'ಮುಸ್ಲಿಮರಲ್ಲಿ ಸಹಿಷ್ಣುಗಳು ಬೆರಳೆಣಿಕೆಯಷ್ಟು ಮಾತ್ರ.. ಮದರಾಸಾದಲ್ಲಿ ಕಲಿತರೆ ಇಮಾಮ್ ಗಳು... ಶಾಲೆಗಳಲ್ಲಿ ಕಲಿತರೆ ಅಬ್ದುಲ್ ಕಲಾಂಗಳಾಗುತ್ತಾರೆ'
ಮುಸ್ಲಿಮರಲ್ಲಿ ಸಹಿಷ್ಣುಗಳು ಬೆರಳೆಣಿಕೆಯಷ್ಟು ಮಾತ್ರ ಇದ್ದು, ಇದು "ಮುಖವಾಡ ಧರಿಸಿ ಸಾರ್ವಜನಿಕ ಜೀವನ ನಡೆಸುವ ತಂತ್ರವಾಗಿದೆ ಎಂದು ಕೇಂದ್ರ ಸಚಿವ ಸತ್ಯ ಪಾಲ್ ಸಿಂಗ್ ಬಘೇಲ್ ಹೇಳಿದ್ದಾರೆ.
Published: 09th May 2023 02:17 PM | Last Updated: 09th May 2023 05:29 PM | A+A A-

ಕೇಂದ್ರ ಸಚಿವ ಸತ್ಯ ಪಾಲ್ ಸಿಂಗ್ ಬಘೇಲ್
ನವದೆಹಲಿ: ಮುಸ್ಲಿಮರಲ್ಲಿ ಸಹಿಷ್ಣುಗಳು ಬೆರಳೆಣಿಕೆಯಷ್ಟು ಮಾತ್ರ ಇದ್ದು, ಇದು "ಮುಖವಾಡ ಧರಿಸಿ ಸಾರ್ವಜನಿಕ ಜೀವನ ನಡೆಸುವ ತಂತ್ರವಾಗಿದೆ ಎಂದು ಕೇಂದ್ರ ಸಚಿವ ಸತ್ಯ ಪಾಲ್ ಸಿಂಗ್ ಬಘೇಲ್ ಹೇಳಿದ್ದಾರೆ.
ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ ಮಾಡಲು ಆರ್‌ಎಸ್‌ಎಸ್ ಮಾಧ್ಯಮ ವಿಭಾಗ ಇಂದ್ರಪ್ರಸ್ಥ ವಿಶ್ವ ಸಂವಾದ ಕೇಂದ್ರ ಆಯೋಜಿಸಿದ್ದ ದೇವ್ ಋಷಿ ನಾರದ್ ಪತ್ರಕಾರ್ ಸಮ್ಮಾನ್ ಸಮಾರೋಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆಯ ರಾಜ್ಯ ಸಚಿವ ಸತ್ಯ ಪಾಲ್ ಸಿಂಗ್ ಬಘೇಲ್, ಸಹಿಷ್ಣು ಮುಸ್ಲಿಮರನ್ನು ಬೆರಳಲ್ಲಿ ಎಣಿಸಬಹುದು.. ಸಹಿಷ್ಣುತೆಯು ಅವರು ಮುಖವಾಡ ಧರಿಸಿ ಅವರು ಸಾರ್ವಜನಿಕ ಜೀವನ ನಡೆಸುವ ತಂತ್ರವಾಗಿದೆ. ಇದು ಉಪರಾಷ್ಟ್ರಪತಿ, ರಾಜ್ಯಪಾಲರು ಅಥವಾ ಉಪಕುಲಪತಿಗಳಿಗೆ ಕಾರಣವಾಗುತ್ತದೆ. ಆದರೆ ಅಂತಹ "ಬುದ್ಧಿಜೀವಿಗಳೆಂದು ಕರೆಯಲ್ಪಡುವ" ಸಮುದಾಯದ ನಿಜವಾದ ಮುಖವು ಅವರು ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ನಂತರ ಅಥವಾ ನಿವೃತ್ತಿಯ ನಂತರ ಬಹಿರಂಗಗೊಳ್ಳುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಜಮ್ಮು ಮತ್ತು ಕಾಶ್ಮೀರದ ಮಾಜಿ ಗವರ್ನರ್ ಸತ್ಯಪಾಲ್ ಮಲಿಕ್‌ರ ದೆಹಲಿ ನಿವಾಸದಲ್ಲಿ ಸಿಬಿಐ ತಂಡ
ಆ ಮೂಲಕ ಬಘೇಲ್ ಪರೋಕ್ಷವಾಗಿ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಅವರನ್ನು ಉದ್ದೇಶಿಸಿ ಅವರ ಹೆಸರು ಹೇಳದೇ ವಾಗ್ದಾಳಿ ನಡೆಸಿದ್ದು, ದೇಶದಲ್ಲಿನ ಸಹಿಷ್ಣು ಮುಸ್ಲಿಮರನ್ನು ಬೆರಳಲ್ಲಿ ಎಣಿಸಬಹುದು. ಅವರ ಸಂಖ್ಯೆ ಸಾವಿರಾರು ಏನೂ ಇಲ್ಲ.. ಎಂದು ನಾನು ಭಾವಿಸುತ್ತೇನೆ. ಇದು ಅವರು ಮುಖವಾಡ ಧರಿಸಿ ಸಾರ್ವಜನಿಕ ಜೀವನದಲ್ಲಿ ಬದುಕುವ ತಂತ್ರವಾಗಿದೆ. ಆದರೆ ಅವರು ನಿವೃತ್ತಿಯಾದಾಗ, ಅವರು ನಿಜವಾದ ಹೇಳಿಕೆಗಳನ್ನು ನೀಡುತ್ತಾರೆ, ಅವರು ಕುರ್ಚಿಯಿಂದ ಹೊರಬಂದಾಗ, ಅವರು ತಮ್ಮ ನೈಜತೆಯನ್ನು ತೋರಿಸುವ ಹೇಳಿಕೆಯನ್ನು ನೀಡುತ್ತಾರೆ" ಎಂದು ಅವರು ಹೇಳಿದರು.
ಮಾಹಿತಿ ಆಯುಕ್ತ ಉದಯ್ ಮಹುರ್ಕರ್ ಅವರು ಸಮಾರಂಭದಲ್ಲಿ ತಮ್ಮ ಭಾಷಣದಲ್ಲಿ ಭಾರತವು ಇಸ್ಲಾಮಿಕ್ ಮೂಲಭೂತವಾದದ ವಿರುದ್ಧ ಹೋರಾಡಬೇಕು.. ಆದರೆ "ಸಹಿಷ್ಣು ಮುಸ್ಲಿಮರನ್ನು ಜೊತೆಯಲ್ಲಿ ಕರೆದೊಯ್ಯಬೇಕು" ಎಂದು ಹೇಳಿದ ಬೆನ್ನಲ್ಲೇ ಕೇಂದ್ರ ಸಚಿವರು ಈ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಅಧಿಕಾರ ತ್ಯಜಿಸಿದ ನಂತರ ಪುಲ್ವಾಮಾ ದಾಳಿ ಪ್ರಶ್ನಿಸುತ್ತಿಲ್ಲ, ಅಂದೇ ಹೇಳಿದ್ದೆ: ಸತ್ಯಪಾಲ್ ಮಲಿಕ್
'ಮೊಘಲ್ ಚಕ್ರವರ್ತಿ ಅಕ್ಬರ್ ತನ್ನ ಆಳ್ವಿಕೆಯಲ್ಲಿ ಹಿಂದೂ-ಮುಸ್ಲಿಂ ಐಕ್ಯತೆಯನ್ನು ಬೆಳೆಸಲು ಮಾಡಿದ ಪ್ರಯತ್ನಗಳನ್ನು ಉಲ್ಲೇಖಿಸುತ್ತಾ, ಛತ್ರಪತಿ ಶಿವಾಜಿ ಅವರನ್ನು "ಸಕಾರಾತ್ಮಕ ಬೆಳಕಿನಲ್ಲಿ" ನೋಡಿದ್ದಾರೆ ಎಂದು ಮಹೂರ್ಕರ್ ಹೇಳಿದ್ದಾರೆ. ಹಿಂದೂ-ಮುಸ್ಲಿಂ ಐಕ್ಯತೆಯನ್ನು ಸಾಧಿಸಲು ಅಕ್ಬರ್ ತಮ್ಮ ಕೈಲಾದಷ್ಟು ಪ್ರಯತ್ನಿಸಿದರು ಎಂದು ಅವರು ಹೇಳಿದರು.
ಮಹೂರ್ಕರ್ ಅವರ ಹೇಳಿಕೆಯನ್ನು ತಳ್ಳಿ ಹಾಕಿದ ಬಘೇಲ್, 'ಅಕ್ಬರನ ಪ್ರಯತ್ನಗಳನ್ನು ಕೇವಲ "ತಂತ್ರಗಳು" ಎಂದು ಕರೆದರು ಮತ್ತು ಜೋಧಾ ಬಾಯಿಯೊಂದಿಗಿನ ಮೊಘಲ್ ಚಕ್ರವರ್ತಿಯ ವಿವಾಹವು ಅವರ "ರಾಜಕೀಯ ತಂತ್ರ" ದ ಭಾಗವಾಗಿದೆ. ಇದು ಅವನ ಹೃದಯದಿಂದ ಬಂದಿಲ್ಲ. ಇಲ್ಲದಿದ್ದರೆ, ಚಿತ್ತೋರಗಢದ ಹತ್ಯಾಕಾಂಡ ನಡೆಯುತ್ತಿರಲಿಲ್ಲ.. ಮೊಘಲರ ಕಾಲದ ಔರಂಗಜೇಬನ ಕೃತ್ಯಗಳನ್ನು ನೋಡಿ. ಕೆಲವೊಮ್ಮೆ, ನಾವು ಹೇಗೆ ಬದುಕಿದ್ದೇವೆ ಎಂದು ನನಗೆ ಆಶ್ಚರ್ಯವಾಗುತ್ತದೆ. ಕ್ರಿ.ಶ 1192 ರಲ್ಲಿ ಮಹಮ್ಮದ್ ಘೋರಿ ರಜಪೂತ ರಾಜ ಪೃಥ್ವಿರಾಜ್ ಚೌಹಾಣ್ ಅವರನ್ನು ಸೋಲಿಸಿದಾಗ ಭಾರತದ ಕೆಟ್ಟ ದಿನಗಳು ಪ್ರಾರಂಭವಾದವು. "ಗಂಡೆ-ತಾಬೀಜ್" (ತಾಯತಗಳು) ಮೂಲಕ ಬೇರೆ ಧರ್ಮಕ್ಕೆ ಮತಾಂತರಗೊಂಡವರ ಸಂಖ್ಯೆಯು ಕತ್ತಿಗಳ ಕೆಳಗೆ ಇರುವವರಿಗಿಂತ ದೊಡ್ಡದಾಗಿದೆ ಎಂದು ಬಘೇಲ್ ಆರೋಪಿಸಿದರು.
ಇದನ್ನೂ ಓದಿ: ಜಮ್ಮು-ಕಾಶ್ಮೀರ ಮಾಜಿ ರಾಜ್ಯಪಾಲ ಮಲೀಕ್ ಸ್ವತಃ ಠಾಣೆಗೆ ಬಂದಿದ್ದರು, ಬಂಧಿಸಿಲ್ಲ: ದೆಹಲಿ ಪೊಲೀಸ್
ಖ್ವಾಜಾ ಗರೀಬ್ ನವಾಜ್ ಸಾಹೇಬ್, ಹಜರತ್ ನಿಜಾಮುದ್ದೀನ್ ಔಲಿಯಾ, ಅಥವಾ ಸಲೀಮ್ ಚಿಸ್ತಿ ಅಲ್ಲದೆ ಇಂದಿಗೂ ನಮ್ಮ ಸಮುದಾಯದ ಜನರು, ಮಕ್ಕಳು, ಉದ್ಯೋಗ, ಟಿಕೆಟ್ (ಚುನಾವಣೆಯಲ್ಲಿ ಸ್ಪರ್ಧಿಸಲು), ಸಚಿವ ಸ್ಥಾನ, ರಾಜ್ಯ ಸಚಿವರಿಂದ ಉನ್ನತ ಸ್ಥಾನಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿಗೆ ಹೋಗುತ್ತಾರೆ. ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದರಲ್ಲೇ ಸಮಸ್ಯೆಗೆ ಪರಿಹಾರ ಅಡಗಿದೆ, ಮುಂದೊಂದು ದಿನ ಸಮಸ್ಯೆಗೆ ಪರಿಹಾರ ನೀಡಬಹುದು. ಅವರು ಮದರಸಾದಲ್ಲಿ ಓದಿದರೆ, ಅವರು ಉರ್ದು, ಅರೇಬಿಕ್ ಮತ್ತು ಪರ್ಷಿಯನ್ ಕಲಿಯುತ್ತಾರೆ. ಎಲ್ಲಾ ಸಾಹಿತ್ಯವು ಒಳ್ಳೆಯದು ಆದರೆ ಅಂತಹ ಅಧ್ಯಯನದಿಂದ ಅವರು ಪೇಶ್-ಇಮಾಮ್ ಆಗುತ್ತಾರೆ... ಅದೇ ಅವರು ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರವನ್ನು ಅಧ್ಯಯನ ಮಾಡಿದರೆ ಅಬ್ದುಲ್ ಕಲಾಂ ಗಳಾಗುತ್ತಾರೆ" ಎಂದು ಬಘೆಲ್ ಹೇಳಿದರು.