ಅದಕ್ಕಾಗಿಯೇ ಹೇಳೋದು ದೇಶದ ಪ್ರಧಾನಿಗೆ ಶಿಕ್ಷಣ ಬೇಕೆಂದು: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವ್ಯಂಗ್ಯ
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಚಲಾವಣೆಯಿಂದ ತನ್ನ ಅತ್ಯಧಿಕ ಮೌಲ್ಯದ ಕರೆನ್ಸಿ ನೋಟುಗಳನ್ನು ಹಿಂತೆಗೆದುಕೊಳ್ಳುವ ನಿರ್ಧಾರದ ಬಗ್ಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ತರಾಟೆಗೆ ತೆಗೆದುಕೊಂಡರು.
Published: 20th May 2023 12:54 PM | Last Updated: 20th May 2023 06:39 PM | A+A A-

ಅರವಿಂದ್ ಕೇಜ್ರಿವಾಲ್
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಚಲಾವಣೆಯಿಂದ ತನ್ನ ಅತ್ಯಧಿಕ ಮೌಲ್ಯದ ಕರೆನ್ಸಿ ನೋಟುಗಳನ್ನು ಹಿಂತೆಗೆದುಕೊಳ್ಳುವ ನಿರ್ಧಾರದ ಬಗ್ಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ತರಾಟೆಗೆ ತೆಗೆದುಕೊಂಡರು.
ಅದಕ್ಕಾಗಿಯೇ ಪ್ರಧಾನಿ ಶಿಕ್ಷಣ ಪಡೆಯಬೇಕು ಎಂದು ಹೇಳಿದ್ದಾರೆ. 2000 ನೋಟು ತರುವುದರಿಂದ ಭ್ರಷ್ಟಾಚಾರ ನಿಲ್ಲುತ್ತದೆ ಎಂದು ಮೊದಲು ಹೇಳಿದ್ದರು. ಈಗ 2000 ನೋಟು ಬ್ಯಾನ್ ಮಾಡುವುದರಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದೆ ಎನ್ನುತ್ತಿದ್ದಾರೆ. ಅದಕ್ಕಾಗಿಯೇ ನಾವು ಹೇಳುತ್ತೇವೆ, ಪ್ರಧಾನಿ ವಿದ್ಯಾವಂತರಾಗಿರಬೇಕು. ಅನಕ್ಷರಸ್ಥ ಪ್ರಧಾನಿಗೆ ಯಾರು ಬೇಕಾದರೂ ಏನು ಬೇಕಾದರೂ ಹೇಳಬಹುದು. ಅವರಿಗೆ ಅದು ಅರ್ಥವಾಗುತ್ತಿಲ್ಲ ಆದರೆ ಸಾರ್ವಜನಿಕರು ತೊಂದರೆ ಅನುಭವಿಸಬೇಕಾಗಿದೆ ಎಂದು ಕೇಜ್ರಿವಾಲ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
2 ಸಾವಿರ ರು. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆಯುವ ನಿರ್ಧಾರ ಮಾಡಿರುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಶುಕ್ರವಾರ ಘೋಷಿಸಿದೆ. ಸದ್ಯ ಚಲಾವಣೆಯಲ್ಲಿ ಇರುವ ನೋಟುಗಳನ್ನು ಸೆಪ್ಟೆಂಬರ್ 30ರ ಒಳಗಾಗಿ ಬ್ಯಾಂಕ್‌ಗಳಲ್ಲಿ ಠೇವಣಿ ಇಡು ವಂತೆ ಅಥವಾ ಬೇರೆ ಮುಖಬೆಲೆಯ ನೋಟುಗಳೊಂದಿಗೆ ಬದಲಾಯಿಸಿ ಕೊಳ್ಳುವಂತೆ ಸೂಚನೆ ನೀಡಿದೆ.
ಇದನ್ನೂ ಓದಿ: ನ್ಯಾಯಯುತ ತನಿಖೆಯಿಂದ ಮಾತ್ರ ಸತ್ಯ ಬಯಲಾಗುತ್ತದೆ: ಚಲಾವಣೆಯಿಂದ 2000 ರೂ. ನೋಟು ಹಿಂಪಡೆದ ಬಗ್ಗೆ ಖರ್ಗೆ
2 ಸಾವಿರ ಮುಖಬೆಲೆಯ ನೋಟು ಗಳನ್ನು ಬೇರೆ ಮುಖಬೆಲೆಯ ನೋಟುಗಳೊಂದಿಗೆ ಒಂದು ಬಾರಿಗೆ 20 ಸಾವಿರದವರೆಗೆ ಮಾತ್ರವೇ ಬದಲಾಯಿಸಿಕೊಳ್ಳಬಹುದು ಎನ್ನುವ ಮಿತಿಯನ್ನು ಆರ್‌ಬಿಐ ವಿಧಿಸಿದೆ. ಬ್ಯಾಂಕ್ ಶಾಖೆಗಳ ದೈನಂದಿನ ಕೆಲಸಗಳಿಗೆ ಅಡಚಣೆ ಆಗಬಾರದು ಎಂಬ ಕಾರಣಕ್ಕೆ ಈ ಮಿತಿಯನ್ನು ಹೇರಲಾಗಿದೆ.
पहले बोले 2000 का नोट लाने से भ्रष्टाचार बंद होगा। अब बोल रहे हैं 2000 का नोट बंद करने से भ्रष्टाचार ख़त्म होगा
— Arvind Kejriwal (@ArvindKejriwal) May 19, 2023
इसीलिए हम कहते हैं, PM पढ़ा लिखा होना चाहिए। एक अनपढ़ पीएम को कोई कुछ भी बोल जाता है। उसे समझ आता नहीं है। भुगतना जनता को पड़ता है।