ಪ್ರಧಾನಿ ಮೋದಿ ಅವರದ್ದು FAST ನಡೆ: 2 ಸಾವಿರ ರೂ. ನೋಟು ನಿಷೇಧಕ್ಕೆ ಕಾಂಗ್ರೆಸ್ ಟೀಕೆ!
2,000 ರೂಪಾಯಿ ನೋಟುಗಳನ್ನು ನಿಷೇಧಿಸಿರುವ ಬಗ್ಗೆ ಕಾಂಗ್ರೆಸ್ ತೀಕ್ಷ್ಣ ವಾಗ್ದಾಳಿ ನಡೆಸಿದ್ದು, ಈ ನಡೆ ನಮ್ಮ ಸ್ವಯಂ ಘೋಷಿತ ವಿಶ್ವಗುರುವಿನ ಎಂದಿನಂತೆ ಮಾಡುವ ಮೊದಲು ನಿರ್ಧಾರ ಕೈಗೊಂಡು ಆ ನಂತರ ಚಿಂತಿಸುವ ನಡೆಯಾಗಿದೆ ಎಂದು ಹೇಳಿದೆ.
Published: 20th May 2023 12:58 AM | Last Updated: 20th May 2023 06:33 PM | A+A A-

ಪ್ರಧಾನಿ ಮೋದಿ
ನವದೆಹಲಿ: 2,000 ರೂಪಾಯಿ ನೋಟುಗಳನ್ನು ನಿಷೇಧಿಸಿರುವ ಬಗ್ಗೆ ಕಾಂಗ್ರೆಸ್ ತೀಕ್ಷ್ಣ ವಾಗ್ದಾಳಿ ನಡೆಸಿದ್ದು, ಈ ನಡೆ ನಮ್ಮ ಸ್ವಯಂ ಘೋಷಿತ ವಿಶ್ವಗುರುವಿನ ಎಂದಿನಂತೆ ಮಾಡುವ ಮೊದಲು ನಿರ್ಧಾರ ಕೈಗೊಂಡು ಆ ನಂತರ ಚಿಂತಿಸುವ ನಡೆಯಾಗಿದೆ ಎಂದು ಹೇಳಿದೆ.
ಪಕ್ಷದ ಸಂಸದರೊಬ್ಬರು ಈ ಬಗ್ಗೆ ಮಾತನಾಡಿದ್ದು, ಇದು ಎರಡನೇ ನೋಟು ನಿಷೇಧದ ವಿಪತ್ತಿನ ಆರಂಭ ಎಂದು ಹೇಳಿದ್ದಾರೆ.
ನಮ್ಮ ಸ್ವ-ಘೋಷಿತ ವಿಶ್ವಗುರು ಮಾದರಿ. ಮೊದಲು ನಿರ್ಧಾರ, ಎರಡನೇಯದು ಚಿಂತಿಸುವುದು (First Act.Second Think= FAST) ಆಗಿದೆ. 2016 ರಲ್ಲಿ ನವೆಂಬರ್ 8 ರಲ್ಲಿ ವಿನಾಶಕಾರಿ 'ತುಘಲಕಿ ಫರ್ಮಾನು' ಹೊರಡಿಸಿದ ನಂತರ ಈಗ 2000 ರೂಪಾಯಿ ನೋಟುಗಳನ್ನು ಹಿಂಪಡೆಯಲಾಗುತ್ತಿದೆ" ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಪ್ರಧಾನಿಯನ್ನು ಗುರಿಯಾಗಿಸಿಕೊಂಡು ಟ್ವಿಟರ್ ನಲ್ಲಿ ಹೇಳಿದ್ದಾರೆ.
Typical of our self-styled Vishwaguru. First Act, Second Think (FAST).
— Jairam Ramesh (@Jairam_Ramesh) May 19, 2023
2000 rupee notes introduced with such fanfare after that singularly disastrous Tughlaqi firman of Nov 8 2016 are now being withdrawn.https://t.co/gPjY07iKID
ಇದನ್ನೂ ಓದಿ: 2,000 ರೂ. ನೋಟ್ ಹಿಂಪಡೆದ RBI: ಸೆ.30ರ ವರೆಗೆ ಬ್ಯಾಂಕ್ ಗಳಲ್ಲಿ ನೋಟ್ ಬದಲಾವಣೆಗೆ ಅವಕಾಶ
ಮತ್ತೋರ್ವ ಕಾಂಗ್ರೆಸ್ ಸಂಸದ, ಮಾಣಿಕ್ಕಂ ಠಾಗೋರ್ ಟ್ವೀಟ್ ಮಾಡಿ ಎರಡನೇ ಡಿಮಾನಿಟೈಸೇಷನ್ ವಿಪತ್ತು ಎಂ ಅಂದರೆ ಮ್ಯಾಡ್ನೆಸ್ (ಹುಚ್ಚು) ನಿಂದ ಪ್ರಾರಂಭವಾಗುತ್ತದೆ ಎಂದು ಹೇಳಿದ್ದಾರೆ.