ಜೈಪುರ ಸ್ಫೋಟ ಪ್ರಕರಣ: ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿದ ರಾಜಸ್ಥಾನ ಹೈಕೋರ್ಟ್

71 ಮಂದಿಯನ್ನು  ಬಲಿ ಪಡೆದಿದ್ದ 2008ರ ಜೈಪುರ ಸರಣಿ ಸ್ಫೋಟ ಪ್ರಕರಣದ ಎಲ್ಲ ನಾಲ್ವರು ಆರೋಪಿಗಳನ್ನು ರಾಜಸ್ಥಾನ ಹೈಕೋರ್ಟ್ ಬುಧವಾರ ಖುಲಾಸೆಗೊಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಜೈಪುರ: 71 ಮಂದಿಯನ್ನು  ಬಲಿ ಪಡೆದಿದ್ದ 2008ರ ಜೈಪುರ ಸರಣಿ ಸ್ಫೋಟ ಪ್ರಕರಣದ ಎಲ್ಲ ನಾಲ್ವರು ಆರೋಪಿಗಳನ್ನು ರಾಜಸ್ಥಾನ ಹೈಕೋರ್ಟ್ ಬುಧವಾರ ಖುಲಾಸೆಗೊಳಿಸಿದೆ.

2019ರಲ್ಲಿ ವಿಚಾರಣಾ ನ್ಯಾಯಾಲಯವು ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಆರೋಪಿಗಳು ಈ ತೀರ್ಪು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲು ಅತ್ಯಂತ ಕಳಪೆ ತನಿಖೆ ನಡೆಸಿದ ತನಿಖಾ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಂಡಿದೆ.

2008 ರ ಮೇ 13 ರಂದು ಜೈಪುರದಲ್ಲಿ ಸರಣಿ ಬಾಂಬ್ ಸ್ಫೋಟವಾಗಿತ್ತು. ಸುಮಾರು 71 ಜನ ಬಾಂಬ್ ಸ್ಫೋಟದಲ್ಲಿ ಮೃತಪಟ್ಟಿದ್ದರು ಮತ್ತು 185ಕ್ಕೂ ಹೆಚ್ಚು ಜನ ಘಟನೆಯಲ್ಲಿ ಗಾಯಗೊಂಡಿದ್ದರು.

ರಾಮಚಂದ್ರ ದೇವಸ್ಥಾನದ ಬಳಿ ಒಂದು ಜೀವಂತ ಬಾಂಬ್ ಸಹ ಪತ್ತೆಯಾಗಿದ್ದು, ಅದನ್ನು ಬಾಂಬ್ ನಿಷ್ಕ್ರಿಯ ದಳ ನಿಷ್ಕ್ರಿಯಗೊಳಿಸಿತ್ತು.

ಡಿಸೆಂಬರ್ 2019 ರಲ್ಲಿ, ವಿಶೇಷ ನ್ಯಾಯಾಲಯವು ಮೊಹಮ್ಮದ್ ಸೈಫ್, ಮೊಹಮ್ಮದ್ ಸಲ್ಮಾನ್, ಸೈಫುರ್ ಮತ್ತು ಮೊಹಮ್ಮದ್ ಸರ್ವರ್ ಅಜ್ಮಿ ಎಂಬ ನಾಲ್ವರಿಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು ಮತ್ತು ಇನ್ನೊಬ್ಬ ಆರೋಪಿ ಶಹಬಾಜ್ ಹುಸೇನ್ ಅವರನ್ನು ಖುಲಾಸೆಗೊಳಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com