ಖರ್ಗೆ ಕೈ ಹಿಡಿದು ಹಾಸ್ಯದ ಮೂಲಕ ಬಿಜೆಪಿಗೆ ಟಾಂಗ್ ನೀಡಿದ ರಾಹುಲ್! ವಿಡಿಯೋ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜೈಲು ಶಿಕ್ಷೆ ಬಿಕ್ಕಟ್ಟಿನ ನಡುವೆ ಹಾಸ್ಯಪ್ರಜ್ಞೆ ಮೆರೆದಿದ್ದಾರೆ. ಸಂಸತ್ತಿನಲ್ಲಿ ಕಾಂಗ್ರೆಸ್ ಸಂಸದರ ಸಭೆ ಬಳಿಕ ಪಕ್ಷದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮೆಟ್ಟಿಲುಗಳಿಂದ ಕೆಳಗೆ ಇಳಿಯಲು ನೆರವಾಗಿದ್ದಾರೆ.
Published: 24th March 2023 03:22 PM | Last Updated: 24th March 2023 03:22 PM | A+A A-

ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ
ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜೈಲು ಶಿಕ್ಷೆ ಬಿಕ್ಕಟ್ಟಿನ ನಡುವೆ ಹಾಸ್ಯಪ್ರಜ್ಞೆ ಮೆರೆದಿದ್ದಾರೆ. ಸಂಸತ್ತಿನಲ್ಲಿ ಕಾಂಗ್ರೆಸ್ ಸಂಸದರ ಸಭೆ ಬಳಿಕ ಪಕ್ಷದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮೆಟ್ಟಿಲುಗಳಿಂದ ಕೆಳಗೆ ಇಳಿಯಲು ನೆರವಾಗಿದ್ದಾರೆ.
ನಂತರ ರಾಹುಲ್, "ನಾನು ಈಗ ನಿಮ್ಮನ್ನು ಮುಟ್ಟಿದರೆ, ನಿಮ್ಮ ಬೆನ್ನಿನ ಮೇಲೆ ನನ್ನ ಮೂಗು ಒರೆಸುತ್ತೇನೆ ಎಂದು ಬಿಜೆಪಿಯವರು ಹೇಳುತ್ತಾರೆ. ಸಂಪೂರ್ಣ ಅಸಂಬದ್ಧ, ನೀವು ಅದನ್ನು ನೋಡಿದ್ದೀರಾ? ಎಂದು ನಗುವಿನ ಮುಖದೊಂದಿಗೆ ಹಾಸ್ಯವಾಡಿದರು.
#WATCH | "If I touch you now, they say I'm wiping my nose on your back. Utter nonsense. Have you seen that? That I am helping you over there, they're saying that I'm wiping my nose on you," says Congress MP Rahul Gandhi as he helps party chief Mallikarjun Kharge down the stairs. pic.twitter.com/l6qUSdfS0i
— ANI (@ANI) March 24, 2023
ಭಾರತ್ ಜೋಡೋ ಯಾತ್ರೆಯ ವೇಳೆ ಮಾಜಿ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅಲ್ವಾರ್ ಅವರು ರಾಹುಲ್ ಅವರ ಶೂಲೇಸ್‌ಗಳನ್ನು ಕಟ್ಟಿದ್ದರು ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಹೇಳಿಕೊಂಡಿದ್ದರು. ನನ್ನ ಶೂಲೇಸ್‌ಗಳನ್ನು ಕಟ್ಟುತ್ತಿದ್ದೇ ಹೊರತು ರಾಹುಲ್ ಗಾಂಧಿಯವರದ್ದಲ್ಲ ಎಂದು ಸ್ಪಷ್ಟಪಡಿಸಿದ್ದ ಅಲ್ವಾರ್ ಮಾಳವಿಯಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಬೆದರಿಕೆ ಹಾಕಿದ್ದರು.