ಜನರ ನಿಂದಿಸಲು ಕಾಂಗ್ರೆಸ್ ಸಂಪೂರ್ಣ ಸ್ವಾತಂತ್ರ್ಯ ಬಯಸುತ್ತಿದೆಯೇ?: ಬಿಜೆಪಿ

"ದುರುಪಯೋಗಪಡಿಸಿಕೊಳ್ಳಲು" ಕಾಂಗ್ರೆಸ್ ಸಂಪೂರ್ಣ ಸ್ವಾತಂತ್ರ್ಯವನ್ನು ಬಯಸುತ್ತಿದೆಯೇ ಎಂದು ಬಿಜೆಪಿ ಗುರುವಾರ ಪ್ರಶ್ನಿಸಿದೆ.
ಬಿಜೆಪಿ ನಾಯಕ ಮತ್ತು ಮಾಜಿ ಕಾನೂನು ಸಚಿವ ರವಿಶಂಕರ್ ಪ್ರಸಾದ್
ಬಿಜೆಪಿ ನಾಯಕ ಮತ್ತು ಮಾಜಿ ಕಾನೂನು ಸಚಿವ ರವಿಶಂಕರ್ ಪ್ರಸಾದ್

ನವದೆಹಲಿ: "ದುರುಪಯೋಗಪಡಿಸಿಕೊಳ್ಳಲು" ಕಾಂಗ್ರೆಸ್ ಸಂಪೂರ್ಣ ಸ್ವಾತಂತ್ರ್ಯವನ್ನು ಬಯಸುತ್ತಿದೆಯೇ ಎಂದು ಬಿಜೆಪಿ ಗುರುವಾರ ಪ್ರಶ್ನಿಸಿದೆ.

‘ಮೋದಿ‘ ಎಂಬ ಉಪನಾಮದ ಬಗ್ಗೆ ಅಪಮಾನಕರವಾಗಿ ಮಾತನಾಡಿದ್ದ ರಾಹುಲ್ ಗಾಂಧಿಯವರನ್ನು ದೋಷಿ ಎಂದು ಗುಜರಾತ್​ನ ಸೂರತ್ ನ್ಯಾಯಾಲಯವು ತೀರ್ಪು ಹೊರಡಿಸಿದ್ದು, 2 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಈ ತೀರ್ಪನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಪ್ರಶ್ನಿಸಿದ್ದಾರೆ.

ನ್ಯಾಯಾಧೀಶರನ್ನು ಬದಲಿಸುತ್ತಿರುವ ವಿಚಾರ ಮೊದಲಿನಿಂದಲೂ ತಿಳಿದಿತ್ತು. ನಮಗೆ ಕಾನೂನು, ನ್ಯಾಯಾಂಗದಲ್ಲಿ ನಂಬಿಕೆ ಇದೆ. ಕಾನೂನು ಪ್ರಕಾರವೇ ಇದರ ವಿರುದ್ಧ ಹೋರಾಡುತ್ತೇವೆಂದು ಹೇಳಿದ್ದರು.

ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ ಮತ್ತು ಮಾಜಿ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು, ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕಿಡಿಕಾರಿದರು. "ದುರುಪಯೋಗಪಡಿಸಿಕೊಳ್ಳಲು" ವಿರೋಧ ಪಕ್ಷ ಸಂಪೂರ್ಣ ಸ್ವಾತಂತ್ರ್ಯವನ್ನು ಬಯಸುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.

ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ನ್ಯಾಯಾಂಗದ ಮೇಲೆ ನಂಬಿಕೆ ಇಲ್ಲ ಎಂಬುದನ್ನು ತಿಳಿಸಿದೆ. ನ್ಯಾಯಾಂಗವನ್ನೂ ತನ್ನ ಜೇಬಿನಲ್ಲಿ ಇಟ್ಟುಕೊಳ್ಳಬೇಕೆ? ಎಂದು ಪ್ರಶ್ನಿಸಿದ್ದಾರೆ.

ರಾಹುಲ್ ಗಾಂಧಿ ಅವರನ್ನು ಲೋಕಸಭೆಯಿಂದ ಅನರ್ಹಗೊಳಿಸಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಸಾದ್, ಸ್ಪೀಕರ್ ಓಂ ಬಿರ್ಲಾ ಅವರೇ ಈ ಬಗ್ಗೆ ನಿರ್ಧರಿಸಬೇಕು ಎಂದರು.

ಗಾಂಧಿಯವರು ತಮ್ಮ ಹೇಳಿಕೆಗಳ ಮೂಲಕ ಮೋದಿ ಉಪನಾಮವನ್ನು ಹೊಂದಿರುವ ಜನರನ್ನು ಅವಮಾನಿಸಿದ್ದಾರೆ, ಇದು ಮಾನನಷ್ಟವಾಗಿದೆ. ತೀರ್ಪು ನೀಡುವ ಮೊದಲು ಅವರ ವಕೀಲರು ನ್ಯಾಯಾಲಯದ ಮುಂದೆ ವಾದ ಮಂಡಿಸಿದರು, ರಾಹುಲ್ ವಿರುದ್ಧ ಇದೇ ರೀತಿಯ ಮತ್ತೊಂದು ಪ್ರಕರಣ ಪಾಟ್ನಾದ ನ್ಯಾಯಾಲಯದ ಅಂಗಳದಲ್ಲಿದೆ.

ಜಾತಿಯನ್ನು ಉಲ್ಲೇಖಿಸಿ ರಾಹುಲ್ ಗಾಂಧಿಯವರು ಜನರನ್ನು ಅವಮಾನಿಸಿದ್ದಾರೆ. ನ್ಯಾಯಾಲಯದ ತೀರ್ಪು ಬಳಿಕ ಸತ್ಯ ಮತ್ತು ಅಹಿಂಸೆಯ ಮೇಲೆ ನಂಬಿಕೆ ಇಟ್ಟಿದ್ದೇನೆಂದು ಹೇಳಿದ್ದಾರೆ. ಇದರರ್ಥ ಉಪನಾಮ ಬಳಿಕ ಜನರುನ್ನು  ಅವಮಾನಿಸುವುದಾ ಎಂದು ಪ್ರಶ್ನಿಸಿದ್ದಾರೆ.

"ರಾಹುಲ್ ಗಾಂಧಿ ಜನರನ್ನು ನಿಂದಿಸುವ ಸಲುವಾಗಿ ಕಾಂಗ್ರೆಸ್ ಸಂಪೂರ್ಣ ಸ್ವಾತಂತ್ರ್ಯವನ್ನು ಬಯಸುತ್ತದೆಯೇ? ದೇಶದಲ್ಲಿ ಕಾನೂನಿನ ಆಡಳಿತವಿದ್ದು, ಅದು ಚಾಲ್ತಿಯಲ್ಲಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾನಹಾನಿಕರ ಹೇಳಿಕೆಗಳು ಹಾಗೂ ಆಧಾರರಹಿತ ಆರೋಪಗಳನ್ನು ಮಾಡುವ ಇತಿಹಾಸವನ್ನು ಹೊಂದಿದ್ದಾರೆಂದು ಕಿಡಿಕಾರಿದರು.

"ಭಾರತದ ಕಾನೂನಿನ ಪ್ರಕಾರ ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯು ಅಶ್ಲೀಲ ಹೇಳಿಕೆಗಳು, ನಿಂದನೆಗಳು ಅಥವಾ ಯಾವುದೇ ಮಾನಹಾನಿಕರ ಟೀಕೆಗಳಿಂದ ಮಾನಹಾನಿಗೊಳಗಾದರೆ ಪರಿಹಾರವನ್ನು ಪಡೆದುಕೊಳ್ಳುವ ಹಕ್ಕನ್ನು ಹೊಂದಿರುತ್ತಾರೆ. ಆದರೆ, ಕಾಂಗ್ರೆಸ್ ಪಕ್ಷವು ಇದಕ್ಕೆ ಆಕ್ಷೇಪಣೆಯನ್ನು ವ್ಯಕ್ತಪಡಿಸುತ್ತಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com