ವಿಧಾನಸಭೆಯಲ್ಲಿ ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿದ ಬಿಜೆಪಿ ಶಾಸಕ, ವಿಡಿಯೋ ವೈರಲ್!
ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಮೊಬೈಲ್ ನಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Published: 30th March 2023 04:02 PM | Last Updated: 30th March 2023 05:41 PM | A+A A-

ಜದಾಬ್ ಲಾಲ್ ನಾಥ್
ತ್ರಿಪುರ: ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಮೊಬೈಲ್ ನಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ತ್ರಿಪುರಾದಲ್ಲಿ ಭಾರತೀಯ ಜನತಾ ಪಕ್ಷ(ಬಿಜೆಪಿ) ಗೆಲುವಿನೊಂದಿಗೆ ಮತ್ತೆ ಅಧಿಕಾರಕ್ಕೆ ಬಂದಿದೆ. ಕಮ್ಯುನಿಸ್ಟ್ ಪಕ್ಷಗಳ ಭದ್ರಕೋಟೆಯಾಗಿರುವ ಈ ರಾಜ್ಯದಲ್ಲಿ ಸತತ ಎರಡನೇ ಬಾರಿಗೆ ಸರ್ಕಾರ ರಚಿಸಿರುವ ಬಿಜೆಪಿ ಶಾಸಕರೊಬ್ಬರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ವಿಧಾನಸಭೆ ಅಧಿವೇಶನದ ವೇಳೆ ಶಾಸಕರು ಸದನದಲ್ಲಿ ಕುರ್ಚಿ ಮೇಲೆ ಕುಳಿತು ಮೊಬೈಲ್ ನಲ್ಲಿ ಪೋರ್ನ್ ವೀಕ್ಷಿಸುತ್ತಿದ್ದರು ಎಂದು ಆರೋಪಿಸಲಾಗಿದೆ.
ತ್ರಿಪುರಾದ ಬಾಗ್‌ಬಾಸಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಜದಾಬ್ ಲಾಲ್ ನಾಥ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಬಿಜೆಪಿ ಶಾಸಕ ಜದಾಬ್ ಲಾಲ್ ನಾಥ್ ತಮ್ಮ ಆಸನದಲ್ಲಿ ಕುಳಿತು ಮೊಬೈಲ್ ಫೋನ್‌ನಲ್ಲಿ ವಿಡಿಯೋ ವೀಕ್ಷಿಸುತ್ತಿರುವುದು ವಿಡಿಯೋದಲ್ಲಿ ಕಂಡುಬರುತ್ತದೆ. ಜದಬ್ ಲಾಲ್ ನಾಥ್ ಅವರು ತಮ್ಮ ಮೊಬೈಲ್ ಫೋನ್‌ನಲ್ಲಿ ವೀಡಿಯೊ ವೀಕ್ಷಿಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: ತ್ರಿಪುರಾ: ಕೇಂದ್ರ ಸಚಿವೆ ಪ್ರತಿಮಾ ಭೌಮಿಕ್ ಶಾಸಕಿ ಸ್ಥಾನಕ್ಕೆ ರಾಜೀನಾಮೆ
ಸಿಪಿಎಂನ ಬಲಿಷ್ಠ ಕೋಟೆಗಳಲ್ಲಿ ಕಣಕ್ಕಿಳಿದಿರುವ ಬಗ್ಬಾಸಾ ವಿಧಾನಸಭಾ ಕ್ಷೇತ್ರದಲ್ಲಿ ಜದಬ್ ಲಾಲ್ ನಾಥ್ ಬಿಜೆಪಿ ಗೆಲುವಿನ ಪತಾಕೆ ಹಾರಿಸಿದ್ದರು. 2018ರ ಚುನಾವಣೆಯಲ್ಲೂ ಬಿಜೆಪಿ ಬಾಗ್‌ಬಾಸಾ ವಿಧಾನಸಭಾ ಸ್ಥಾನವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. 2018 ರ ಚುನಾವಣೆಯಲ್ಲಿ ಸಿಪಿಎಂನ ಬಿಜಿತಾ ನಾಥ್ ಅವರು ಬಿಜೆಪಿಯ ಪ್ರದೀಪ್ ಕುಮಾರ್ ನಾಥ್ ಅವರನ್ನು 270 ಮತಗಳಿಂದ ಸೋಲಿಸಿದರು. 2023ರ ಚುನಾವಣೆಯಲ್ಲಿ ಬಿಜೆಪಿ ಜಾದಬ್ ಲಾಲ್ ನಾಥ್ ಮೇಲೆ ಬೆಟ್ಟಿಂಗ್ ನಡೆಸಿತ್ತು.
ಜದಬ್ ಲಾಲ್ ನಾಥ್ ಅವರು ಸಿಪಿಎಂನ ಹಾಲಿ ಶಾಸಕ ಬಿಜಿತಾ ನಾಥ್ ಅವರನ್ನು 1400 ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದಾರೆ. ತೃಣಮೂಲ ಕಾಂಗ್ರೆಸ್ ನ ಬಿಮಲ್ ನಾಥ್ ತೃತೀಯ ಹಾಗೂ ತಿಪ್ರಾ ಮೋಥಾದ ಕಲ್ಪನಾ ಸಿನ್ಹಾ ನಾಲ್ಕನೇ ಸ್ಥಾನ ಪಡೆದರು.
So, BJP MLAs keep the legacy of watching porn during the Assembly sessions!
— Mayukh Biswas (@MayukhDuke) March 30, 2023
Now, BJP MLA from Bagbassa, north tripura Jadab Lal Nath was caught watching porn during the Tripura Assembly session.
Shame!#ModiHaiTohMumkinHai#SanskariRSS #BJPFailsIndia pic.twitter.com/iVyoF6fNj5