ಮುಂಬೈ: ರಾಜ್ ಠಾಕ್ರೆ ನಿವಾಸಕ್ಕೆ ಮುಖ್ಯಮಂತ್ರಿ ಶಿಂಧೆ ಭೇಟಿ!
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಭಾನುವಾರ ಮುಂಬೈನಲ್ಲಿರುವ ಎಂಎನ್‌ಎಸ್ ಅಧ್ಯಕ್ಷ ರಾಜ್ ಠಾಕ್ರೆ ಅವರ ನಿವಾಸಕ್ಕೆ ಭೇಟಿ ನೀಡಿದರು. ಠಾಕ್ರೆ ಅವರೊಂದಿಗೆ ಅವರ ಪತ್ನಿ ಶರ್ಮಿಳಾ, ಪುತ್ರ ಅಮಿತ್ ಮತ್ತು ಪಕ್ಷದ ಕೆಲವು ಕಾರ್ಯಕರ್ತರು ಉಪಸ್ಥಿತರಿದ್ದರು.
Published: 26th March 2023 10:20 PM | Last Updated: 27th March 2023 08:43 PM | A+A A-

ರಾಜ್ ಠಾಕ್ರೆ ನಿವಾಸಕ್ಕೆ ಸಿಎಂ ಶಿಂಧೆ ಭೇಟಿ
ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಭಾನುವಾರ ಮುಂಬೈನಲ್ಲಿರುವ ಎಂಎನ್‌ಎಸ್ ಅಧ್ಯಕ್ಷ ರಾಜ್ ಠಾಕ್ರೆ ಅವರ ನಿವಾಸಕ್ಕೆ ಭೇಟಿ ನೀಡಿದರು. ಠಾಕ್ರೆ ಅವರೊಂದಿಗೆ ಅವರ ಪತ್ನಿ ಶರ್ಮಿಳಾ, ಪುತ್ರ ಅಮಿತ್ ಮತ್ತು ಪಕ್ಷದ ಕೆಲವು ಕಾರ್ಯಕರ್ತರು ಉಪಸ್ಥಿತರಿದ್ದರು.
ಬುಧವಾರ ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಜ್ ಠಾಕ್ರೆ, ಮುಂಬೈನ ಸೌಂದರ್ಯಕ್ಕಾಗಿ 1,700 ಕೋಟಿ ರೂ.ಗಳನ್ನು ವ್ಯಯಿಸುತ್ತಿರುವ ಏಕನಾಥ್ ಶಿಂಧೆ-ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಕಳೆದ ವರ್ಷ ಜೂನ್‌ನಲ್ಲಿ ಬಂಡಾಯದ ಬಾವುಟ ಹಾರಿಸಿದ ಸಿಎಂ ಶಿಂಧೆ ಮತ್ತು ಅವರನ್ನು ಬೆಂಬಲಿಸುವ 39 ಶಾಸಕರು ಸೇರಿದಂತೆ ಹಲವು ಶಿವಸೇನೆ ನಾಯಕರು ಪಕ್ಷದಿಂದ ನಿರ್ಗಮಿಸಿದ್ದಕ್ಕೆ ಉದ್ಧವ್ ಠಾಕ್ರೆ ಅವರನ್ನು ರಾಜ್ ಠಾಕ್ರೆ ದೂಷಿಸಿದರು.
ಮುಂಬೈನ ಮಾಹಿಮ್ ಪ್ರದೇಶದ ಕರಾವಳಿಯಲ್ಲಿ ಅಕ್ರಮವಾಗಿ ನಿರ್ಮಿಸಲಾಗುತ್ತಿರುವ 'ಮಜಾರ್' ಅಥವಾ ಸಮಾಧಿಯಂತಹ ಕಟ್ಟಡದ ವೀಡಿಯೊವನ್ನು ಎಂಎನ್‌ಎಸ್ ಮುಖ್ಯಸ್ಥರು ಬುಧವಾರ ತೋರಿಸಿದ್ದರು. ಆದರೆ, ಆ ಕಟ್ಟಡವನ್ನು ಗುರುವಾರ ಧ್ವಂಸಗೊಳಿಸಲಾಗಿತ್ತು.