
ಸಾಂದರ್ಭಿಕ ಚಿತ್ರ
ನಾಂದೇಡ್: "ಮುಂಬೈ ಸ್ಫೋಟಿಸುವುದಾಗಿ" ಟ್ವೀಟ್ ಮೂಲಕ ಬೆದರಿಕೆ ಹಾಕಿದ್ದ ಮಹಾರಾಷ್ಟ್ರದ ನಾಂದೇಡ್‌ನ 19 ವರ್ಷದ ಯುವಕನನ್ನು ಮುಂಬೈ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಮುಂಬೈ ಪೊಲೀಸರನ್ನು ಟ್ಯಾಗ್ ಮಾಡಿ, "ನಾನು ಶೀಘ್ರದಲ್ಲೇ ಮುಂಬೈಯನ್ನು ಸ್ಫೋಟಿಸಲಿದ್ದೇನೆ" ಎಂದು ಟ್ವೀಟ್ ಮಾಡಿದ್ದ ಯುವಕನನ್ನು ನಾಂದೇಡ್ ನಲ್ಲಿ ಬಂಧಿಸಲಾಗಿದೆ.
ಮುಂಬೈನಿಂದ ಸುಮಾರು 625 ಕಿಮೀ ದೂರದಲ್ಲಿರುವ ನಾಂದೇಡ್ ನಗರದಲ್ಲಿ ಟ್ವೀಟ್ ಮಾಡಿದ ಯುವಕನನ್ನು ಪತ್ತೆಹಚ್ಚಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನು ಓದಿ: ಮಹಾರಾಷ್ಟ್ರದಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತದಲ್ಲಿ 11 ಮಂದಿ ದುರ್ಮರಣ; 17 ಮಂದಿಗೆ ಗಾಯ!
19 ವರ್ಷದ ಯುವಕ "ಶಾಲಾ ವಿದ್ಯಾರ್ಥಿ" ಎಂದು ಮುಂಬೈ ಪೊಲೀಸ ತಡರಾತ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮುಂಬೈ ಪೊಲೀಸ್ ಅಪರಾಧ ವಿಭಾಗವು ಭಯೋತ್ಪಾದನಾ ನಿಗ್ರಹ ದಳ ನಾಂದೇಡ್ ಘಟಕದ ಸಹಾಯದಿಂದ ಆತನನ್ನು ಬಂಧಿಸಿದೆ ಮತ್ತು ಆರೋಪಿಯನ್ನು ಮುಂಬೈಗೆ ಕರೆದೊಯ್ಯಲಾಗುತ್ತಿದೆ ಎಂದು ಹೇಳಿದೆ.