಿ ಬಹಳಷ್ಟು ರಾಜಕೀಯವಾಗಿದೆ. ಯಾರಾದರೂ ಚೀನಾದ ಮೇಲೆ ಜೊಲ್ಲು ಸುರಿಸುತ್ತಿರುವುದನ್ನು ಮತ್ತು ಭಾರತದ ಬಗ್ಗೆ ತಿರಸ್ಕಾರ ಮಾಡುವುದನ್ನು ನಾನು ನೋಡಿದಾಗ ಭಾರತದ ಪ್ರಜೆಯಾಗಿ ನನಗೆ ಗೊಂದಲವಾಗುತ್ತದೆ ಎಂದು ಜೈಶಂಕರ್ ಹೇಳಿದರು. 

ಪ್ರಶ್ನೆಯೊಂದಕ್ಕೆ ಉತ್ತರಿಸಿದ ವಿದೇಶಾಂಗ ಸಚಿವರು, ಚೀನಾದ ಉತ್ಪಾದನಾ ಸಾಮರ್ಥ್ಯಗಳಿಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿಯವರ ಹೇಳಿಕೆಗಳನ್ನು ಸಹ ಉಲ್ಲೇಖಿಸಿದ್ದಾರೆ. "ಅವರು ಚೀನಾ ಹೇಗೆ ಶ್ರೇಷ್ಠ ತಯಾರಕರು ಎಂದು ಮೆಚ್ಚುಗೆಯಿಂದ ಮಾತನಾಡಿದ್ದಾರೆ. ಹೌದು ಚೀನಾ ಅದ್ಭುತ ಕೆಲಸ ಮಾಡಿದೆ. ಆದರೆ ಭಾರತದಲ್ಲಿ ಉತ್ಪಾದನೆಗೆ ಬಂದಾಗ, ನಾವು ಸಾಧ್ಯವಿರುವ ಎಲ್ಲ ರೀತಿಯಲ್ಲಿ ಅದನ್ನು ಕಡಿಮೆ ಮಾಡಿದ್ದೇವೆ. ಮೇಕ್ ಇನ್ ಇಂಡಿಯಾ' ಕೆಲಸ ಮಾಡುವುದಿಲ್ಲ ಎಂದು ಅವರು ಹೇಳುತ್ತಾರೆ. ಅಂದರೆ ನೀವು ಕೋವಾಕ್ಸಿನ್ ಅನ್ನು ತಯಾರಿಸಿದಾಗ ಕಾಂಗ್ರೆಸ್ ಪಕ್ಷವು ಕೋವಾಕ್ಸಿನ್ ಕೆಲಸ ಮಾಡುವುದಿಲ್ಲ ಎಂದು ಹೇಳುತ್ತಿತ್ತು. ಇಂತಹ ಹೇಳಿಕೆಗಳಿಂದ ಕಾಂಗ್ರೆಸ್ ನಾಯಕರು ಭಾರತದ ರಾಷ್ಟ್ರೀಯ ನೈತಿಕತೆಯನ್ನು ಕುಗ್ಗಿಸಿದ್ದಾರೆ ಎಂದು ಸಚಿವರು ಕಿಡಿಕಾರಿದರು.

ಅಂತೆಯೇ 'ಯಾರೋ ರಾಷ್ಟ್ರೀಯ ನೈತಿಕತೆಯನ್ನು ಯಾಕೆ ಈ ರೀತಿ ಕುಗ್ಗಿಸುತ್ತಿದ್ದೀರಿ ಎಂದು ಕೇಳುತ್ತೇನೆ. ಆರ್ಥಿಕ ಮಾತ್ರವಲ್ಲ, ಈಗ ನಾವು ಭದ್ರತೆಯ ಬಗ್ಗೆಯೂ ನೋಡುತ್ತೇವೆ. ಅದೇ ಭಾಷಣದಲ್ಲಿ ಅವರು 'ಬೆಲ್ಟ್ ಅಂಡ್ ರೋಡ್' ಉಪಕ್ರಮವನ್ನು ಶ್ಲಾಘಿಸಿದರು. ಚೀನಾದ ‘ಬೆಲ್ಟ್ ಅಂಡ್ ರೋಡ್’ ಉಪಕ್ರಮವು ಪಾಕ್ ಆಕ್ರಮಿತ ಕಾಶ್ಮೀರದ ಮೂಲಕ ಹಾದುಹೋಗುತ್ತದೆ, ಇದು ನಮ್ಮ ರಾಷ್ಟ್ರೀಯ ಸಮಗ್ರತೆ ಮತ್ತು ಸಾರ್ವಭೌಮತ್ವದ ಉಲ್ಲಂಘನೆಯಾಗಿದೆ. ಆದರೆ ರಾಹುಲ್ ಗಾಂಧಿ ಅದರ ಬಗ್ಗೆ ಒಂದು ಮಾತನ್ನೂ ಹೇಳಲಿಲ್ಲ ಎಂದು ಕಿಡಿಕಾರಿದರು.

ಈ ತಿಂಗಳ ಆರಂಭದಲ್ಲಿ ಲಂಡನ್‌ನಲ್ಲಿ ಭಾರತೀಯ ಪತ್ರಕರ್ತರ ಸಂಘದ ಸದಸ್ಯರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ ಯಾರೂ ಭಾರತೀಯ ಪ್ರದೇಶವನ್ನು ಪ್ರವೇಶಿಸಿಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯು ವಾಸ್ತವ ನಿಯಂತ್ರಣ ರೇಖೆಯಲ್ಲಿ ತನ್ನ ಆಕ್ರಮಣವನ್ನು ಪುನರಾವರ್ತಿಸಲು ಚೀನಾಕ್ಕೆ ಆಹ್ವಾನವಾಗಿದೆ ಎಂದು ಹೇಳಿದ್ದರು.

ಮಿಲಿಟರಿ ಬೆದರಿಕೆಗಳನ್ನು ಭಾರತ ಹೇಗೆ ಎದುರಿಸಬೇಕು ಎಂದು ಕೇಳಿದಾಗ, ಬೆದರಿಕೆಯ ಸ್ವರೂಪಕ್ಕೆ ಭಾರತವು ಮಿಲಿಟರಿಯಾಗಿ ಪ್ರತಿಕ್ರಿಯಿಸುವ ಅಗತ್ಯವಿದೆ ಎಂದು ಗಾಂಧಿ ಹೇಳಿದ್ದರು. ಜೈಶಂಕರ್ ಮತ್ತು ಸರ್ಕಾರವು ಚೀನಾದಿಂದ ನಿಜವಾದ ಬೆದರಿಕೆಯನ್ನು ಅರ್ಥಮಾಡಿಕೊಂಡಿಲ್ಲ. ಪ್ರಧಾನಿಯವರ ಹೇಳಿಕೆಯು ಬೆದರಿಕೆಯ ಗ್ರಹಿಕೆಯ ಕೊರತೆಯನ್ನು ಪ್ರದರ್ಶಿಸುತ್ತದೆ ಎಂದಿದ್ದರು ರಾಹುಲ್ ರಾಹುಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಜೈಶಂಕರ್, “ಯಾರೋ ಚೀನಾದ ಮೇಲೆ ಜೊಲ್ಲು ಸುರಿಸುತ್ತಿರುವುದನ್ನು ಮತ್ತು ಭಾರತದ ಬಗ್ಗೆ ತಿರಸ್ಕಾರ ಮಾಡುತ್ತಿರುವುದನ್ನು ನೋಡಿದರೆ  ಭಾರತದ ಪ್ರಜೆಯಾಗಿ ನನಗೆ ಕಷ್ಟವಾಗುತ್ತಿದೆ ಎಂದು ಹೇಳಿದರು. ಯುಕೆಯಲ್ಲಿ ರಾಹುಲ್ ಗಾಂಧಿಯವರ ಇತ್ತೀಚಿನ ಭಾಷಣದ ಕುರಿತು ಕೇಳಿದ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com