ಜಿ-20 ಸಭೆ: ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ ಪೂರೈಕೆ ಖಾತ್ರಿಗೆ ಶೀಘ್ರದಲ್ಲೇ ಫೋರ್ಟಲ್ ಆರಂಭ!

ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಶೀಘ್ರದಲ್ಲೇ ಬೀಜ ಪತ್ತೆ ಹಚ್ಚುವ ವ್ಯವಸ್ಥೆಯನ್ನು ಪ್ರಾರಂಭಿಸಲಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚಂಡೀಗಢ: ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಶೀಘ್ರದಲ್ಲೇ ಬೀಜ ಪತ್ತೆ ಹಚ್ಚುವ ವ್ಯವಸ್ಥೆಯನ್ನು ಪ್ರಾರಂಭಿಸಲಿದೆ.

ಭಾರತ ಕೆಲವು ಹವಾಮಾನ ಒತ್ತಡಕ್ಕೆ ಸಹಿಷ್ಣುವಾಗಿರುವ ಪ್ರಭೇದಗಳನ್ನು ವಿಶೇಷವಾಗಿ ಗೋಧಿಯನ್ನು ಅಭಿವೃದ್ಧಿಪಡಿಸಿದೆ. ಇದು ಜಿ-20 ರಾಷ್ಟ್ರಗಳ ಎರಡನೇ ಕೃಷಿ ಕಾರ್ಯಕಾರಿ ಗುಂಪಿನ ಸಭೆಯಲ್ಲಿ ಚರ್ಚೆಯ ಪ್ರಮುಖ ಕ್ಷೇತ್ರವಾಗಿತ್ತು. ಕೃಷಿ ಪರಿವರ್ತನೆಗಾಗಿ ಡಿಜಿಟಲೀಕರಣ ಮತ್ತು ಸಿರಿಧಾನ್ಯಗಳ ಅಂತಾರಾಷ್ಟ್ರೀಯ ಪ್ರಚಾರದ ಬಗ್ಗೆಯೂ ಚರ್ಚೆ ನಡೆಸಲಾಯಿತು.

ಸಭೆ ಉದ್ಘಾಟನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಸ್ಯಾಮ್ಯುಯೆಲ್ ಪ್ರವೀಣ್ ಕುಮಾರ್ ಬೀಜ ಪತ್ತೆ ಹಚ್ಚುವಿಕೆ ಪೋರ್ಟಲ್ ಅಭಿವೃದ್ಧಿಪಡಿಸುತ್ತಿದ್ದು,ಶೀಘ್ರದಲ್ಲೇ ಪ್ರಾರಂಭಿಸಲಾಗುವುದು. ಇದನ್ನು ರೈತರು ಉತ್ತಮ ಗುಣಮಟ್ಟದ ಬಿತ್ತನೆ ಬೀಜ ಪಡೆದಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ ಎಂದರು.

ರೈತರನ್ನು ತಲುಪಲು ನಮ್ಮಲ್ಲಿ ಸುಮಾರು ಎರಡು ಲಕ್ಷ ಮುಂಚೂಣಿ ವಿಸ್ತರಣಾ ಕಾರ್ಯಕರ್ತರಿದ್ದಾರೆ. ಈಗ ನಾವು ಡಿಜಿಟಲ್ ಫೋರ್ಟಲ್ ಕುರಿತ ಕೆಲಸದಲ್ಲಿ ಮಗ್ನರಾಗಿದ್ದೇವೆ ಎಂದು ಅವರು ತಿಳಿಸಿದರು.

ಕೃಷಿ ಕಾರ್ಯಕಾರಿ ಗುಂಪಿನ ಎರಡನೇ ಸಭೆಯಲ್ಲಿ ಕೃಷಿಯಲ್ಲಿ ಸುಸ್ಥಿರತೆ ಮತ್ತು ಹವಮಾನ ವೈಫರೀತ್ಯವನ್ನು ನಿಭಾಯಿಸುವ ಕುರಿತು ಗಮನ ಕೇಂದ್ರೀಕರಿಸಲಾಯಿತು. ಅಲ್ಲದೇ, ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷದ ಬಗ್ಗೆಯೂ ಚರ್ಚೆ ನಡೆಸಲಾಯಿತು, ಮೂರನೇ ಸಭೆಯಲ್ಲಿ,  ಕೃಷಿ ಶಿಕ್ಷಣ ಮತ್ತು ಸಂಶೋಧನೆ ಬಗ್ಗೆ ತಜ್ಞರು ಚರ್ಚೆ ನಡೆಸಲಿದ್ದಾರೆ ಎಂದು ಅವರು ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com