ಕೇಂದ್ರೀಯ ವಿವಿಗಳಿಂದ ಸುಮಾರು 11,000 ಒಬಿಸಿ, ಎಸ್ ಸಿ, ಎಸ್ ಟಿ ವಿದ್ಯಾರ್ಥಿಗಳ ಡ್ರಾಪ್ ಔಟ್: ಕೇಂದ್ರ ಸರ್ಕಾರ
2018ರಿಂದ 2023ರವರೆಗೂ ದೇಶದಲ್ಲಿನ 45 ಕೇಂದ್ರೀಯ ವಿವಿಗಳಿಂದ ಸುಮಾರು 11 ಸಾವಿರ ಒಬಿಸಿ, ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳು ಡ್ರಾಪ್ ಔಟ್ ಆಗಿದ್ದಾರೆ ಎಂದು ಬುಧವಾರ ರಾಜ್ಯಸಭೆಯಲ್ಲಿ ಮಾಹಿತಿ ನೀಡಲಾಯಿತು
Published: 29th March 2023 08:15 PM | Last Updated: 30th March 2023 02:28 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: 2018ರಿಂದ 2023ರವರೆಗೂ ದೇಶದಲ್ಲಿನ 45 ಕೇಂದ್ರೀಯ ವಿವಿಗಳಿಂದ ಸುಮಾರು 11 ಸಾವಿರ ಒಬಿಸಿ, ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳು ಡ್ರಾಪ್ ಔಟ್ ಆಗಿದ್ದಾರೆ ಎಂದು ಬುಧವಾರ ರಾಜ್ಯಸಭೆಯಲ್ಲಿ ಮಾಹಿತಿ ನೀಡಲಾಯಿತು.
ಕಳೆದ ಮೂರು ವರ್ಷಗಳಲ್ಲಿ ಈ ಮೂರು ಕೆಟಗರಿಯ ಸುಮಾರು 4,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಐಐಟಿಯಿಂದ ಹೊರಗುಳಿದಿದ್ದರೆ, ಇದೇ ಅವಧಿಯಲ್ಲಿ ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ನಿಂದ ಒಟ್ಟಾರೇ 366 ವಿದ್ಯಾರ್ಥಿಗಳು ಹೊರಗುಳಿದಿದ್ದಾರೆ ಎಂದು ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವ ಡಾ. ಸುಭಾಷ್ ಸರ್ಕಾರ್ ಲಿಖಿತ ರೂಪದಲ್ಲಿ ಪ್ರತಿಕ್ರಿಯಿದ್ದಾರೆ.
6,901 ಒಬಿಸಿ ವಿದ್ಯಾರ್ಥಿಗಳು ಕೇಂದ್ರೀಯ ವಿವಿ ತೊರೆದಿದ್ದರೆ, ಪರಿಶಿಷ್ಟ ಜಾತಿಯ 3,596 ವಿದ್ಯಾರ್ಥಿಗಳು ಮತ್ತು ಪರಿಶಿಷ್ಟ ಪಂಗಡದ 3,949 ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಮುಂದುವರೆಸಿಲ್ಲ, ಅದೇ ರೀತಿಯಲ್ಲಿ ಐಐಟಿಗಳಲ್ಲಿ 2,544 ಒಬಿಸಿ ವಿದ್ಯಾರ್ಥಿಗಳು ಡ್ರಾಪ್ ಔಟ್ ಆಗಿದ್ದರೆ, ಪರಿಶಿಷ್ಟ ಜಾತಿಯ 1,362 ಮತ್ತು ಪರಿಶಿಷ್ಟ ಪಂಗಡದ 538 ವಿದ್ಯಾರ್ಥಿಗಳು ತಮ್ಮ ಕೋರ್ಸ್ ಗಳನ್ನು ಮುಂದುವರೆಸಲು ಆಗಿಲ್ಲ.
ಐಐಎಂಗಳಲ್ಲಿ 133 ಒಬಿಸಿ ವಿದ್ಯಾರ್ಥಿಗಳು, 143 ಪರಿಶಿಷ್ಟ ಜಾತಿ ಮತ್ತು 90 ಎಸ್ ಟಿ ವಿದ್ಯಾರ್ಥಿಗಳು ತಮ್ಮ ಕೋರ್ಸ್ ಗಳಿಂದ ಡ್ರಾಪ್ ಔಟ್ ಆಗಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.
ತಮಿಳುನಾಡಿನ ತಿರುಚಿ ಶಿವಾ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಉನ್ನತ ಶಿಕ್ಷಣದಲ್ಲಿ ಅನೇಕ ಆಯ್ಕೆಗಳಿವೆ. ಒಂದೇ ಸಂಸ್ಥೆಯಲ್ಲಿ ಒಂದು ಕೋರ್ಸ್ ನಿಂದ ಮತ್ತೋಂದು ಕೋರ್ಸಿಗೆ ವಲಸೆ ಬರಬಹುದು ಎಂದು ಹೇಳಿದರು.