ಆರು ತಿಂಗಳಲ್ಲಿ 70 ರೀಲ್‌ಗಳನ್ನು ಮಾಡಿ ರೀಲ್ಸ್ ಕ್ವೀನ್ ಎಂದೇ ಹೆಸರಾಗಿದ್ದ 9 ವರ್ಷದ ಬಾಲಕಿ ಆತ್ಮಹತ್ಯೆ!

ಸಾಮಾಜಿಕ ಮಾಧ್ಯಮದಲ್ಲಿ ರೀಲ್‌ಗಳನ್ನು ಮಾಡುವ ಮೂಲಕ ಜನಪ್ರಿಯಳಾಗಿದ್ದ ತಿರುವಳ್ಳೂರು ಜಿಲ್ಲೆಯ ಒಂಬತ್ತು ವರ್ಷದ ಶಾಲಾ ವಿದ್ಯಾರ್ಥಿನಿಯೊಬ್ಬಳು, ಆಕೆಯ ಪೋಷಕರು ತನ್ನ ಸ್ನೇಹಿತರ ಮುಂದೆ ಗದರಿಸಿದರು ಎನ್ನುವ ಕಾರಣದಿಂದ ಮಂಗಳವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚೆನ್ನೈ: ಸಾಮಾಜಿಕ ಮಾಧ್ಯಮದಲ್ಲಿ ರೀಲ್‌ಗಳನ್ನು ಮಾಡುವ ಮೂಲಕ ಜನಪ್ರಿಯಳಾಗಿದ್ದ ತಿರುವಳ್ಳೂರು ಜಿಲ್ಲೆಯ ಒಂಬತ್ತು ವರ್ಷದ ಶಾಲಾ ವಿದ್ಯಾರ್ಥಿನಿಯೊಬ್ಬಳು, ಆಕೆಯ ಪೋಷಕರು ತನ್ನ ಸ್ನೇಹಿತರ ಮುಂದೆ ಗದರಿಸಿದರು ಎನ್ನುವ ಕಾರಣದಿಂದ ಮಂಗಳವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ನಾಲ್ಕನೇ ತರಗತಿಯ ವಿದ್ಯಾರ್ಥಿನಿ ಪ್ರತೀಕ್ಷಾ ಕಳೆದ ಆರು ತಿಂಗಳಲ್ಲಿ ಸುಮಾರು 70 ರೀಲ್‌ಗಳನ್ನು ಮಾಡಿದ್ದಳು ಮತ್ತು ಸ್ನೇಹಿತರು ಮತ್ತು ನೆರೆಹೊರೆಯವರಿಂದ 'ರೀಲ್ಸ್ ಕ್ವೀನ್' ಎಂದೇ ಕರೆಯಲ್ಪಡುತ್ತಿದ್ದಳು.

ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಪ್ರತೀಕ್ಷಾ ತನ್ನ ಪಕ್ಕದ ಬೀದಿಯಲ್ಲಿರುವ ತನ್ನ ಅಜ್ಜಿಯ ಮನೆಯ ಮುಂದೆ ಸ್ನೇಹಿತರೊಂದಿಗೆ ಆಟವಾಡುತ್ತಿದ್ದಾಗ ಆಕೆಯ ಪೋಷಕರಾದ ಕೃಷ್ಣಮೂರ್ತಿ ಮತ್ತು ಕರ್ಪಗಂ ಅಲ್ಲಿಗೆ ಬಂದಿದ್ದಾರೆ. ಹೆಚ್ಚಿನ ಸಮಯ ಆಟವಾಡಿದ್ದಕ್ಕಾಗಿ ಮತ್ತು ಮನೆಗೆ ಹಿಂತಿರುಗಿ ಬಂದು ಓದುವಂತೆ ಗದರಿಸಿದ್ದಾರೆ.

ನಂತರ ಪೋಷಕರು ಬಾಲಕಿಗೆ ಮನೆಯ ಕೀಗಳನ್ನು ನೀಡಿದ್ದಾರೆ ಮತ್ತು ಮನೆಗೆ ಅಗತ್ಯವಾದ ಕೆಲವು ವಸ್ತುಗಳನ್ನು ಖರೀದಿಸಿ ಬರುವುದಾಗಿ ಹೇಳಿ ಹೋಗಿದ್ದಾರೆ.

ಒಂದು ಗಂಟೆಯ ನಂತರ ಹಿಂತಿರುಗಿ ನೋಡಿದಾಗ ಮನೆಯ ಒಳಗಿನಿಂದ ಬೀಗ ಹಾಕಿರುವುದು ಕಂಡು ಬಂದಿದೆ. ಪದೇ ಪದೆ ಬಾಗಿಲು ಬಡಿದರೂ ಪ್ರತೀಕ್ಷಾ ಪ್ರತಿಕ್ರಿಯಿಸಿಲ್ಲ. ಬಳಿಕ ಬಾಗಿಲು ಒಡೆದು ಒಳಪ್ರವೇಶಿಸಿದಾಗ ಪ್ರತೀಕ್ಷಾ ಕಿಟಕಿಯ ಗ್ರಿಲ್‌ನಲ್ಲಿ ಕುತ್ತಿಗೆಗೆ ಟವೆಲ್‌ನಿಂದ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. 

ದಂಪತಿ ಕೂಡಲೇ ತಮ್ಮ ಮಗಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಆವೇಳೆಗಾಗಲೇ ಪ್ರತೀಕ್ಷಾ ಕೊನೆಯುಸಿರೆಳೆದಿದ್ದಳು. ತಿರುವಳ್ಳೂರು ಟೌನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

ಇಂಟರ್ನೆಟ್‌ಗೆ ಅನಿಯಂತ್ರಿತ ಪ್ರವೇಶವು ಯುವ ಮನಸ್ಸುಗಳನ್ನು ಎಲ್ಲಾ ರೀತಿಯ ಪ್ರಭಾವಗಳಿಗೆ ಒಡ್ಡುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com