ಮಧ್ಯ ಪ್ರದೇಶ ಮಾಜಿ ಸಿಎಂ ಕೈಲಾಶ್ ಚಂದ್ರ ಜೋಶಿ ಪುತ್ರ ದೀಪಕ್ ಕಾಂಗ್ರೆಸ್ ಸೇರ್ಪಡೆ

ಇತ್ತೀಚಿಗಷ್ಟೇ ಬಿಜೆಪಿ ತೊರೆದಿದ್ದ ಮಧ್ಯ ಪ್ರದೇಶ ಮಾಜಿ ಮುಖ್ಯಮಂತ್ರಿ ಕೈಲಾಶ್ ಚಂದ್ರ ಜೋಶಿ ಅವರ ಪುತ್ರ, ಮಾಜಿ ಸಚಿವ ದೀಪಕ್ ಜೋಶಿ ಅವರು ಶನಿವಾರ ಭೋಪಾಲ್‌ನಲ್ಲಿ ಪ್ರತಿಪಕ್ಷ ಕಾಂಗ್ರೆಸ್‌ಗೆ ಸೇರಿದ್ದಾರೆ.
ದೀಪಕ್ ಕಾಂಗ್ರೆಸ್ ಸೇರ್ಪಡೆ
ದೀಪಕ್ ಕಾಂಗ್ರೆಸ್ ಸೇರ್ಪಡೆ

ಭೋಪಾಲ್: ಇತ್ತೀಚಿಗಷ್ಟೇ ಬಿಜೆಪಿ ತೊರೆದಿದ್ದ ಮಧ್ಯ ಪ್ರದೇಶ ಮಾಜಿ ಮುಖ್ಯಮಂತ್ರಿ ಕೈಲಾಶ್ ಚಂದ್ರ ಜೋಶಿ ಅವರ ಪುತ್ರ, ಮಾಜಿ ಸಚಿವ ದೀಪಕ್ ಜೋಶಿ ಅವರು ಶನಿವಾರ ಭೋಪಾಲ್‌ನಲ್ಲಿ ಪ್ರತಿಪಕ್ಷ ಕಾಂಗ್ರೆಸ್‌ಗೆ ಸೇರಿದ್ದಾರೆ.

ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ದೀಪಕ್ ಜೋಶಿ ಅವರು 2013 ಮತ್ತು 2018 ರ ನಡುವೆ ಹಿಂದಿನ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರದಲ್ಲಿ ಶಾಲಾ ಮತ್ತು ತಾಂತ್ರಿಕ ಶಿಕ್ಷಣ ಸಚಿವರಾಗಿದ್ದರು.

ಕಾಂಗ್ರೆಸ್ ರಾಜ್ಯಾಧ್ಯಕ್ಷ ಕಮಲ್ ನಾಥ್ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಡಾ.ಗೋವಿಂದ್ ಸಿಂಗ್ ಸೇರಿದಂತೆ ಹಿರಿಯ ನಾಯಕರ ಸಮ್ಮುಖದಲ್ಲಿ ದೀಪಕ್ ಜೋಶಿ ಅವರು ಕಾಂಗ್ರೆಸ್‌ಗೆ ಸೇರ್ಪಡೆಯಾದರು.

ಕಾಂಗ್ರೆಸ್ ಸೇರಿದ ಬಳಿಕ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಜೋಶಿ, “ನಾನು ಅವರು (ಸಿಎಂ) ಓದಿದ ಕಾಲೇಜಿನ ಅಧ್ಯಕ್ಷನಾಗಿದ್ದೆ ಮತ್ತು ಅವರ ಎಲ್ಲಾ ಕುತಂತ್ರಗಳನ್ನು ತಿಳಿದಿದ್ದೆ. ನಾನು ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಲು ಅಥವಾ ಯಾವುದೇ ಹುದ್ದೆಯನ್ನು ಪಡೆಯಲು ಕಾಂಗ್ರೆಸ್‌ಗೆ ಸೇರಿಲ್ಲ ಎಂದು ಹೇಳಿದ್ದಾರೆ.

ಬಿಜೆಪಿಯಲ್ಲಿ ನನಗೆ ಅವಮಾನ ಮಾಡಲಾಗಿದೆ. ಹೀಗಾಗಿ ನನಗೆ, ನನ್ನ ಕುಟುಂಬಕ್ಕೆ ಮತ್ತು ನಮ್ಮ ಕಾರ್ಯಕರ್ತರಿಗೆ ಸಲ್ಲಬೇಕಾದ ಗೌರವ ಪಡೆಯಲು ಕಾಂಗ್ರೆಸ್‌ಗೆ ಸೇರಿದ್ದೇನೆ ಎಂದು ಜೋಶಿ ಸ್ಪಷ್ಟಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com