ಮಹಾರಾಷ್ಟ್ರ: ಪ್ರತಿಭಟನೆ ನಡುವೆ ಎನ್‌ಸಿಪಿ ಮುಖ್ಯಸ್ಥ ಜಯಂತ್ ಪಾಟೀಲ್ ಇಡಿ ಮುಂದೆ ಹಾಜರು
ಈಗ ದಿವಾಳಿಯಾಗಿರುವ ಹಣಕಾಸು ಸೇವಾ ಸಂಸ್ಥೆ ಐಎಲ್ ಆ್ಯಂಡ್ ಎಫ್‌ಎಸ್ ನಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಸಿಪಿ ಅಧ್ಯಕ್ಷ ಜಯಂತ್ ಪಾಟೀಲ್ ಸೋಮವಾರ ಜಾರಿ ನಿರ್ದೇಶನಾಲಯ (ಇಡಿ) ಎದುರು ಹಾಜರಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Published: 22nd May 2023 04:11 PM | Last Updated: 22nd May 2023 06:46 PM | A+A A-

ಇಡಿ ಕಚೇರಿ ಮುಂದೆ ಪ್ರತಿಭಟನೆ
ಮುಂಬೈ: ಈಗ ದಿವಾಳಿಯಾಗಿರುವ ಹಣಕಾಸು ಸೇವಾ ಸಂಸ್ಥೆ ಐಎಲ್ ಆ್ಯಂಡ್ ಎಫ್‌ಎಸ್ ನಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಸಿಪಿ ಅಧ್ಯಕ್ಷ ಜಯಂತ್ ಪಾಟೀಲ್ ಸೋಮವಾರ ಜಾರಿ ನಿರ್ದೇಶನಾಲಯ (ಇಡಿ) ಎದುರು ಹಾಜರಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎನ್ ಸಿಪಿ ಹಿರಿಯ ನಾಯಕರಾಗಿರುವ ಪಾಟೀಲ್ ಇಂದು ಬೆಳಗ್ಗೆ 11-50ರ ಸುಮಾರಿನಲ್ಲಿ ಹೆಚ್ಚಿನ ಸಂಖ್ಯೆಯ ತಮ್ಮ ಪಕ್ಷದ ಬೆಂಬಲಿಗರ ಸಮ್ಮುಖದಲ್ಲಿ ದಕ್ಷಿಣ ಮುಂಬೈನ ಬಲ್ಲಾರ್ಡ್ ಎಸ್ಟೇಟ್‌ನಲ್ಲಿರುವ ಇಡಿ ಕಚೇರಿ ತಲುಪಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಪಾಟೀಲ್ ಅವರಿಂದ ಹೇಳಿಕೆ ಪಡೆದಿರುವ ಸಾಧ್ಯತೆಯಿದೆಯ
ಈ ಮಧ್ಯೆ ಪಾಟೀಲ್‌ಗೆ ಸಮನ್ಸ್ ಜಾರಿ ಮಾಡಿರುವುದನ್ನು ವಿರೋಧಿಸಿ ನೂರಾರು ಎನ್‌ಸಿಪಿ ಕಾರ್ಯಕರ್ತರು ಇಡಿ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿದರು. ಕೇಂದ್ರ ಮತ್ತು ಇಡಿ 'ರಾಜಕೀಯ ಸೇಡು ತೀರಿಸಿಕೊಳ್ಳುತ್ತಿದ್ದಾರೆ' ಎಂದು ಪ್ರತಿಭಟನಾಕಾರರು ಆರೋಪಿಸಿದರು. ಗಾಂಧಿ ಟೋಪಿ ಧರಿಸಿ ಮತ್ತು ಬ್ಯಾನರ್ ಹಿಡಿದುಕೊಂಡು ಪ್ರತಿಭಟನೆ ನಡೆಸಲಾಯಿತು. ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಬೃಹತ್ ಗಾತ್ರದ ಕಟೌಟುಗಳನ್ನು ಕೂಡಾ ಪ್ರತಿಭಟನಾಕಾರರು ಪ್ರದರ್ಶಿಸುವ ಮೂಲಕ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಪಾಟೀಲ್, ನಾನು ಪ್ರತಿಪಕ್ಷದ ಭಾಗವಾಗಿದ್ದು, ಅಂತಹ ನೋವನ್ನು ಎದುರಿಸಬೇಕಾಗಿದೆ. ಈ ಹಿಂದೆ ಐಎಲ್ ಎಫ್‌ಎಸ್ ಹೆಸರನ್ನು ಕೇಳಿರಲಿಲ್ಲ, ಆದರೆ ಇಡಿ ಅಧಿಕಾರಿಗಳು ಸಮನ್ಸ್ ಮಾಡಿದ್ದಾರೆ. ಅವರ ಮುಂದೆ ಹಾಜರಾಗಿ, ಕಾನೂನು ಚೌಕಟ್ಟಿನಲ್ಲಿ ಉತ್ತರಿಸಲು ಪ್ರಯತ್ನಿಸುವುದಾಗಿ ತಿಳಿಸಿದರು. "ಶಾಂತಿ ಕಾಪಾಡಲು ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡಿದ ಪಾಟೀಲ್, ಇದರಿಂದ ಭಯ ಪಡದಂತೆ ಹೇಳಿದರು.