ಶ್ರೀರಾಮ ಹಿಂದೂಗಳಿಗಷ್ಟೇ ಅಲ್ಲ ಎಲ್ಲರಿಗೂ ದೇವರು, ಜನರಿಗೆ ದಾರಿ ತೋರಿಸಲು ಆತನನ್ನು ಅಲ್ಲಾಹ್ ಕಳುಹಿಸಿದನು: ಫಾರೂಕ್ ಅಬ್ದುಲ್ಲಾ
ಶ್ರೀರಾಮ ಹಿಂದೂಗಳಿಗಷ್ಟೇ ಅಲ್ಲ ಎಲ್ಲರಿಗೂ ದೇವರು, ಜನರಿಗೆ ದಾರಿ ತೋರಿಸಲು ಆತನನ್ನು ಅಲ್ಲಾಹ್ ಕಳುಹಿಸಿದನು ಎಂದು ಜಮ್ಮು ಮತ್ತು ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರುಖ್ ಅಬ್ದುಲ್ಲಾ ಅವರು ಹೇಳಿದ್ದಾರೆ.
Published: 24th March 2023 11:44 AM | Last Updated: 24th March 2023 06:05 PM | A+A A-

ಫಾರೂಕ್ ಅಬ್ದುಲ್ಲಾ
ಶ್ರೀನಗರ: ಶ್ರೀರಾಮ ಹಿಂದೂಗಳಿಗಷ್ಟೇ ಅಲ್ಲ ಎಲ್ಲರಿಗೂ ದೇವರು, ಜನರಿಗೆ ದಾರಿ ತೋರಿಸಲು ಆತನನ್ನು ಅಲ್ಲಾಹ್ ಕಳುಹಿಸಿದನು ಎಂದು ಜಮ್ಮು ಮತ್ತು ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರುಖ್ ಅಬ್ದುಲ್ಲಾ ಅವರು ಹೇಳಿದ್ದಾರೆ.
ಗುರುವಾರ ಉದಯಪುರದಲ್ಲಿ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಪಕ್ಷ ಅಧಿಕಾರದಲ್ಲಿ ಉಳಿಯಲು ರಾಮನ ಹೆಸರನ್ನು ಮಾತ್ರ ಬಳಸುತ್ತಿದೆ. ಆದರೆ, ರಾಮ ಕೇವಲ ಹಿಂದೂಗಳ ದೇವರಲ್ಲ. ಎಲ್ಲರ ದೇವರು. ಜನರಿಗೆ ದಾರಿ ತೋರಿಸಲು ಅಲ್ಲಾಹ್ ಆತನನ್ನು ಕಳುಹಿಸಿದರು ಎಂದು ಹೇಳಿದರು.
ರಾಮ ಕೇವಲ ಹಿಂದೂಗಳ ದೇವರಲ್ಲ. ದಯವಿಟ್ಟು ಈ ಕಲ್ಪನೆಯನ್ನು ನಿಮ್ಮ ಮನಸ್ಸಿನಿಂದ ಕಿತ್ತು ಹಾಕಿ. ಭಗವಂತ ರಾಮ ಪ್ರತಿಯೊಬ್ಬನಿಗೂ ದೇವರು. ಅದು ಮುಸ್ಲಿಂ ಆಗಿರಲಿ ಅಥವಾ ಕಿಶ್ಚಿಯನ್ ಆಗಿರಲಿ, ಅಮೆರಿಕನ್ ಅಥವಾ ರಷ್ಯನ್ ಆಗಿರಲಿ. ಆತನ ಮೇಲೆ ನಂಬಿಕೆಯಿರುವ ಪ್ರತಿಯೊಬ್ಬರಿಗೂ ಆತ ದೇವರಾಗುತ್ತಾನೆ ಎಂದು ತಿಳಿಸಿದರು.
ಇದನ್ನೂ ಓದಿ: ಭಗವಾನ್ ಶ್ರೀರಾಮ ಎಲ್ಲರಿಗೂ ದೇವರು; ಧಾರ್ಮಿಕ ವಿಭಜನೆಯ ವಿರುದ್ಧ ಫಾರೂಖ್ ಅಬ್ದುಲ್ಲಾ ಎಚ್ಚರಿಕೆ
ನಾವು ರಾಮನ ಭಕ್ತರು ಎಂದು ನಿಮ್ಮ ಬಳಿಗೆ ಬರುವವರು ಮೂರ್ಖರು. ಅವರು ರಾಮನ ಹೆಸರಿನಲ್ಲಿ ಲಾಭ ಪಡೆದುಕೊಳ್ಳಲು ಬಯಸುತ್ತಾರೆ. ಅವರಿಗೆ ರಾಮನ ಮೇಲೆ ಪ್ರೀತಿ ಇಲ್ಲ. ಬದಲಿಗೆ ಅಧಿಕಾರದ ಮೇಲೆ ಇರುತ್ತದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ಘೋಷಣೆಯಾದಾಗ ಅವರು ಸಾಮಾನ್ಯ ಜನರ ಗಮನ ಬೇರೆಡೆಗೆ ತಿರುಗಿಸಲು ರಾಮ ಮಂದಿರವನ್ನು ಉದ್ಘಾಟಿಸುತ್ತಿದ್ದಾರೆ ಎಂಬುದು ತಿಳಿದುಬರುತ್ತದೆ. ಆದ್ದರಿಂದ ದಯವಿಟ್ಟು ಜನರ ನಡುವೆ ಹೋಗಿ ದ್ವೇಷದ ಪ್ರಚಾರವನ್ನು ನಿಲ್ಲಿಸಲು ಮನವಿ ಮಾಡುತ್ತೇವೆ ಎಂದರು.