ವಾರಣಾಸಿಗೆ 1,780 ಕೋಟಿ ರೂ. ಉಡುಗೊರೆ ನೀಡಿದ ಪ್ರಧಾನಿ ಮೋದಿ: 28 ಅಭಿವೃದ್ಧಿ ಯೋಜನೆಗಳ ಉದ್ಘಾಟನೆ!

ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ತಮ್ಮ ಲೋಕಸಭಾ ಕ್ಷೇತ್ರ ವಾರಾಣಸಿಯ ಜನರಿಗೆ 1780 ಕೋಟಿ ಉಡುಗೊರೆ ನೀಡಿದ್ದು ಪ್ರಧಾನಿ ಮೋದಿ ಇಲ್ಲಿ 28 ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ್ದಾರೆ.
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ತಮ್ಮ ಲೋಕಸಭಾ ಕ್ಷೇತ್ರ ವಾರಾಣಸಿಯ ಜನರಿಗೆ 1780 ಕೋಟಿ ಉಡುಗೊರೆ ನೀಡಿದ್ದು ಪ್ರಧಾನಿ ಮೋದಿ ಇಲ್ಲಿ 28 ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ್ದಾರೆ. 

ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಮಾತನಾಡಿ, ಕಾಶಿಯ ಅಭಿವೃದ್ಧಿ ಕುರಿತು ದೇಶ ಮತ್ತು ವಿಶ್ವದಲ್ಲಿ ಚರ್ಚೆಯಾಗುತ್ತಿದೆ. ಇಲ್ಲಿಗೆ ಹೋಗುವವರು ಹೊಸ ಶಕ್ತಿಯಿಂದ ಹೋಗುತ್ತಿದ್ದಾರೆ. 8-9 ವರ್ಷಗಳ ಹಿಂದೆ, ಕಾಶಿಯ ಜನರು ತಮ್ಮ ನಗರವನ್ನು ಪುನರುಜ್ಜೀವನಗೊಳಿಸುವ ಪ್ರತಿಜ್ಞೆಯನ್ನು ತೆಗೆದುಕೊಂಡಾಗ, ಬನಾರಸ್‌ನಲ್ಲಿ ಬದಲಾವಣೆ ಆಗುವುದಿಲ್ಲ, ಕಾಶಿಯ ಜನರು ಯಶಸ್ವಿಯಾಗುವುದಿಲ್ಲ ಎಂಬ ಆತಂಕದಲ್ಲಿ ಅನೇಕ ಜನರಿದ್ದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾತನಾಡಿ, ಪ್ರಧಾನಿಯವರು ಕಾಶಿಗೆ ಬಂದಾಗಲೆಲ್ಲ ಕಾಶಿಗೆ ಹೊಸ ಉಡುಗೊರೆ ತರುತ್ತಾರೆ. ಇಂದು ಪ್ರಧಾನಿಯವರು 1,780 ಕೋಟಿ ವೆಚ್ಚದ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ. ಹೊಸ ಕಾಶಿ ಭವ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರನ್ನು ಗುರಿಯಾಗಿಸಿಕೊಂಡು, ಪ್ರಧಾನಿಯವರ ದೂರದೃಷ್ಟಿಯ ಅಡಿಯಲ್ಲಿ ಭಾರತವು ಜಿ 20 ಅನ್ನು ಆಯೋಜಿಸುತ್ತಿದೆ. ಆದರೆ ಕೆಲವು ಕಾಂಗ್ರೆಸ್ ನಾಯಕರು ದೇಶ ವಿದೇಶಗಳಲ್ಲಿ ಮಾನಹಾನಿ ಮಾಡುತ್ತಿದ್ದಾರೆ ಮತ್ತು ಪ್ರಜಾಪ್ರಭುತ್ವದ ಮೇಲೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಅವರು ಎಂದಿಗೂ ದೇಶದ ಅಭಿವೃದ್ಧಿಗೆ ಏನನ್ನೂ ಮಾಡಲಿಲ್ಲ, ಆದರೆ ಯಾವಾಗಲೂ ಭಾರತದ ಮಾನಹಾನಿ ಮಾಡುತ್ತಲೇ ಇದ್ದರು ಎಂದರು.

ಇದಕ್ಕೂ ಮುನ್ನ, ವಿಶ್ವ ಕ್ಷಯರೋಗ (ಟಿಬಿ) ದಿನವಾದ ಇಂದು ವಾರಣಾಸಿಯ ರುದ್ರಾಕ್ಷ ಕನ್ವೆನ್ಷನ್ ಸೆಂಟರ್‌ನಲ್ಲಿ 'ಒಂದು ವಿಶ್ವ ಟಿಬಿ ಶೃಂಗಸಭೆ' ಕುರಿತು ಮೂರು ದಿನಗಳ ಸಭೆಯನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು. ಇದಾದ ಬಳಿಕ ಪ್ರಧಾನಿ ಮೋದಿ 'ಆರೋಗ್ಯಕರ ದೃಷ್ಟಿ, ಸಮೃದ್ಧ ಕಾಶಿ' ಅಭಿಯಾನದ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಪ್ರಧಾನಿ ಜೊತೆ ರಾಜ್ಯಪಾಲ ಆನಂದಿಬೆನ್ ಪಟೇಲ್ ಮತ್ತು ಸಿಎಂ ಯೋಗಿ ಆದಿತ್ಯನಾಥ್ ಕೂಡ ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com