ಉಮೇಶ್ ಪಾಲ್ ಹತ್ಯೆ ಪ್ರಕರಣ: ಮೊದಲ ಚಾರ್ಜ್ ಶೀಟ್ ಸಲ್ಲಿಕೆ; ಸದಾಕತ್ ಖಾನ್ ಪ್ರಮುಖ ಸಂಚುಕೋರ
2005ರಲ್ಲಿ ಬಹುಜನ ಸಮಾಜ ಪಕ್ಷ(ಬಿಎಸ್‌ಪಿ)ದ ಶಾಸಕ ರಾಜು ಪಾಲ್ ಅವರ ಹತ್ಯೆಯ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ ಹತ್ಯೆಗೆ ಸಂಬಂಧಿಸಿದಂತೆ ಪ್ರಯಾಗ್‌ರಾಜ್ ಪೊಲೀಸರು ಶುಕ್ರವಾರ ಮೊದಲ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
Published: 26th May 2023 11:06 PM | Last Updated: 26th May 2023 11:06 PM | A+A A-

ಉಮೇಶ್ ಪಾಲ್
ಲಖನೌ: 2005ರಲ್ಲಿ ಬಹುಜನ ಸಮಾಜ ಪಕ್ಷ(ಬಿಎಸ್‌ಪಿ)ದ ಶಾಸಕ ರಾಜು ಪಾಲ್ ಅವರ ಹತ್ಯೆಯ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ ಹತ್ಯೆಗೆ ಸಂಬಂಧಿಸಿದಂತೆ ಪ್ರಯಾಗ್‌ರಾಜ್ ಪೊಲೀಸರು ಶುಕ್ರವಾರ ಮೊದಲ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಈ ವರ್ಷ ಫೆಬ್ರವರಿ 24 ರಂದು ಉಮೇಶ್ ಪಾಲ್ ಮತ್ತು ಇಬ್ಬರು ಪೊಲೀಸ್ ಭದ್ರತಾ ಸಿಬ್ಬಂದಿಯನ್ನು ಅವರ ಮನೆಯ ಹೊರಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.
ಪ್ರಸ್ತುತ ಎಸ್‌ಸಿ-ಎಸ್‌ಟಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ 8 ಆರೋಪಿಗಳ ಹೆಸರನ್ನು ಕೈಬಿಟ್ಟು ಒಬ್ಬ ಪ್ರಮುಖ ಆರೋಪಿ ಸದಾಕತ್ ಖಾನ್ ವಿರುದ್ಧ ಮಾತ್ರ ಆರೋಪ ಹೊರಿಸಲಾಗಿದೆ. ಪ್ರಕರಣದಲ್ಲಿ ಹೆಸರಿಸಲಾದ ಒಂಬತ್ತು ಆರೋಪಿಗಳಲ್ಲಿ ಖಾನ್ ಒಬ್ಬರಾಗಿದ್ದರು.
ಇದನ್ನು ಓದಿ: ಉಮೇಶ್ ಪಾಲ್ ಹತ್ಯೆ: ಶೈಸ್ತಾ ಪರ್ವೀನ್ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ
ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳ ಪ್ರಕಾರ, ಸೆಕ್ಷನ್ 147, 148, 149, 302 ರ ಅಡಿಯಲ್ಲಿ ದಾಖಲಿಸಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸದಾಕತ್ ಖಾನ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಒಂಬತ್ತು ಸೆಕ್ಷನ್‌ಗಳ ಅಡಿಯಲ್ಲಿ 1,857 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ.
ಫೆಬ್ರವರಿ 27 ರಂದು ಗೋರಖ್‌ಪುರದಲ್ಲಿ ವಿಶೇಷ ಕಾರ್ಯಪಡೆಯ ತಂಡ ಸದಾಕತ್‌ನನ್ನು ಬಂಧಿಸಿತ್ತು.
ಪೊಲೀಸ್ ಮೂಲಗಳ ಪ್ರಕಾರ, ಅಲಹಾಬಾದ್ ವಿಶ್ವವಿದ್ಯಾಲಯದ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದ ಸದಾಕತ್, ಉಮೇಶ್ ಪಾಲ್ ಹತ್ಯೆಗೆ ಸಂಚು ರೂಪಿಸಿದ್ದ ಎಂದು ಆರೋಪಿಸಲಾಗಿದೆ.