ಸಿಕ್ಕಿಂನಲ್ಲಿ ಭೂಕುಸಿತ: ಸಂಕಷ್ಟಕ್ಕೆ ಸಿಲುಕಿದ್ದ 500 ಮಂದಿ ಪ್ರವಾಸಿಗರ ರಕ್ಷಣೆ

ಧಾರಾಕಾರ ಮಳೆಯಿಂದಾಗಿ ಸಿಕ್ಕಿಂನಲ್ಲಿ ಭೂಕುಸಿತವಾಗಿದ್ದು, ಪರಿಣಾಮ ಸಂಕಷ್ಟಕ್ಕೆ ಸಿಲುಕಿದ್ದ 500 ಮಂದಿ ಪ್ರವಾಸಿಗರನ್ನು ಭಾರತೀಯ ಸೇನಾಪಡೆ ರಕ್ಷಣೆ ಮಾಡಿದೆ.
ರಕ್ಷಣೆಗೊಳಗಾಗಿರುವ ಪ್ರವಾಸಿಗರು.
ರಕ್ಷಣೆಗೊಳಗಾಗಿರುವ ಪ್ರವಾಸಿಗರು.

ನವದೆಹಲಿ: ಧಾರಾಕಾರ ಮಳೆಯಿಂದಾಗಿ ಸಿಕ್ಕಿಂನಲ್ಲಿ ಭೂಕುಸಿತವಾಗಿದ್ದು, ಪರಿಣಾಮ ಸಂಕಷ್ಟಕ್ಕೆ ಸಿಲುಕಿದ್ದ 500 ಮಂದಿ ಪ್ರವಾಸಿಗರನ್ನು ಭಾರತೀಯ ಸೇನಾಪಡೆ ರಕ್ಷಣೆ ಮಾಡಿದೆ.

ಸಿಕ್ಕಿಂನ ಲಾಚುಂಗ್ ಮತ್ತು ಲಾಚೆನ್ ಕಣಿವೆಗೆ ಪ್ರಯಾಣಿಸುತ್ತಿದ್ದ 500 ಪ್ರವಾಸಿಗರು ಭೂಕುಸಿತದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದರು. ಪ್ರವಾಸಿಗರು ಭೂಕುಸಿತಗಳು ಮತ್ತು ರಸ್ತೆ ತಡೆಗಳಿಂದಾಗಿ ಚುಂಗ್‌ಥಾಂಗ್‌ನಲ್ಲಿ ಸಿಲುಕಿಕೊಂಡಿದ್ದರು.

ಜೆನ್ ಎ ಲಾಚೆನ್, ಲಾಚುಂಗ್ ಮತ್ತು ಚುಂಗ್‌ಥಾಂಗ್‌ನಲ್ಲಿ ಭಾರಿ ಧಾರಾಕಾರ ಮಳೆಯಾಗಿದೆ. ತ್ರಿಶಕ್ತಿ ಕಾರ್ಪ್ಸ್, ಭಾರತೀಯ ಸೇನೆಯ ಪಡೆಗಳು ಸಿಲುಕಿಕೊಂಡ ಪ್ರವಾಸಿಗರ ರಕ್ಷಣೆಗಾಗಿ ಕಾರ್ಯಾಚರಣೆಗೆ ಇಳಿದು ಪ್ರವಾಸಿಗರನ್ನು ಸುರಕ್ಷಿತವಾಗಿ ರಕ್ಷಿಸಿದೆ.

ರಕ್ಷಣೆಗೊಂಡ 500 ಮಂದಿಯ ಪೈಕಿ 216 ಪುರುಷರು, 113 ಮಹಿಳೆಯರು ಮತ್ತು 54 ಮಕ್ಕಳು ಸೇರಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಕ್ಷಣೆಗೊಂಡ ಪ್ರವಾಸಿಗರನ್ನು ಮೂರು ವಿಭಿನ್ನ ಸೇನಾ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ ಮತ್ತು ಅವರಿಗೆ ಬಿಸಿ ಊಟ ಮತ್ತು ಬೆಚ್ಚಗಿನ ಬಟ್ಟೆಗಳನ್ನು ಒದಗಿಸಲಾಗಿದೆ ಎಂದು ಹೇಳಿದ್ದಾರೆ.

ರಾತ್ರಿ ಪ್ರವಾಸಿಗರಿಗೆ ವಸತಿ ಕಲ್ಪಿಸಲು ಸೈನಿಕರು ತಮ್ಮ ಬ್ಯಾರಕ್‌ಗಳನ್ನು ಖಾಲಿ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ಪ್ರವಾಸಿಗರ ಚಿಕಿತ್ಸೆಗಾಗಿ ಮೂರು ವೈದ್ಯಕೀಯ ತಂಡಗಳನ್ನು ರಚಿಸಲಾಗಿದ್ದು, ಎಲ್ಲ ಪ್ರವಾಸಿಗರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಸೇನಾಪಡೆಗಳ ತ್ವರಿತ ಪ್ರತಿಕ್ರಿಯೆಯಿಂದ ದುರ್ಘಟನೆಯೊಂದು ತಪ್ಪಿದಂತಾಗಿದೆ ಎಂದು ವರದಿಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com