ರಮ್ಮಿ ಆಡಿ 15 ಲಕ್ಷ ನಷ್ಟ: ಎಸ್ ಬಿಐ ಉದ್ಯೋಗಿಯಿಂದ ಗ್ರಾಹಕರ 34 ಲಕ್ಷ ರೂ. ದುರುಪಯೋಗ; ಆರೋಪಿ ಬಂಧನ!

ಶಿಕ್ಷಣ ಸಾಲಕ್ಕಾಗಿ ವಿಮಾ ಪ್ರೀಮಿಯಂಗೆ 137 ಗ್ರಾಹಕರು ಪಾವತಿಸಿದ 34.10 ಲಕ್ಷ ರೂ.ಗಳನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ SBI ನ ಚಿಲ್ಲರೆ ಆಸ್ತಿಗಳು ಮತ್ತು ಸಣ್ಣ ಮತ್ತು ಮಧ್ಯಮ ಉದ್ಯಮಗಳ ನಗರ ಕ್ರೆಡಿಟ್ ಸೆಲ್ (RASMECCC) ಸಹಾಯಕ ವ್ಯವಸ್ಥಾಪಕನನ್ನು ಬಂಧಿಸಲಾಗಿದೆ.
ಯೋಗೇಶ್ವರ ಪಾಂಡಿಯನ್
ಯೋಗೇಶ್ವರ ಪಾಂಡಿಯನ್

ಚೆನ್ನೈ: ಶಿಕ್ಷಣ ಸಾಲಕ್ಕಾಗಿ ವಿಮಾ ಪ್ರೀಮಿಯಂಗೆ 137 ಗ್ರಾಹಕರು ಪಾವತಿಸಿದ 34.10 ಲಕ್ಷ ರೂ.ಗಳನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ SBI ನ ಚಿಲ್ಲರೆ ಆಸ್ತಿಗಳು ಮತ್ತು ಸಣ್ಣ ಮತ್ತು ಮಧ್ಯಮ ಉದ್ಯಮಗಳ ನಗರ ಕ್ರೆಡಿಟ್ ಸೆಲ್ (RASMECCC) ಸಹಾಯಕ ವ್ಯವಸ್ಥಾಪಕನನ್ನು ಬಂಧಿಸಲಾಗಿದೆ. 

ಆನ್‌ಲೈನ್ ರಮ್ಮಿ ಆಡುವ ಮೂಲಕ ಕಳೆದುಕೊಂಡಿದ್ದ 15 ಲಕ್ಷ ರೂಪಾಯಿಯನ್ನು ವಸೂಲಿ ಮಾಡಲು ಪ್ರಯತ್ನಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ವೆಲ್ಲೂರು ಪೊಲೀಸರ ಜಿಲ್ಲಾ ಅಪರಾಧ ವಿಭಾಗದ (ಡಿಸಿಬಿ) ಪ್ರಕಾರ, ವಿರುದುನಗರ ಮೂಲದ 38 ವರ್ಷದ ಎಂ ಯೋಗೇಶ್ವರ್ ಪಾಂಡಿಯನ್ ಜುಲೈ 2018ರಿಂದ ಕಟಪಾಡಿಯ ಗಾಂಧಿ ನಗರದಲ್ಲಿರುವ ಆರ್‌ಎಎಸ್‌ಎಂಇಸಿಸಿ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದರು.

ಶಿಕ್ಷಣ ಸಾಲಕ್ಕಾಗಿ ಕಟ್ಟಿದ್ದ ವಿಮಾ ಪ್ರೀಮಿಯಂ ಹಣ ಕಾಣೆಯಾದ ಬಗ್ಗೆ ದೂರು ಬಂದ ಬಳಿಕ, ಬ್ಯಾಂಕ್ ಏಪ್ರಿಲ್ 2022ರಲ್ಲಿ ಪಾಂಡಿಯನ್ ಅವರನ್ನು ಅಮಾನತುಗೊಳಿಸಿತು. ಅಲ್ಲದೆ ವಿಚಾರಣೆಯನ್ನು ಪ್ರಾರಂಭಿಸಿತು. ಪಾಂಡಿಯನ್ 137 ಗ್ರಾಹಕರಿಗೆ 34,10,622 ಲಕ್ಷ ರೂಪಾಯಿ ವಂಚನೆ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಡಿಸಿಬಿ ಮೂಲಗಳು ತಿಳಿಸಿವೆ.

ಪಾಂಡಿಯನ್ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೆನರಾ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾದಲ್ಲಿನ ತಮ್ಮ ವೈಯಕ್ತಿಕ ಖಾತೆಗಳಿಗೆ ವಂಚಿಸಿದ ಹಣವನ್ನು ವರ್ಗಾಯಿಸಿದ್ದ ಎಂದು ಡಿಸಿಬಿ ಮೂಲಗಳು ತಿಳಿಸಿವೆ. ಪಾಂಡಿಯನ್ ಆನ್‌ಲೈನ್‌ನಲ್ಲಿ ಜೂಜಾಟದಲ್ಲಿ 15 ಲಕ್ಷಕ್ಕೂ ಹೆಚ್ಚು ಹಣವನ್ನು ಕಳೆದುಕೊಂಡಿದ್ದರು. ನಷ್ಟವನ್ನು ಸರಿದೂಗಿಸಲು ಪಾಂಡಿಯನ್ ಹಣವನ್ನು ದುರುಪಯೋಗಪಡಿಸಿಕೊಂಡಿದ್ದರು. ಇನ್ನು ಪದೇ ಪದೇ ಜೂಜಾಟ ಮುಂದುವರಿಸಿ ಸಂಗ್ರಹವಾಗಿದ್ದ ಎಲ್ಲಾ ಹಣವನ್ನು ಕಳೆದುಕೊಂಡಿದ್ದಾನೆ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com