ಸಂಸತ್ ಭವನ ಉದ್ಘಾಟನೆ ಕಾರ್ಯಕ್ರಮ ಬಹಿಷ್ಕಾರ ನಿರ್ಧಾರ ಮರುಪರಿಶೀಲಿಸಿ: ವಿಪಕ್ಷಗಳಿಗೆ ಕಮಲ ಹಾಸನ್ ಸಲಹೆ
ರಾಜಕೀಯ ಭಿನ್ನಾಭಿಪ್ರಾಯಗಳನ್ನು ಒಂದು ದಿನದ ಮಟ್ಟಿಗೆ ಬದಿಗಿಡಬಹುದು ಎಂದು ಹೇಳಿರುವ ಕಮಲ್ ಹಾಸನ್, ಸಂಸತ್ ಭವನ ಉದ್ಘಾಟನೆ ಕಾರ್ಯಕ್ರಮ ಬಹಿಷ್ಕಾರ ನಿರ್ಧಾರವನ್ನು ಮರುಪರಿಶೀಲಿಸುವಂತೆ ಹೇಳಿದ್ದಾರೆ.
Published: 27th May 2023 10:48 PM | Last Updated: 27th May 2023 10:48 PM | A+A A-

ಕಮಲ್ ಹಾಸನ್
ಚೆನ್ನೈ: ರಾಜಕೀಯ ಭಿನ್ನಾಭಿಪ್ರಾಯಗಳನ್ನು ಒಂದು ದಿನದ ಮಟ್ಟಿಗೆ ಬದಿಗಿಡಬಹುದು ಎಂದು ಹೇಳಿರುವ ಕಮಲ್ ಹಾಸನ್, ಸಂಸತ್ ಭವನ ಉದ್ಘಾಟನೆ ಕಾರ್ಯಕ್ರಮ ಬಹಿಷ್ಕಾರ ನಿರ್ಧಾರವನ್ನು ಮರುಪರಿಶೀಲಿಸುವಂತೆ ಹೇಳಿದ್ದಾರೆ.
ಬಹಿಷ್ಕಾರ ನಿರ್ಧಾರ ಮರುಪರಿಶೀಲಿಸಿ, ಹೊಸ ಸಂಸತ್ ಉದ್ಘಾಟನೆಯಲ್ಲಿ ಭಾಗವಹಿಸುವ ಮೂಲಕ ರಾಷ್ಟ್ರೀಯ ಒಗ್ಗಟ್ಟಿನ ಕಾರ್ಯಕ್ರಮವನ್ನಾಗಿ ಮಾಡಿ ಎಂದು ಕಮಲ ಹಾಸನ್ ಮನವಿ ಮಾಡಿದ್ದಾರೆ.
ಭಾರತದ ಹೊಸ ಮನೆಯಲ್ಲಿ ಅದರ ಎಲ್ಲಾ ಕುಟುಂಬ ಸದಸ್ಯರು ಇರುವ ಅಗತ್ಯವಿದೆ, ನಾನು ಎಲ್ಲರನ್ನೂ ಒಳಗೊಳ್ಳುವ, ಭಾಗಿಯಾಗುವ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಹೊಂದಿರುವುದಾಗಿ ಕಮಲ್ ಹಾಸನ್ ಹೇಳಿದ್ದು, ಕಾರ್ಯಕ್ರಮವನ್ನು ಬಹಿಷ್ಕರಿಸಲು ಆಯ್ಕೆ ಮಾಡಿಕೊಂಡಿರುವ ಎಲ್ಲಾ ವಿರೋಧ ಪಕ್ಷಗಳು ಅದನ್ನು ಮರುಪರಿಶೀಲಿಸುವಂತೆ ಕರೆ ನೀಡಿದ್ದಾರೆ.
ಇಡೀ ದೇಶವೇ ಸಂಸತ್ ಉದ್ಘಾಟನೆ ಕಾರ್ಯಕ್ರಮವನ್ನು ಎದುರುನೋಡುತ್ತಿದೆ. ನಮ್ಮಲ್ಲಿ ಒಡಕು ಉಂಟುಮಾಡುವುದಕ್ಕಿಂತ ಒಗ್ಗೂಡಿಸುವ ಅನೇಕ ಅಂಶಗಳಿವೆ ಎಂದು ಕಮಲ ಹಾಸನ್ ಅಭಿಪ್ರಾಯಪಟ್ಟಿದ್ದಾರೆ.
ಪ್ರಪಂಚದ ಕಣ್ಣುಗಳು ನಮ್ಮ ಮೇಲಿವೆ. ಹೊಸ ಸಂಸತ್ತಿನ ಉದ್ಘಾಟನೆಯನ್ನು ರಾಷ್ಟ್ರೀಯ ಏಕತೆಯ ಸಂದರ್ಭವನ್ನಾಗಿ ಮಾಡೋಣ, ನಮ್ಮ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಒಂದು ದಿನ ಬದಿಗೆ ಇಡಬಹುದು, ”ಎಂದು ಮಕ್ಕಳ್ ನೀಧಿ ಮೈಯಂ ಅಧ್ಯಕ್ಷ ಹಾಸನ್ ಹೇಳಿದ್ದಾರೆ.