ಅಮೃತ್ ಪಾಲ್ ಸಂಬಂಧಿ, ಇನ್ನೂ ನಾಲ್ವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯಿದೆಯಡಿ ಪ್ರಕರಣ
ಪಂಜಾಬ್ ಪೊಲೀಸರು ತೀವ್ರಗಾಮಿ ಅಮೃತ್ ಪಾಲ್ ಸಿಂಗ್ ನ ವಾರೀಸ್ ಪಂಜಾಬ್ ದೇ ಗೆ ಸಂಬಂಧಿಸಿದ ಐವರು ಸದಸ್ಯರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ) ಅಡಿ ಪ್ರಕರಣ ದಾಖಲಿಸಿದ್ದಾರೆ.
Published: 20th March 2023 06:20 PM | Last Updated: 20th March 2023 06:21 PM | A+A A-

ವಾರಿಸ್ ಪಂಜಾಬ್ ದೇ ಸಂಘಟನೆಯ ಸದಸ್ಯರ ಬಂಧನ (ಸಂಗ್ರಹ ಚಿತ್ರ)
ಚಂಡೀಗಢ: ಪಂಜಾಬ್ ಪೊಲೀಸರು ತೀವ್ರಗಾಮಿ ಅಮೃತ್ ಪಾಲ್ ಸಿಂಗ್ ನ ವಾರೀಸ್ ಪಂಜಾಬ್ ದೇ ಗೆ ಸಂಬಂಧಿಸಿದ ಐವರು ಸದಸ್ಯರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ) ಅಡಿ ಪ್ರಕರಣ ದಾಖಲಿಸಿದ್ದಾರೆ.
ಚಂಡೀಗಢದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಪಂಜಾಬ್ ಇನ್ಸ್ಪೆಕ್ಟರ್ ಜನರಲ್ ಸುಖಚೈನ್ ಸಿಂಗ್ ಗಿಲ್ ಅಮೃತ್ ಪಾಲ್ ಬಂಧನಕ್ಕೆ ಕಾರ್ಯಾಚರಣೆ ಮುಂದುವರೆದಿದೆ, ಆದಷ್ಟೂ ಶೀಘ್ರವೇ ಬಂಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ವಾರಿಸ್ ಪಂಜಾಬ್ ದೇ ಸಂಘಟನೆಯ ತೀವ್ರಗಾಮಿ ಶಕ್ತಿಗಳ ವಿರುದ್ಧದ ಕಾರ್ಯಾಚರಣೆಯಲ್ಲಿ 114 ಮಂದಿಯನ್ನು ಬಂಧಿಸಲಾಗಿದ್ದು 6 ಎಫ್ಐಆರ್ ಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: ಮೂರು ದಿನಗಳಿಂದ ಅಮೃತ್ ಪಾಲ್ ಗೆ ಹುಡುಕಾಟ: ಹೊಸ ಕೇಸು ದಾಖಲಿಸಿದ ಪಂಜಾಬ್ ಪೊಲೀಸರು
ಈ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳು ಐಎಸ್ಐ ದೃಷ್ಟಿಕೋನ ಹಾಗೂ ವಿದೇಶಿ ಆರ್ಥಿಕ ನೆರವಿನ ವಿಷಯಗಳಲ್ಲೂ ಶಂಕೆ ಹೊಂದಿದ್ದಾರೆ ಎಂದು ಗಿಲ್ ಹೇಳಿದ್ದಾರೆ.
ದಲ್ಜಿತ್ ಸಿಂಗ್ ಕಲ್ಸಿ, ಭಗವಂತ್ ಸಿಂಗ್, ಗುರ್ಮೀತ್ ಸಿಂಗ್ ಹಾಗೂ ಪ್ರಧಾನಮಂತ್ರಿ' ಬಜೆಕೆ ಅವರ ವಿರುದ್ಧ ಈ ಕಾಯ್ದೆಯನ್ನು ಜಾರಿ ಮಾಡಲಾಗಿದ್ದು, ಅಸ್ಸಾಂ ನಲ್ಲಿರುವ ದಿಬ್ರುಗಢ ಕೇಂದ್ರ ಕಾರಾಗೃಹಕ್ಕೆ ವರ್ಗಾಯಿಸಲಾಗಿದೆ ಎಂದು ಹೇಳಿದ್ದಾರೆ.
ಅಮೃತ್ ಪಾಲ್ ಸಂಬಂಧಿ ಹರ್ಜಿತ್ ಸಿಂಗ್ ಶನಿವಾರ ರಾತ್ರಿ ಶರಣಾಗಿದ್ದು, ಆತನ ವಿರುದ್ಧವೂ ಎನ್ಎಸ್ಎ ಕಾಯ್ದೆ ಜಾರಿ ಮಾಡಲಾಗಿದೆ ಎಂದು ಗಿಲ್ ಮಾಹಿತಿ ನೀಡಿದ್ದಾರೆ.