ಬಿಹಾರ: ಪರಸ್ಪರ ಹೊಡೆದಾಡಿಕೊಂಡ ಸರ್ಕಾರಿ ಶಾಲೆ ಶಿಕ್ಷಕಿಯರು, ವಿಡಿಯೋ ವೈರಲ್!
ಬಿಹಾರದ ರಾಜಧಾನಿ ಪಾಟ್ನಾದ ಸರ್ಕಾರಿ ಶಾಲೆಯೊಂದರ ಶಿಕ್ಷಕಿಯರು ಬೀದಿಗೆ ಬಂದು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಪಾಟ್ನಾ ಜಿಲ್ಲೆ ಬಿಹ್ತಾ ಪಟ್ಟಣದ ಸರ್ಕಾರಿ ಶಾಲೆಯಲ್ಲಿ ನಡೆದಿರುವ ಈ ಹೊಡೆದಾಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
Published: 26th May 2023 06:43 PM | Last Updated: 26th May 2023 06:46 PM | A+A A-

ಶಿಕ್ಷಕಿಯರ ಹೊಡೆದಾಟದ ಚಿತ್ರ
ಪಾಟ್ನಾ: ಬಿಹಾರದ ರಾಜಧಾನಿ ಪಾಟ್ನಾದ ಸರ್ಕಾರಿ ಶಾಲೆಯೊಂದರ ಶಿಕ್ಷಕಿಯರು ಬೀದಿಗೆ ಬಂದು ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. ಪಾಟ್ನಾ ಜಿಲ್ಲೆ ಬಿಹ್ತಾ ಪಟ್ಟಣದ ಸರ್ಕಾರಿ ಶಾಲೆಯಲ್ಲಿ ನಡೆದಿರುವ ಈ ಹೊಡೆದಾಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಶಾಲೆಯ ಮುಖ್ಯ ಶಿಕ್ಷಕಿ ಮತ್ತು ಸಹಾಯಕ ಶಿಕ್ಷಕಿಯ ನಡುವೆ ಯಾವುದೋ ವಿಷಯಕ್ಕೆ ಜಗಳ ನಡೆದಿದೆ. ಈ ವೇಳೆ ಪರಸ್ಪರ ವಾಗ್ವಾದ ನಡೆದು ಶಾಲೆಯ ವಿದ್ಯಾರ್ಥಿಗಳ ಮುಂದೆಯೇ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಇದರಲ್ಲಿ ಒಬ್ಬ ಶಿಕ್ಷಕಿಯ ತಾಯಿ ಕೂಡಾ ಭಾಗಿಯಾಗಿದ್ದು, ಮತ್ತೊಬ್ಬ ಶಿಕ್ಷಕಿಗೆ ಶೂನಿಂದ ಥಳಿಸಿದ್ದಾರೆ.
pic.twitter.com/1hwmg1yHiN#fridaymorning
Too much Feminism and #WomenEmpowerment happened in Bihar in a single day. Here is the thread:
1. School Headmistress Kanti Kumari and Teacher Sunita Kumari of a Middle School in Bihta near Patna had an argument over closing the class…— NCMIndia Council For Men Affairs (@NCMIndiaa) May 26, 2023
ಇಬ್ಬರೂ ಒಬ್ಬರಿಗೊಬ್ಬರು ಕೂದಲನ್ನು ಎಳೆದುಕೊಂಡು ಒದೆಯುವುದು ಮತ್ತು ಬಡಿಯುವುದು ವಿಡಿಯೋದಲ್ಲಿದೆ. ಕೆಲವು ಮಹಿಳೆಯರು ವಿವಾದಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಇದೇ ವೇಳೆ ಗ್ರಾಮದ ಕೆಲ ಯುವಕರು ಈ ಘಟನೆಯನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.