ತೆಲಂಗಾಣ: ನಾಲ್ವರು ಮಕ್ಕಳಿದ್ದರೂ ಭಾರವಾದ ತಂದೆ, ನೊಂದು ಚಿತೆಗೆ ಹಾರಿದ 90 ವರ್ಷ ವಯಸ್ಸಿನ ವ್ಯಕ್ತಿ

ತನ್ನ ನಾಲ್ವರು ಪುತ್ರರಲ್ಲಿ ಯಾರೊಬ್ಬರೂ ತನ್ನನ್ನು ನೋಡಿಕೊಳ್ಳಲು ಮುಂದಾಗುತ್ತಿಲ್ಲ ಎಂದು ಹತಾಶೆಗೊಂಡ 90 ವರ್ಷದ ಜಿ ವೆಂಕಟಯ್ಯ ಅವರು ಬುಧವಾರ ತಾವೇ ಸಿದ್ಧಪಡಿಸಿಕೊಂಡ ಚಿತೆಗೆ ಹಾರಿ ಜೀವ ಕಳೆದುಕೊಂಡಿರುವ ಮನಕಲಕುವ ಘಟನೆ ಸಿದ್ದಿಪೇಟೆ ಜಿಲ್ಲೆಯ ಹುಸ್ನಾಬಾದ್ ಮಂಡಲದ ಪೊಟ್ಲಪಲ್ಲಿಯಲ್ಲಿ ನಡೆದಿದೆ. 
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಸಿದ್ದಿಪೇಟೆ: ತನ್ನ ನಾಲ್ವರು ಪುತ್ರರಲ್ಲಿ ಯಾರೊಬ್ಬರೂ ತನ್ನನ್ನು ನೋಡಿಕೊಳ್ಳಲು ಮುಂದಾಗುತ್ತಿಲ್ಲ ಎಂದು ಹತಾಶೆಗೊಂಡ 90 ವರ್ಷದ ಜಿ ವೆಂಕಟಯ್ಯ ಅವರು ಬುಧವಾರ ತಾವೇ ಸಿದ್ಧಪಡಿಸಿಕೊಂಡ ಚಿತೆಗೆ ಹಾರಿ ಜೀವ ಕಳೆದುಕೊಂಡಿರುವ ಮನಕಲಕುವ ಘಟನೆ ಸಿದ್ದಿಪೇಟೆ ಜಿಲ್ಲೆಯ ಹುಸ್ನಾಬಾದ್ ಮಂಡಲದ ಪೊಟ್ಲಪಲ್ಲಿಯಲ್ಲಿ ನಡೆದಿದೆ. 

ಗುರುವಾರ ತಡರಾತ್ರಿ ಈ ಘಟನೆ ಬೆಳಕಿಗೆ ಬಂದಿದ್ದು, ಹೆಂಡತಿಯನ್ನು ಕಳೆದುಕೊಂಡಿದ್ದ ವೆಂಕಟಯ್ಯ ಅವರು ತಮ್ಮ ಪುತ್ರರು ತಮ್ಮನ್ನು ನೋಡಿಕೊಳ್ಳುತ್ತಿಲ್ಲ ಎಂದು ಅಸಮಾಧಾನಗೊಂಡಿದ್ದರು.

<strong>ವೆಂಕಟಯ್ಯ</strong>
ವೆಂಕಟಯ್ಯ

ಗ್ರಾಮದ ಹಿರಿಯ ನರಸಿಂಹ ರೆಡ್ಡಿ ಪ್ರಕಾರ, ವೆಂಕಟಯ್ಯನ ನಾಲ್ವರು ಪುತ್ರರು ತಲಾ ಎರಡು ತಿಂಗಳ ಕಾಲ ತಮ್ಮ ತಂದೆಯನ್ನು ನೋಡಿಕೊಳ್ಳಲು ಒಪ್ಪಿಕೊಂಡಿದ್ದರು. ಕಳೆದ 30 ವರ್ಷಗಳಿಂದ ವೆಂಕಟಯ್ಯ ವಾಸಿಸುತ್ತಿದ್ದ ಪೊಟ್ಲಪಲ್ಲಿಯಲ್ಲಿ ಅವರ ಹಿರಿಯ ಮಗ ಕನಕಯ್ಯನ ಎರಡು ತಿಂಗಳ ಆರೈಕೆ ಪೂರ್ಣಗೊಂಡಾಗ, ಅವರು ತಮ್ಮ ಇನ್ನೊಬ್ಬ ಮಗನ ಬಳಿಗೆ ಹೋಗಬೇಕಾಗಿತ್ತು. ಆದರೆ, ಅವರಿಗೆ ತನ್ನ ಹಳ್ಳಿಯನ್ನು ಬಿಟ್ಟು ಹೋಗಲು ಮನಸ್ಸಿರಲಿಲ್ಲ. ಕನಕಯ್ಯ ತನ್ನ ತಂದೆಯನ್ನು ಇನ್ನೊಬ್ಬ ಮಗನ ಬಳಿಗೆ ಹೋಗುವಂತೆ ಕೇಳಿದಾಗ ವೆಂಕಟಯ್ಯ ಅಸಮಾಧಾನಗೊಂಡರು.

ನಡೆದ ಸಂಗತಿಯನ್ನು ವೆಂಕಟಯ್ಯ ಅವರು ನರಸಿಂಹ ರೆಡ್ಡಿ ಬಳಿ ಹೋಗಿ ತಿಳಿಸಿದರು. ಈ ವೇಳೆ ನರಸಿಂಹ ರೆಡ್ಡಿ ಅವರು ವೆಂಕಟಯ್ಯನ ಇತರ ಪುತ್ರರೊಂದಿಗೆ ಮಾತನಾಡಿ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಿದ್ದಾರೆ. ವೆಂಕಟಯ್ಯ ತನ್ನ ಹಿರಿಯ ಮಗನೊಂದಿಗೆ ತನ್ನೂರಿನಲ್ಲೇ ಇರಲು ತಿಂಗಳಿಗೆ 1,500 ರೂ. ನೀಡುವಂತೆ ಇತರ ಪುತ್ರರಿಗೆ ಹೇಳಿದ್ದಾರೆ.  ಮಂಗಳವಾರ ತಂದೆ ನರಸಿಂಹ ರೆಡ್ಡಿ ಅವರನ್ನು ಮನೆಯಲ್ಲಿ ಬಿಟ್ಟು ಹೋಗಿದ್ದರು.

ನರಸಿಂಹ ರೆಡ್ಡಿ ಪ್ರಕಾರ, ಧರ್ಮಪುರಿಯಲ್ಲಿ ತನ್ನ ಪತಿಯೊಂದಿಗೆ ವಾಸಿಸುತ್ತಿದ್ದ ಮಗಳನ್ನು ಭೇಟಿ ಮಾಡಲು ವೆಂಕಟಯ್ಯ ಬಯಸಿದ್ದರು. ನರಸಿಂಹ ರೆಡ್ಡಿ ಅವರು, ರಾತ್ರಿ ತನ್ನ ಮನೆಯಲ್ಲಿಯೇ ಇರಲು ಮತ್ತು ಊಟ ಮಾಡುವಂತೆ ವೆಂಕಟಯ್ಯ ಅವರನ್ನು ಕರೆದಿದ್ದಾರೆ. ಆದರೆ, ವೆಂಕಟಯ್ಯ ಅವರು ಮರುದಿನ ಬೆಳಿಗ್ಗೆ ಚಹಾವನ್ನು ಸಹ ತೆಗೆದುಕೊಳ್ಳದೆ ಮನೆಯಿಂದ ಹೊರಟುಹೋಗಿದ್ದರು.

ಮಗಳನ್ನು ಭೇಟಿಯಾಗುವುದಾಗಿ ಹೇಳಿದ್ದ ವೆಂಕಟಯ್ಯ, ಮನನೊಂದು ಗ್ರಾಮದ ಹೊರವಲಯದಲ್ಲಿರುವ ಗುಡ್ಡಕ್ಕೆ ಹೋಗಿ ಚಿತೆ ಮಾಡಿಕೊಂಡಿದ್ದಾರೆ ಮತ್ತು ಅದಕ್ಕೆ ಹಾರಿದ್ದಾರೆ ಎಂದು ಪೊಲೀಸರು ಹಾಗೂ ಗ್ರಾಮಸ್ಥರು ಶಂಕಿಸಿದ್ದಾರೆ. ಸ್ಥಳೀಯರು ಮತ್ತು ಪೊಲೀಸರು ಬುಧವಾರ ಸಂಜೆ ಅವರ ಸುಟ್ಟ ಶವವನ್ನು ಕಂಡಿದ್ದಾರೆ. ಬಳಿಕ ಅದು ಕನಕಯ್ಯ ಎಂದು ತಿಳಿದುಬಂದಿದೆ.

ನಂತರ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ ಮತ್ತು ಕನಕಯ್ಯ ಅವರಿಗೆ ದೇಹವನ್ನು ಹಸ್ತಾಂತರಿಸಿದ್ದಾರೆ. ಕನಕಯ್ಯ ಅವರು ತಮ್ಮ ಮೂವರು ಸಹೋದರರೊಂದಿಗೆ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ, ಇನ್ನೆರಡು ತಿಂಗಳು ಹುಸ್ನಾಬಾದ್‌ನಲ್ಲಿರುವ ಎರಡನೇ ಮಗನ ಬಳಿಗೆ ವೆಂಕಟಯ್ಯ ಅವರು ಹೋಗಬೇಕಿತ್ತು. ಬದಲಾಗಿ ಊರು ಬಿಡಲು ಮನಸ್ಸಿಲ್ಲದ ತಂದೆ ಆತ್ಮಹತ್ಯೆ ಮಾಡಿಕೊಂಡರು ಎಂದು ದೂರು ನೀಡಿದ್ದಾರೆ ಎಂದು ಹುಸ್ನಾಬಾದ್ ಸರ್ಕಲ್ ಇನ್ಸ್‌ಪೆಕ್ಟರ್ ಇ.ಕಿರಣ್ ತಿಳಿಸಿದ್ದಾರೆ. 

ವೆಂಕಟಯ್ಯ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕನಕಯ್ಯ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸಿಐ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com