ತಮಿಳುನಾಡು ಬಜೆಟ್: ಮನೆಯ ಯಜಮಾನಿಗೆ 1,000 ರೂ. ನೆರವು, ಸೆಪ್ಟೆಂಬರ್ ನಿಂದ ಜಾರಿ
ಆಡಳಿತಾರೂಢ ಡಿಎಂಕೆ ಚುನಾವಣೆಯಲ್ಲಿ ನೀಡಿದ್ದ ಭರವಸೆಯಂತೆ ಕುಟುಂಬದ ಯಜಮಾನಿಗೆ ತಿಂಗಳ 1000 ರೂಪಾಯಿ ನೆರವು ನೀಡುವುದಾಗಿ ಸೋಮವಾರ ಬಜೆಟ್ ನಲ್ಲಿ ಘೋಷಿಸಿದ್ದು, ಈ ಯೋಜನೆಯನ್ನು ಸೆಪ್ಟೆಂಬರ್‌ನಲ್ಲಿ ಪ್ರಾರಂಭಿಸಲಾಗುವುದು...
Published: 20th March 2023 06:25 PM | Last Updated: 20th March 2023 06:25 PM | A+A A-

ಸಾಂದರ್ಭಿಕ ಚಿತ್ರ
ಚೆನ್ನೈ: ಆಡಳಿತಾರೂಢ ಡಿಎಂಕೆ ಚುನಾವಣೆಯಲ್ಲಿ ನೀಡಿದ್ದ ಭರವಸೆಯಂತೆ ಕುಟುಂಬದ ಯಜಮಾನಿಗೆ ತಿಂಗಳ 1000 ರೂಪಾಯಿ ನೆರವು ನೀಡುವುದಾಗಿ ಸೋಮವಾರ ಬಜೆಟ್ ನಲ್ಲಿ ಘೋಷಿಸಿದ್ದು, ಈ ಯೋಜನೆಯನ್ನು ಸೆಪ್ಟೆಂಬರ್‌ನಲ್ಲಿ ಪ್ರಾರಂಭಿಸಲಾಗುವುದು ಎಂದು ಹೇಳಿದೆ.
ಸೆಪ್ಟೆಂಬರ್ 15 ರಂದು ದ್ರಾವಿಡ ಧೀಮಂತ ಮತ್ತು ಪಕ್ಷದ ಸಂಸ್ಥಾಪಕ, ದಿವಂಗತ ಸಿಎನ್ ಅಣ್ಣಾದೊರೈ ಅವರ ಜನ್ಮದಿನದಂದು ಈ ಯೋಜನೆ ಜಾರಿಗೊಳಿಸಲು ತಮಿಳುನಾಡು ಸರ್ಕಾರ ನಿರ್ಧರಿಸಿದೆ. 2024ರ ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಂತೆ ಪ್ರಮುಖ ಯೋಜನೆ ಜಾರಿಗೊಳಿಸುವ ಮೂಲಕ ಡಿಎಂಕೆ ತಮಿಳುನಾಡಿನ ಎಲ್ಲಾ 39 ಸ್ಥಾನಗಳು ಗೆಲ್ಲಲು ತಂತ್ರ ರೂಪಿಸಿದೆ.
ಇದನ್ನು ಓದಿ: 'ನನ್ನ ಮಗನಿಗೆ 18 ವರ್ಷ ತುಂಬಿದೆ': ಗರ್ಲ್ಫ್ರೆಂಡ್ ಜತೆ ಪುತ್ರನ ಫೋಟೋಗೆ ಉದಯನಿಧಿ ಸ್ಟಾಲಿನ್ ಪ್ರತಿಕ್ರಿಯೆ
ತಮಿಳುನಾಡು ಹಣಕಾಸು ಸಚಿವ ಪಳನಿವೇಲ್ ತ್ಯಾಗರಾಜನ್ ಅವರು ಇಂದು ವಿಧಾನಸಭೆಯಲ್ಲಿ 2023-24ನೇ ಸಾಲಿನ ಬಜೆಟ್ ಮಂಡಿಸಿದರು ಮತ್ತು ಮಹಿಳೆಯರಿಗೆ ಮಾಸಿಕ ಸಹಾಯ ಯೋಜನೆಯನ್ನು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಪ್ರಾರಂಭಿಸುತ್ತಾರೆ ಎಂದು ಘೋಷಿಸಿದರು.
ಈ ಯೋಜನೆ ಅನುಷ್ಠಾನಕ್ಕೆ ವಿಧಾನಗಳನ್ನು ರೂಪಿಸಲಾಗುತ್ತಿದೆ ಮತ್ತು ಯೋಜನೆಗಾಗಿ 7,000 ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ಮೀಸಲಿಡಲಾಗಿದೆ. ಈ ಯೋಜನೆ "ರಾಜ್ಯದ ಮಹಿಳೆಯರ ಸಾಮಾಜಿಕ-ಆರ್ಥಿಕ ಜೀವನದಲ್ಲಿ ಪ್ರಮುಖ ಬದಲಾವಣೆ ತರಲಿದೆ" ಎಂದು ಹೇಳಿದರು.