ಮೇಘಾಲಯ ವಿಧಾನಸಭೆಯಲ್ಲಿ ರಾಜ್ಯಪಾಲರ ಹಿಂದಿ ಭಾಷಣಕ್ಕೆ ವಿಪಿಪಿ ಶಾಸಕರಿಂದ ವಿರೋಧ, ಸಭಾತ್ಯಾಗ

ಮೇಘಾಲಯ ರಾಜ್ಯಪಾಲ ಫಾಗು ಚೌಹಾಣ್ ಅವರು ಸದನವನ್ನು ಉದ್ದೇಶಿಸಿ ಹಿಂದಿಯಲ್ಲಿ ಭಾಷಣ ಮಾಡಿದ್ದನ್ನು ವಿರೋಧಿಸಿ ಮೇಘಾಲಯದಲ್ಲಿ ಪ್ರತಿಪಕ್ಷ ವಾಯ್ಸ್ ಆಫ್ ಪೀಪಲ್ ಪಾರ್ಟಿ(ವಿಪಿಪಿ)ಯ ಶಾಸಕರು ಸೋಮವಾರ ಸಭಾತ್ಯಾಗ...
ಫಾಗು ಚೌಹಾಣ್
ಫಾಗು ಚೌಹಾಣ್

ಶಿಲ್ಲಾಂಗ್: ಮೇಘಾಲಯ ರಾಜ್ಯಪಾಲ ಫಾಗು ಚೌಹಾಣ್ ಅವರು ಸದನವನ್ನು ಉದ್ದೇಶಿಸಿ ಹಿಂದಿಯಲ್ಲಿ ಭಾಷಣ ಮಾಡಿದ್ದನ್ನು ವಿರೋಧಿಸಿ ಮೇಘಾಲಯದಲ್ಲಿ ಪ್ರತಿಪಕ್ಷ ವಾಯ್ಸ್ ಆಫ್ ಪೀಪಲ್ ಪಾರ್ಟಿ(ವಿಪಿಪಿ)ಯ ಶಾಸಕರು ಸೋಮವಾರ ಸಭಾತ್ಯಾಗ ಮಾಡಿದರು.

ವಿಧಾನಸಭೆ ಸ್ಪೀಕರ್ ಥಾಮಸ್ ಎ ಸಂಗ್ಮಾ ಮತ್ತು ಮುಖ್ಯಮಂತ್ರಿ ಕಾನ್ರಾಡ್ ಕೆ ಸಂಗ್ಮಾ ಅವರು ಮಧ್ಯಪ್ರವೇಶಿಸಿ ರಾಜ್ಯಪಾಲರಿಗೆ ಇಂಗ್ಲಿಷ್‌ನಲ್ಲಿ ಓದುವುದು ಕಷ್ಟ ಎಂಬ ಕಾರಣದಿಂದ ಅನುವಾದಿತ ಭಾಷಣವನ್ನು ವಿತರಿಸಲಾಗಿದೆ ಎಂದು ವಿವರಿಸಿದ ಹೊರತಾಗಿಯೂ ವಿಪಿಪಿ ಅಧ್ಯಕ್ಷ ಅರ್ಡೆಂಟ್ ಬಸಯಾವ್‌ಮೊಯಿತ್ ಮತ್ತು ಪಕ್ಷದ ಇತರ ಮೂವರು ಶಾಸಕರು ಸಭಾತ್ಯಾಗ ಮಾಡಿದರು.

"ಹಿಂದಿ ಮಾತನಾಡುವ ರಾಜ್ಯಪಾಲರನ್ನು ನಮ್ಮ ಬಳಿಗೆ ಕಳುಹಿಸುತ್ತಿದ್ದಾರೆ. ಅವರು ಏನು ಮಾತನಾಡುತ್ತಿದ್ದಾರೆಂದು ನಮಗೆ ಅರ್ಥವಾಗುತ್ತಿಲ್ಲ. ಆದ್ದರಿಂದ ನಾವು ವಾಕ್‌ಔಟ್ ಮಾಡುತ್ತೇವೆ" ಎಂದು ಅರ್ಡೆಂಟ್ ವಿಧಾನಸಭೆಯಲ್ಲಿ ಹೇಳಿದರು.

ಮೇಘಾಲಯ ವಿಧಾನಸಭೆಯ ಅಧಿಕೃತ ಭಾಷೆ ಇಂಗ್ಲಿಷ್ ಎಂದು ವಿರೋಧ ಪಕ್ಷದ ಶಾಸಕರು ಸಮರ್ಥಿಸಿಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com