ಉದ್ವಿಗ್ನ ಪರಿಸ್ಥಿತಿ: ಮಣಿಪುರಕ್ಕೆ ರೈಲು ಸೇವೆ ಸ್ಥಗಿತ- ಎನ್ ಎಫ್ ಆರ್
ಈಶಾನ್ಯ ರಾಜ್ಯ ಮಣಿಪುರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದ್ದು, ಉದ್ವಿಗ್ನ ಪರಿಸ್ಥಿತಿವೇರ್ಪಟ್ಟಿರುವುದಕ್ಕೆ ತಕ್ಷಣದಿಂದಲೇ ಜಾರಿಗೆ ಬರುವಂತೆ ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ಈಶಾನ್ಯ ವಿಭಾಗದ ರೈಲ್ವೇ ವಕ್ತಾರರು ಶುಕ್ರವಾರ ತಿಳಿಸಿದ್ದಾರೆ.
Published: 05th May 2023 08:52 PM | Last Updated: 05th May 2023 08:56 PM | A+A A-

ಸಾಂದರ್ಭಿಕ ಚಿತ್ರ
ಗುವಾಹಟಿ: ಈಶಾನ್ಯ ರಾಜ್ಯ ಮಣಿಪುರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದ್ದು, ಉದ್ವಿಗ್ನ ಪರಿಸ್ಥಿತಿವೇರ್ಪಟ್ಟಿರುವುದಕ್ಕೆ ತಕ್ಷಣದಿಂದಲೇ ಜಾರಿಗೆ ಬರುವಂತೆ ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ಈಶಾನ್ಯ ವಿಭಾಗದ ರೈಲ್ವೇ ವಕ್ತಾರರು ಶುಕ್ರವಾರ ತಿಳಿಸಿದ್ದಾರೆ.
ಮಣಿಪುರ ಸಂಪರ್ಕಿಸುವ ಎರಡು ರೈಲುಗಳನ್ನು ಶುಕ್ರವಾರದಿಂದ ಎರಡು ದಿನಗಳವರೆಗೆ ರದ್ದುಗೊಳಿಸಲಾಗಿದೆ ಎಂದು ಎನ್ಎಫ್ಆರ್ ಸಿಪಿಆರ್ ಒ ಸಬ್ಯಸಾಚಿ ಡಿ ಹೇಳಿದ್ದಾರೆ. ಪರಿಸ್ಥಿತಿ ಅವಲೋಕಿಸಿದ ನಂತರ ಸೇವೆಯನ್ನು ಪುನರಾರಂಭಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಮಣಿಪುರದಲ್ಲಿ ತೀವ್ರ ಹಿಂಸಾಚಾರ: ಪರಿಸ್ಥಿತಿ ಕೈಮೀರಿದರೆ ಕಂಡಲ್ಲಿ ಗುಂಡು ಹಾರಿಸುವಂತೆ ಸರ್ಕಾರ ಆದೇಶ
ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ಚಲಿಸುವ ಅಗರ್ತಲಾ'"ಖೋಂಗ್‌ಸಾಂಗ್ ಜನ್ ಶತಾಬ್ದಿ ಎಕ್ಸ್‌ಪ್ರೆಸ್ ಮತ್ತು ದೈನಂದಿನ ಸಿಲ್ಚಾರ್'"ವಂಗೈಚುಂಗ್‌ಪಾವೊ ಪ್ಯಾಸೆಂಜರ್ ರೈಲುಗಳನ್ನು ಅಲ್ಪಾವಧಿಗೆ ರದ್ದುಗೊಳಿಸಲಾಗಿದ್ದು, ಈ ರೈಲುಗಳನ್ನು ಅಸ್ಸಾಂ ಗಡಿಯಲ್ಲಿರುವ ಅರುಣಾಚಲ ರೈಲು ನಿಲ್ದಾಣದಲ್ಲಿಯೇ ಕೊನೆಗೊಳಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.