ತಮಿಳುನಾಡು ವಿಧಾನಸಭೆಯಲ್ಲಿ ಮತ್ತೊಮ್ಮೆ ಆನ್‌ಲೈನ್ ಜೂಜಾಟ ನಿಷೇಧ ಮಸೂದೆ ಅಂಗೀಕಾರ
ತಮಿಳುನಾಡು ರಾಜ್ಯಪಾಲ ಆರ್‌ಎನ್ ರವಿ ಅವರು ಆನ್‌ಲೈನ್ ಜೂಜಾಟ ನಿಷೇಧ ಮಸೂದೆಯನ್ನು ಮರುಪರಿಶೀಲನೆಗಾಗಿ ಸರ್ಕಾರಕ್ಕೆ ಹಿಂದಿರುಗಿಸಿದ ಕೆಲವು ವಾರಗಳ ನಂತರ ತಮಿಳುನಾಡು ಸರ್ಕಾರ ಗುರುವಾರ ಮತ್ತೊಮ್ಮೆ ವಿಧಾನಸಭೆಯಲ್ಲಿ...
Published: 23rd March 2023 04:07 PM | Last Updated: 23rd March 2023 07:16 PM | A+A A-

ಸಾಂದರ್ಭಿಕ ಚಿತ್ರ
ಚೆನ್ನೈ: ತಮಿಳುನಾಡು ರಾಜ್ಯಪಾಲ ಆರ್‌ಎನ್ ರವಿ ಅವರು ಆನ್‌ಲೈನ್ ಜೂಜಾಟ ನಿಷೇಧ ಮಸೂದೆಯನ್ನು ಮರುಪರಿಶೀಲನೆಗಾಗಿ ಸರ್ಕಾರಕ್ಕೆ ಹಿಂದಿರುಗಿಸಿದ ಕೆಲವು ವಾರಗಳ ನಂತರ ತಮಿಳುನಾಡು ಸರ್ಕಾರ ಗುರುವಾರ ಮತ್ತೊಮ್ಮೆ ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಿದೆ.
ರಾಜ್ಯಪಾಲರು ಹಿಂದಿರುಗಿಸಿದ ನಂತರ ರಾಜ್ಯ ವಿಧಾನಸಭೆಯು ಮರು ಅಂಗೀಕರಿಸಿದ ಎರಡನೇ ಮಸೂದೆ ಇದಾಗಿದೆ. ಇದಕ್ಕೂ ಮುನ್ನ ತಮಿಳುನಾಡಿನಲ್ಲಿ ಪದವಿಪೂರ್ವ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ(NEET) ಅನ್ನು ರದ್ದುಗೊಳಿಸುವ ಮಸೂದೆಯನ್ನು ಫೆಬ್ರವರಿ 8 ರಂದು ಮತ್ತೊಮ್ಮೆ ಅಂಗೀಕರಿಸಲಾಗಿತ್ತು.
ಇಂದು ಆನ್‌ಲೈನ್ ಜೂಜಾಟ ನಿಷೇಧ ಮತ್ತು ಆನ್‌ಲೈನ್ ಗೇಮ್ಸ್ ನಿಯಂತ್ರಣ ಮಸೂದೆ 2022 ಅನ್ನು ವಿಧಾನಸಭೆಯಲ್ಲಿ ಮಂಡಿಸಿ ಮಾತನಾಡಿದ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು, ಆನ್‌ಲೈನ್ ಜೂಜಾಟದಿಂದ 41 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.
ಇದನ್ನು ಓದಿ: ಜೂಜಿನ ಗೀಳು: ತನ್ನನ್ನು ತಾನೇ ಸೋತ ಎರಡು ಮಕ್ಕಳ ತಾಯಿ, ಈಗ ಬೇರೊಬ್ಬನ ಪಾಲು; ಗಂಡನ ಗೋಳು!
ಜೂಜಾಟದಿಂದ ಸಾವಿಗೆ ಶರಣಾದ ಚೆನ್ನೈನ ಸುರೇಶ್‌ಕುಮಾರ್ ಅವರು, ಆನ್‌ಲೈನ್ ರಮ್ಮಿಯನ್ನು ತಕ್ಷಣವೇ ನಿಷೇಧಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು ಮತ್ತು ಯಾರೂ ಸಹ ತನ್ನಂತೆ ಆತ್ಮಹತ್ಯೆ ಮಾಡಿಕೊಳ್ಳಬಾರದು. ಆನ್‌ಲೈನ್ ಜೂಜಾಟದಿಂದ ತಮ್ಮ ಸಾವೇ ಕೊನೆಯಾಗಲಿ ಎಂದಿದ್ದರು.