ಸುಳ್ಳು, ದೂಷಣೆ ರಾಹುಲ್ ರಾಜಕೀಯದ ಭಾಗವಾಗಿದೆ, ಜನರೇ ಅವರನ್ನು ಶಿಕ್ಷಿಸುತ್ತಾರೆ: ಜೆಪಿ ನಡ್ಡಾ

ರಾಹುಲ್ ಗಾಂಧಿ ಅವರು ಸತ್ಯಗಳೊಂದಿಗೆ ಯಾವುದೇ ಸಂಬಂಧವಿಲ್ಲದ ಕಪೋಲಕಲ್ಪಿತ ಆರೋಪಗಳನ್ನು ಮಾಡುವ ಅಭ್ಯಾಸವನ್ನು ಹೊಂದಿದ್ದಾರೆ ಮತ್ತು ಕಾಂಗ್ರೆಸ್ ನಾಯಕರಿಗೆ 'ಅಹಂಕಾರ ಜಾಸ್ತಿ ಇದೆ ಆದರೆ, ಸ್ವಲ್ಪ ತಿಳುವಳಿಕೆ' ಇದೆ ಎಂದು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಶುಕ್ರವಾರ ಆರೋಪಿಸಿದ್ದಾರೆ.
ಜೆ.ಪಿ ನಡ್ಡಾ
ಜೆ.ಪಿ ನಡ್ಡಾ

ನವದೆಹಲಿ: ರಾಹುಲ್ ಗಾಂಧಿ ಅವರು ಸತ್ಯಗಳೊಂದಿಗೆ ಯಾವುದೇ ಸಂಬಂಧವಿಲ್ಲದ ಕಪೋಲಕಲ್ಪಿತ ಆರೋಪಗಳನ್ನು ಮಾಡುವ ಅಭ್ಯಾಸವನ್ನು ಹೊಂದಿದ್ದಾರೆ ಮತ್ತು ಕಾಂಗ್ರೆಸ್ ನಾಯಕರಿಗೆ 'ಅಹಂಕಾರ ಜಾಸ್ತಿ ಇದೆ ಆದರೆ, ಸ್ವಲ್ಪ ತಿಳುವಳಿಕೆ' ಇದೆ ಎಂದು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಶುಕ್ರವಾರ ಆರೋಪಿಸಿದ್ದಾರೆ.

'ಮೋದಿ ಉಪನಾಮ'ಗಳ ಕುರಿತು ಟೀಕೆಗಳ ಮೇಲೆ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ರಾಹುಲ್ ಗಾಂಧಿಯವರಿಗೆ ಶಿಕ್ಷೆಯಾದ ನಂತರ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ರಾಜಕೀಯ ಕೆಸರೆರೆಚಾಟದ ನಡುವೆ ಸರಣಿ ಟ್ವೀಟ್‌ಗಳಲ್ಲಿ ನಡ್ಡಾ 'ಸುಳ್ಳು, ವೈಯಕ್ತಿಕ ನಿಂದನೆ ಮತ್ತು ನಕಾರಾತ್ಮಕ ರಾಜಕೀಯವು ಅವರ ರಾಜಕೀಯದ ಅವಿಭಾಜ್ಯ ಅಂಗವಾಗಿದೆ' ಎಂದು ಆರೋಪಿಸಿದರು.

'2019ರಲ್ಲಿ ಅವರು ಅಮೇಥಿಯಲ್ಲಿ ಸೋತಾಗ ಮತ್ತು ರಾಷ್ಟ್ರೀಯವಾಗಿ ಕಾಂಗ್ರೆಸ್ ಅನ್ನು ಸೋಲಿಸಿದ್ದಕ್ಕಿಂತ ಮುಂಬರುವ 2024ರ ಲೋಕಸಭೆ ಚುನಾವಣೆಯಲ್ಲಿ ಅವರಿಗೆ ಜನರ 'ಶಿಕ್ಷೆ' ಹೆಚ್ಚು ಕಠಿಣವಾಗಲಿದೆ. ಒಬಿಸಿ ಸಮುದಾಯಗಳನ್ನು ಕಳ್ಳರಿಗೆ ಹೋಲಿಸುವ ಮೂಲಕ ರಾಹುಲ್ ಗಾಂಧಿ ಅವರು ಕರುಣಾಜನಕ ಮತ್ತು ಜಾತಿವಾದಿ ಮನಸ್ಥಿತಿಯನ್ನು ತೋರಿಸಿದ್ದಾರೆ ಎಂದು ದೂರಿದರು.

ಆದಾಗ್ಯೂ, ಅವರ ಇತ್ತೀಚಿನ ಹೇಳಿಕೆಗಳಲ್ಲಿ ಆಶ್ಚರ್ಯವೇನಿಲ್ಲ. ಕಳೆದ ಹಲವು ವರ್ಷಗಳಿಂದ, ಅವರು ಯಾವಾಗಲೂ ಕೀಳುಮಟ್ಟದ ರಾಜಕೀಯ ಭಾಷಣ ಮಾಡುತ್ತಿದ್ದಾರೆ. ಅವರು ತಮ್ಮ ಹೇಳಿಕೆಗಳಿಗೆ ಕ್ಷಮೆಯಾಚಿಸಲು ನ್ಯಾಯಾಲಯ ಮತ್ತು ಸಮುದಾಯದ ಸಲಹೆಗಳನ್ನು ಪದೇ ಪದೆ ನಿರ್ಲಕ್ಷಿಸಿದ್ದಾರೆ. ಈ ಅವಮಾನಕ್ಕೆ ಇಡೀ ಇತರೆ ಹಿಂದುಳಿದ ವರ್ಗಗಳು ಪ್ರಜಾಸತ್ತಾತ್ಮಕ ರೀತಿಯಲ್ಲಿ ಸೇಡು ತೀರಿಸಿಕೊಳ್ಳಲಿವೆ ಎಂದು ಹೇಳಿದರು.

ಅವರು ಪದೇ ಪದೇ ಒಬಿಸಿಗಳ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಸಮುದಾಯದ ವಿರುದ್ಧ ಆಕ್ಷೇಪಾರ್ಹ ಕಾಮೆಂಟ್‌ಗಳಿಗಾಗಿ ಸೂರತ್ ನ್ಯಾಯಾಲಯ ಅವರಿಗೆ ಶಿಕ್ಷೆ ವಿಧಿಸಿದೆ. ಆದರೆ, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ತಮ್ಮ ದುರಹಂಕಾರದ ಕಾರಣದಿಂದ ಆ ಟೀಕೆಗಳಿಗೆ ಅಂಟಿಕೊಂಡಿತು ಎಂದು ನಡ್ಡಾ ಹೇಳಿದರು.

'2019ರ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಅಧ್ಯಕ್ಷರು ಮತ್ತು ಗಾಂಧಿಗಳ ಪ್ರಮುಖ ವಿಷಯವೆಂದರೆ 'ರಫೇಲ್ ಹಗರಣ'ವಾಗಿತ್ತು. ಅವರ ಋಣಾತ್ಮಕ ರಾಜಕೀಯ ಮತ್ತು ರಫೇಲ್ ಹಗರಣವು ನ್ಯಾಯಾಲಯದಲ್ಲಿ ಹಿನ್ನಡೆಯನ್ನು ಅನುಭವಿಸಿತು. ನಮ್ಮ ದೇಶದ ಅತ್ಯುನ್ನತ ನ್ಯಾಯಾಲಯ, ಗೌರವಾನ್ವಿತ ಸುಪ್ರೀಂ ಕೋರ್ಟ್ ರಫೇಲ್ ವಿಷಯದ ಬಗ್ಗೆ ಸ್ಪಷ್ಟವಾದ ತೀರ್ಪು ನೀಡಿದೆ ಮತ್ತು ರಾಹುಲ್ ಗಾಂಧಿ ಎತ್ತಿದ ಭ್ರಷ್ಟಾಚಾರವನ್ನು ನಂಬಲಿಲ್ಲ' ಎಂದು ಅವರು ಹೇಳಿದರು.

ರಫೇಲ್ ವಿಚಾರದಲ್ಲಿ ತನ್ನ ತಪ್ಪುದಾರಿಗೆಳೆಯುವ ಹೇಳಿಕೆಗಳಿಗಾಗಿ ಗಾಂಧೀಯವರೂ ಸುಪ್ರೀಂ ಕೋರ್ಟ್‌ನಿಂದಲೂ ಛೀಮಾರಿ ಹಾಕಿಸಿಕೊಂಡರು ಮತ್ತು ಅವರ ಕಪೋಲಕಲ್ಪಿತ ಆರೋಪಗಳಿಗಾಗಿ ಬೇಷರತ್ ಕ್ಷಮೆಯಾಚಿಸಬೇಕಾಯಿತು. ತಮ್ಮ ಪಕ್ಷದೊಳಗಿನ ಹಿರಿಯ ನಾಯಕರ ಆಕ್ಷೇಪದ ಹೊರತಾಗಿಯೂ ರಾಹುಲ್ ಅವರು 'ಚೌಕಿದಾರ್ ಚೋರ್ ಹೈ' ಘೋಷಣೆಯನ್ನು ಎತ್ತಿದರು ಎಂದು ಬಿಜೆಪಿ ಅಧ್ಯಕ್ಷರು ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ಹೇಳಿದರು.

ಅವರು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದರು. ಆದರೆ, ಅವರು ತಮ್ಮ ಸ್ವಂತ ಕ್ಷೇತ್ರದಲ್ಲಿ (ಅಮೇಥಿ) ಸೋತರು ಮತ್ತು ಅವರ ಪಕ್ಷವು ರಾಷ್ಟ್ರೀಯವಾಗಿ ನಾಶವಾಯಿತು. ಈಗ ರಾಹುಲ್ ಗಾಂಧಿಯವರು ಇಡೀ ಒಬಿಸಿ ಸಮುದಾಯವನ್ನು ಕಳ್ಳರು ಎಂದಿದ್ದಾರೆ. ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾದ ಅವರು, ಕ್ಷಮೆಯಾಚಿಸಲು ನಿರಾಕರಿಸುತ್ತಾರೆ. ಹೀಗಾಗಿ ಓಬಿಸಿಗಳ ಮೇಲಿನ ಅವರ ದ್ವೇಷ ಎಷ್ಟು ಆಳವಾಗಿ ಬೇರೂರಿದೆ ಎಂಬುದನ್ನು ಇದು ತೋರಿಸುತ್ತದೆ. 2019ರಲ್ಲಿ ಭಾರತದ ಜನರು ಅವರನ್ನು ಕ್ಷಮಿಸಲಿಲ್ಲ. 2024ರಲ್ಲಿ ಶಿಕ್ಷೆ ಹೆಚ್ಚು ತೀವ್ರವಾಗಿರುತ್ತದೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com