ಸಿಸಿಐ ಅಧ್ಯಕ್ಷರಾಗಿ ಹಿರಿಯ ಐಎಎಸ್ ಅಧಿಕಾರಿ ರವನೀತ್ ಕೌರ್ ನೇಮಕ
ಕಳೆದ ವರ್ಷ ಅಕ್ಟೋಬರ್‌ನಿಂದ ಖಾಲಿ ಇರುವ ಭಾರತೀಯ ಸ್ಪರ್ಧಾ ಆಯೋಗ(ಕಾಂಪಿಟಿಷನ್ ಕಮಿಷನ್ ಆಫ್ ಇಂಡಿಯಾ - ಸಿಸಿಐ) ಮೊದಲ ಪೂರ್ಣಾವಧಿ ಮಹಿಳಾ ಅಧ್ಯಕ್ಷರಾಗಿ ಹಿರಿಯ ಐಎಎಸ್ ಅಧಿಕಾರಿ ರವನೀತ್ ಕೌರ್ ಅವರನ್ನು...
Published: 16th May 2023 07:36 PM | Last Updated: 16th May 2023 07:36 PM | A+A A-

ರವನೀತ್ ಕೌರ್
ನವದೆಹಲಿ: ಕಳೆದ ವರ್ಷ ಅಕ್ಟೋಬರ್‌ನಿಂದ ಖಾಲಿ ಇರುವ ಭಾರತೀಯ ಸ್ಪರ್ಧಾ ಆಯೋಗ(ಕಾಂಪಿಟಿಷನ್ ಕಮಿಷನ್ ಆಫ್ ಇಂಡಿಯಾ - ಸಿಸಿಐ) ಮೊದಲ ಪೂರ್ಣಾವಧಿ ಮಹಿಳಾ ಅಧ್ಯಕ್ಷರಾಗಿ ಹಿರಿಯ ಐಎಎಸ್ ಅಧಿಕಾರಿ ರವನೀತ್ ಕೌರ್ ಅವರನ್ನು ನೇಮಕ ಮಾಡಲಾಗಿದೆ.
1988 ರ ಪಂಜಾಬ್ ಕೇಡರ್ IAS ಅಧಿಕಾರಿಯಾಗಿರುವ ಕೌರ್ ಅವರನ್ನು 2009ರಲ್ಲಿ ಸ್ಥಾಪನೆಯಾದ ಸಿಸಿಐನ ಐದನೇ ಪೂರ್ಣಾವಧಿಯ ಅಧ್ಯಕ್ಷರಾಗಿ ಕೇಂದ್ರ ಸರ್ಕಾರ ನೇಮಕ ಮಾಡಿದೆ.
59 ವರ್ಷದ ರವನೀತ್ ಕೌರ್ ನೇಮಕಕ್ಕೆ ಕೇಂದ್ರ ಸಂಪುಟ ನೇಮಕಾತಿ ಸಮಿತಿ ಅನುಮೋದನೆ ನೀಡಿದೆ.
ಇದನ್ನು ಓದಿ: ನೇಮಕಾತಿ ವ್ಯವಸ್ಥೆಯಲ್ಲಿನ ಬದಲಾವಣೆಗಳು ಭ್ರಷ್ಟಾಚಾರ, ಸ್ವಜನಪಕ್ಷಪಾತವನ್ನು ಕೊನೆಗೊಳಿಸಿವೆ: ಪ್ರಧಾನಿ ಮೋದಿ
ಕೌರ್ ಅವರ ನೇಮಕಾತಿಯು ಅಧಿಕಾರ ವಹಿಸಿಕೊಂಡ ದಿನಾಂಕದಿಂದ ಐದು ವರ್ಷಗಳ ಅವಧಿಗೆ ಅಥವಾ ಅವರಿಗೆ 65 ವರ್ಷವಾಗುವವರೆಗೆ ಅಥವಾ ಮುಂದಿನ ಆದೇಶಗಳವರೆಗೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಅಕ್ಟೋಬರ್ 2022 ರಲ್ಲಿ ಅಶೋಕ್ ಕುಮಾರ್ ಗುಪ್ತಾ ಅವರು ಸಿಸಿಐ ಅಧ್ಯಕ್ಷ ಹುದ್ದೆಯಿಂದ ನಿರ್ಗಮಿಸಿದ ನಂತರ ಅವರ ಸ್ಥಾನಕ್ಕೆ ಪೂರ್ಣಾವಧಿ ಅಧ್ಯಕ್ಷರನ್ನು ನೇಮಕ ಮಾಡಿರಲಿಲ್ಲ. CCI ಸದಸ್ಯೆ ಸಂಗೀತಾ ವರ್ಮಾ ಅವರು ಕಳೆದ ವರ್ಷ ಅಕ್ಟೋಬರ್‌ನಿಂದ ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಪ್ರಸ್ತುತ, ಕೌರ್ ಅವರು ಪಂಜಾಬ್ ಸರ್ಕಾರದಲ್ಲಿ ಸಹಕಾರ ಇಲಾಖೆಯ ವಿಶೇಷ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.