ಉದ್ಯೋಗಕ್ಕಾಗಿ ಭೂ ಹಗರಣ: ವಿವಿಧ ರಾಜ್ಯಗಳ 9 ಕಡೆಗಳಲ್ಲಿ ಸಿಬಿಐ ಶೋಧ

ಉದ್ಯೋಗಕ್ಕಾಗಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮಂಗಳವಾರ ಆರ್ ಜೆಡಿ ಶಾಸಕರಾದ ಕಿರಣ್ ದೇವಿ ಮತ್ತು ರಾಜ್ಯಸಭಾ ಸದಸ್ಯ ಪ್ರೇಮ್ ಚಂದ್ ಅವರಿಗೆ ಸೇರಿದ ವಿವಿಧ ರಾಜ್ಯಗಳ 9 ಕಡೆಗಳಲ್ಲಿರುವ ಕಚೇರಿಗಳು, ಕಟ್ಟಡಗಳಲ್ಲಿ ಶೋಧ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಬಿಐ ಸಾಂದರ್ಭಿಕ ಚಿತ್ರ
ಸಿಬಿಐ ಸಾಂದರ್ಭಿಕ ಚಿತ್ರ

ನವದೆಹಲಿ: ಉದ್ಯೋಗಕ್ಕಾಗಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮಂಗಳವಾರ ಆರ್ ಜೆಡಿ ಶಾಸಕರಾದ ಕಿರಣ್ ದೇವಿ ಮತ್ತು ರಾಜ್ಯಸಭಾ ಸದಸ್ಯ ಪ್ರೇಮ್ ಚಂದ್ ಅವರಿಗೆ ಸೇರಿದ ವಿವಿಧ ರಾಜ್ಯಗಳ 9 ಕಡೆಗಳಲ್ಲಿರುವ ಕಚೇರಿಗಳು, ಕಟ್ಟಡಗಳಲ್ಲಿ ಶೋಧ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಗರಣದಲ್ಲಿ ಇಬ್ಬರೂ ನಾಯಕರ ವಿರುದ್ಧ ಆರೋಪ ಕೇಳಿಬಂದ ನಂತರ ಶೋಧ ಕಾರ್ಯಾಚರಣೆ ನಡೆಸಲಾಗಿದೆ. 

ಕಿರಣ್ ದೇವಿ ಹಾಗೂ ಆಕೆಯ ಪತಿ ಅರುಣ್ ಸಿಂಗ್ ಅವರಿಗೆ ಸೇರಿದ ಪಾಟ್ನಾ, ಗುರುಗ್ರಾಮ್, ರೆವಾರಿ, ನೊಯ್ಡಾ ಮತ್ತು ಗುಪ್ತಾ ಅವರಿಗೆ ಸೇರಿದ ದೆಹಲಿಯಲ್ಲಿರುವ ಕಟ್ಟಡಗಳಲ್ಲಿ ಶೋಧ ಕಾರ್ಯ ನಡೆದಿದೆ. ಲಾಲು ಪ್ರಸಾದ್ ಯಾದವ್ 2004 ರಿಂದ 2009 ರವರೆಗೂ ರೈಲ್ವೆ ಸಚಿವರಾಗಿದ್ದ ಸಂದರ್ಭದಲ್ಲಿ ನೇಮಕಾತಿ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘಿಸಿರುವ ಆರೋಪ ಇದಾಗಿದೆ. 

ನೇಮಕಾತಿಗೆ ಜಾಹೀರಾತು ಅಥವಾ ಸಾರ್ವಜನಿಕ ನೋಟಿಸ್ ನೀಡಿರಲಿಲ್ಲ ಆದರೆ ಪಾಟ್ನಾದ ಕೆಲ ನಿವಾಸಿಗಳನ್ನು ಮುಂಬೈ, ಜಬಲ್ ಪುರ, ಕೊಲ್ಕತ್ತಾ, ಜೈಪುರ ಮತ್ತು ಹಾಜಿಪುರದ ವಿವಿಧ ರೈಲ್ವೆ ವಲಯಗಳಿಗೆ ನೇಮಕಾತಿ ಮಾಡಿರುವ ಆರೋಪವಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com