ಕ್ರಿಕೆಟ್ ಆಡುತ್ತಿದ್ದಾಗ ಹೃದಯಾಘಾತಕ್ಕೆ ವ್ಯಕ್ತಿ ಬಲಿ: ಕಳೆದ 45 ದಿನಗಳಲ್ಲಿ 8ನೇ ಸಾವು!
ರಾಜ್‌ಕೋಟ್‌ನಲ್ಲಿ ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಿದ್ದಾಗ ವ್ಯಕ್ತಿಯೋರ್ವ ದಿಢೀರ್ ಕುಸಿದು ಬಿದ್ದಿದ್ದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕಳೆದ ಒಂದೂವರೆ ತಿಂಗಳಲ್ಲಿ ಗುಜರಾತ್‌ನ ಕ್ರಿಕೆಟ್ ಮೈದಾನದಲ್ಲಿ ಹೃದಯಾಘಾತದಿಂದ ಮೃತಪಟ್ಟ ಪ್ರಕರಣ 8 ಆಗಿದೆ.
Published: 19th March 2023 07:17 PM | Last Updated: 19th March 2023 07:17 PM | A+A A-

ಮೃತ ಮಯೂರ್
ರಾಜ್‌ಕೋಟ್: ರಾಜ್‌ಕೋಟ್‌ನಲ್ಲಿ ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಿದ್ದಾಗ ವ್ಯಕ್ತಿಯೋರ್ವ ದಿಢೀರ್ ಕುಸಿದು ಬಿದ್ದಿದ್ದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕಳೆದ ಒಂದೂವರೆ ತಿಂಗಳಲ್ಲಿ ಗುಜರಾತ್‌ನ ಕ್ರಿಕೆಟ್ ಮೈದಾನದಲ್ಲಿ ಹೃದಯಾಘಾತದಿಂದ ಮೃತಪಟ್ಟ ಪ್ರಕರಣ 8 ಆಗಿದೆ.
ಗುಜರಾತ್‌ನ ರಾಜ್‌ಕೋಟ್‌ನ ಕ್ರಿಕೆಟ್ ಮೈದಾನದಲ್ಲಿ 45 ವರ್ಷದ ಮಯೂರ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಸ್ನೇಹಿತರ ಜೊತೆ ಕ್ರಿಕೆಟ್ ಆಡಲು ಹೋಗಿದ್ದ ಈತ ದಿಢೀರ್ ಅಂತ ನೆಲಕ್ಕೆ ಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅಷ್ಟರಲ್ಲಾಗಲೇ ಅವರು ಪ್ರಾಣ ಕಳೆದುಕೊಂಡಿದ್ದರು.
ಇದನ್ನೂ ಓದಿ: ದೆಹಲಿಯ ಮೆಟ್ರೋ ನಿರ್ಮಾಣ ಸ್ಥಳದ ಬಳಿ ಮಹಿಳೆಯ ಕತ್ತರಿಸಿದ ದೇಹದ ಭಾಗಗಳು ಪತ್ತೆ!
ಮಯೂರ್ ಒಬ್ಬ ಅಕ್ಕಸಾಲಿಗನಾಗಿದ್ದು, ಆತನೇ ಮನೆಯ ಆಧಾರಸ್ತಂಭವಾಗಿದ್ದನ್ನು ಎಂದು ಸಹಚರರು ಹೇಳಿದ್ದಾರೆ. ಮಯೂರ್ ಯಾವುದೇ ರೀತಿಯ ನಶೆ ಸೇವಿಸಿಲ್ಲ ಎಂದು ಆತನ ಸಂಬಂಧಿಕರು ಹೇಳಿದ್ದಾರೆ. ಮಯೂರ್ ಹಠಾತ್ ಸಾವಿನಿಂದಾಗಿ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
ಈ ಹಿಂದೆ ಗುಜರಾತ್‌ನ ಅಹಮದಾಬಾದ್‌ನಲ್ಲಿ ಕ್ರಿಕೆಟ್ ಪಂದ್ಯದ ವೇಳೆ ಜಿಎಸ್‌ಟಿ ಉದ್ಯೋಗಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಜಿಎಸ್‌ಟಿ ಉದ್ಯೋಗಿ ಹಾಗೂ ಜಿಲ್ಲಾ ಪಂಚಾಯಿತಿ ನೌಕರರ ನಡುವೆ ಪಂದ್ಯ ನಡೆಯುತ್ತಿತ್ತು. ಬೌಲಿಂಗ್ ಮಾಡುವಾಗ ಜಿಎಸ್‌ಟಿ ಉದ್ಯೋಗಿಯ ಆರೋಗ್ಯ ಹದಗೆಟ್ಟಿದ್ದು, ನೆಲಕ್ಕೆ ಬಿದ್ದು ಸಾವನ್ನಪ್ಪಿದ್ದನು.