ಮಹಾರಾಷ್ಟ್ರ: ವೈದ್ಯರ ಭೇಟಿಗಾಗಿ ಬಿಸಿಲಿನಲ್ಲೇ 7 ಕಿಮೀ ನಡೆದ ಗರ್ಭಿಣಿ ಬುಡಕಟ್ಟು ಮಹಿಳೆ ಸಾವು
ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ(ಪಿಎಚ್‌ಸಿ)ಕ್ಕೆ ಹೋಗಿ ಬರುಲು ಬಿಸಿಲಿನಲ್ಲೇ ತನ್ನ ಗ್ರಾಮದಿಂದ ಏಳು ಕಿಲೋಮೀಟರ್ ನಡೆದ 21 ವರ್ಷದ ಗರ್ಭಿಣಿ ಬುಡಕಟ್ಟು ಮಹಿಳೆಯೊಬ್ಬರು ಬಿಸಿಲಿನ ತಾಪದಿಂದ...
Published: 15th May 2023 04:31 PM | Last Updated: 15th May 2023 07:31 PM | A+A A-

ಸಾಂದರ್ಭಿಕ ಚಿತ್ರ
ಪಾಲ್ಘರ್: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ(ಪಿಎಚ್‌ಸಿ)ಕ್ಕೆ ಹೋಗಿ ಬರುಲು ಬಿಸಿಲಿನಲ್ಲೇ ತನ್ನ ಗ್ರಾಮದಿಂದ ಏಳು ಕಿಲೋಮೀಟರ್ ನಡೆದ 21 ವರ್ಷದ ಗರ್ಭಿಣಿ ಬುಡಕಟ್ಟು ಮಹಿಳೆಯೊಬ್ಬರು ಬಿಸಿಲಿನ ತಾಪದಿಂದ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ಸೋಮವಾರ ಹೇಳಿದ್ದಾರೆ.
ಶುಕ್ರವಾರ ಈ ಘಟನೆ ನಡೆದಿದ್ದು, ದಹಾನು ತಾಲೂಕಿನ ಓಸರ್ ವೀರ ಗ್ರಾಮದ ಸೋನಾಲಿ ವಾಘಾಟ್ ಅವರು ಬಿಸಿಲಿನ ಬೇಗೆಯಲ್ಲೇ 3.5 ಕಿ.ಮೀ ದೂರ ನಡೆದು ಸಮೀಪದ ಹೆದ್ದಾರಿಗೆ ತೆರಳಿ ಅಲ್ಲಿಂದ ಆಟೋ ರಿಕ್ಷಾದಲ್ಲಿ ಆಸ್ಪತ್ರೆಗೆ ತೆರಳಿದ್ದಾರೆ ಎಂದು ಪಾಲ್ಘರ್ ಜಿಲ್ಲಾ ಸಿವಿಲ್ ಸರ್ಜನ್ ಡಾ ಸಂಜಯ್ ಬೋಡಾಡೆ ಪಿಟಿಐಗೆ ತಿಳಿಸಿದ್ದಾರೆ.
ಒಂಬತ್ತನೇ ತಿಂಗಳಿನಲ್ಲಿದ್ದ ಮಹಿಳೆಗೆ ಪಿಎಚ್‌ಸಿಯಲ್ಲಿ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದೆ. ಆದರೆ ಆ ಮಹಿಳೆ ಮತ್ತೆ ರಣ ಬಿಸಿಲಿನಲ್ಲಿಯೇ ಹೆದ್ದಾರಿಯಿಂದ ಮನೆಗೆ 3.5 ಕಿಮೀ ದೂರ ನಡೆದುಕೊಂಡು ಹೋಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಸಂಜೆ ನಂತರ, ಅವರ ಆರೋಗ್ಯದಲ್ಲಿ ತೊಂದರೆ ಕಾಣಿಸಿಕೊಂಡಿದ್ದು, ಧುಂಡಲವಾಡಿ ಪಿಎಚ್‌ಸಿಗೆ ಹೋಗಿದ್ದಾರೆ. ಅಲ್ಲಿಂದ ಅವರನ್ನು ಕಳಸ ಉಪವಿಭಾಗೀಯ ಆಸ್ಪತ್ರೆಗೆ(ಎಸ್‌ಡಿಹೆಚ್) ದಾಖಲಿಸಲಾಗಿದೆ. ಆದರೆ ಕಿಚಿತ್ಸೆ ಫಲಕಾರಿಯಾಗದೆ ಮಹಿಳೆ ಮೃತಪಟ್ಟಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಇದನ್ನು ಓದಿ: ಮಹಾರಾಷ್ಟ್ರ ಸರ್ಕಾರವನ್ನು 'ಕಾನೂನುಬಾಹಿರ' ಎಂದು ಕರೆದ ಸಂಜಯ್ ರಾವುತ್ ವಿರುದ್ಧ ಎಫ್ಐಆರ್
ಮಹಿಳೆಗೆ ಯಾವುದೇ ಹೆರಿಗೆ ನೋವು ಕಾಣಿಸಿಕೊಂಡಿಲ್ಲ. ಆದರೂ ವೈದ್ಯರು ತಕ್ಷಣ ಆಕೆ ಬಗ್ಗೆ ಗಮನ ಹರಿಸಿದ್ದರು. ಆದರೆ ಆಕೆ ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಕಾರಣ ಅವರಿಗೆ ಹೆಚ್ಚಿನ ಚಿಕಿತ್ಸೆ ನೀಡಲು ಸಾಧ್ಯವಾಗಲಿಲ್ಲ ಮತ್ತು ಅವರನ್ನು ವಿಶೇಷ ಆಸ್ಪತ್ರೆಗೆ ಕಳುಹಿಸಲಾಯಿತು ಎಂದು ಅಧಿಕಾರಿ ಹೇಳಿದ್ದಾರೆ.
ಬಿಸಿಲಿನಲ್ಲಿಯೇ ಮಹಿಳೆ ಏಳು ಕಿಲೋಮೀಟರ್ ನಡೆದುಕೊಂಡು ಹೋಗಿದ್ದರಿಂದ ಅವರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದು, ಬಿಸಿಲಿನ ತಾಪವೇ ಅವರ ಸಾವಿಗೆ ಕಾರಣವಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ.