ರಿಜಿಜು ಅವರನ್ನು ಕಾನೂನು ಸಚಿವಾಲಯದಿಂದ ಹೊರಕಳಿಸಿರುವುದು ನ್ಯಾಯಾಂಗ ವ್ಯವಸ್ಥೆಯ ಜಯ: ಸಂಜಯ್ ರಾವುತ್

ಕಿರಣ್ ರಿಜಿಜು ಅವರಿಗಿರುವ ನ್ಯಾಯಾಂಗದ ಮೇಲಿನ ಅಸಮಾಧಾನವನ್ನು ಕೇಂದ್ರ ಸರ್ಕಾರ ಗಮನಿಸಿದೆ ಮತ್ತು ಅವರನ್ನು ಕೇಂದ್ರ ಕಾನೂನು ಸಚಿವಾಲಯದಿಂದ ಹೊರಹಾಕಲಾಗಿದೆ ಎಂದು ನಾಯಕ ಸಂಜಯ್ ರಾವುತ್ ಗುರುವಾರ ಹೇಳಿದ್ದಾರೆ.
ಸಂಜಯ್ ರಾವತ್
ಸಂಜಯ್ ರಾವತ್

ಮುಂಬೈ: ಕಿರಣ್ ರಿಜಿಜು ಅವರಿಗಿರುವ ನ್ಯಾಯಾಂಗದ ಮೇಲಿನ ಅಸಮಾಧಾನವನ್ನು ಕೇಂದ್ರ ಸರ್ಕಾರ ಗಮನಿಸಿದೆ ಮತ್ತು ಅವರನ್ನು ಕೇಂದ್ರ ಕಾನೂನು ಸಚಿವಾಲಯದಿಂದ ಹೊರಹಾಕಲಾಗಿದೆ ಎಂದು ನಾಯಕ ಸಂಜಯ್ ರಾವುತ್ ಗುರುವಾರ ಹೇಳಿದ್ದಾರೆ.

ಇದು ನ್ಯಾಯಾಂಗ ವ್ಯವಸ್ಥೆಯ ವಿಜಯವಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಹಠಾತ್ ಬೆಳವಣಿಗೆಯಲ್ಲಿ ಗುರುವಾರ, ರಿಜಿಜು ಅವರನ್ನು ಕಾನೂನು ಸಚಿವಾಲಯದಿಂದ ಸ್ಥಳಾಂತರಿಸಲಾಯಿತು ಮತ್ತು ಅರ್ಜುನ್ ರಾಮ್ ಮೇಘವಾಲ್ ಅವರನ್ನು ಕಾನೂನು ಸಚಿವರನ್ನಾಗಿ ನೇಮಿಸಲಾಯಿತು.

2021ರ ಜುಲೈ 7ರಂದು ರಿಜಿಜು ಅವರನ್ನು ಕಾನೂನು ಸಚಿವರನ್ನಾಗಿ ನೇಮಿಸಲಾಗಿತ್ತು. ರವಿಶಂಕರ್ ಪ್ರಸಾದ್ ಬದಲಿಗೆ ಅವರಿಗೆ ಈ ಜವಾಬ್ದಾರಿ ನೀಡಲಾಗಿತ್ತು.

ಕಾನೂನು ಸಚಿವರಾಗಿದ್ದ ರಿಜಿಜು ಅವರು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಾಧೀಶರನ್ನು ನೇಮಿಸುವ ಕೊಲಿಜಿಯಂ ವ್ಯವಸ್ಥೆಯನ್ನು ಟೀಕಿಸುವಲ್ಲಿ ಹೆಚ್ಚು ನಿರತರಾಗಿದ್ದರು.

ಇಂಡಿಯಾ ಟುಡೆ ಕಾನ್ಲೇವ್‌ನಲ್ಲಿ ಮಾತನಾಡಿದ್ದ ರಿಜಿಜು, ಕೆಲವು ನ್ಯಾಯಾಧೀಶರು ಹಾಗೂ ಕೆಲವು ಸಾಮಾಜಿಕ ಕಾರ್ಯಕರ್ತರು ಭಾರತ ವಿರೋಧಿ ಗ್ಯಾಂಗ್ ನ ಭಾಗವಾಗಿದ್ದು, ಭಾರತೀಯ ನ್ಯಾಯಾಂಗವನ್ನು ವಿಪಕ್ಷಗಳ ಪಾತ್ರ ನಿರ್ವಹಿಸುವಂತೆ ಮಾಡಲು ಯತ್ನಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದರು. ಇದು ತೀವ್ರ ವಿರೋಧಕ್ಕೆ ಕಾರಣವಾಗಿತ್ತು.

ಈ ಬೆಳವಣಿಗೆಗೆ ಪ್ರತಿಕ್ರಿಯಿಸಿದ ರಾವುತ್, ನರೇಂದ್ರ ಮೋದಿ ಸರ್ಕಾರದಲ್ಲಿ ಕಾನೂನು ಖಾತೆಯನ್ನು ಸ್ವತಂತ್ರವಾಗಿ ನಿಭಾಯಿಸುವ ಸಾಮರ್ಥ್ಯ ಯಾರಿಗೂ ಇಲ್ಲ. ರಿಜಿಜು ಅವರು ನ್ಯಾಯಾಂಗದ ಕಾರ್ಯನಿರ್ವಹಣೆಯಲ್ಲಿ ಮಧ್ಯಪ್ರವೇಶಿಸಲು ಪ್ರಯತ್ನಿಸಿದರು ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ಇತರ ಹಲವರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಇಡೀ ನ್ಯಾಯಾಂಗ ವ್ಯವಸ್ಥೆಯೇ ಸಚಿವರ ವಿರುದ್ಧವಾಗಿದ್ದು, ಸರ್ಕಾರ ಇದನ್ನು ಗಮನಿಸಿದೆ. ಇದು ನ್ಯಾಯಾಂಗ ವ್ಯವಸ್ಥೆಯ ವಿಜಯವಾಗಿದೆ ಎಂದು ಹೇಳಿದ್ದಾರೆ.

ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಮುಖ್ಯ ವಕ್ತಾರ ಕ್ಲೈಡ್ ಕ್ರಾಸ್ಟೊ ಅವರು, ರಿಜಿಜು ಕಾನೂನು ಮತ್ತು ಅವರ ಕರ್ತವ್ಯಕ್ಕಿಂತ ಮೇಲಿರಲು ಪ್ರಯತ್ನಿಸುತ್ತಿದ್ದರು. ಈ ಕ್ರಮವು ಕೇಂದ್ರದ ಎಲ್ಲಾ ಸಚಿವರಿಗೂ ಉದಾಹರಣೆಯಾಗಿರಬೇಕು ಎಂದರು.
ಕೇಂದ್ರ ಸರ್ಕಾರವು ಕಡಿಮೆ ಕಾರ್ಯನಿರ್ವಹಣೆಯ ಸಚಿವರಿಗೂ ಅದೇ ಮಾನದಂಡವನ್ನು ಹೊಂದಿಸಬೇಕು. ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂದು ಕ್ರಾಸ್ಟೊ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com