ಹಿಂದೂ ಯುವಕನ ಜೊತೆ ಮುಸ್ಲಿಂ ಯುವತಿ ಡಿನ್ನರ್; ಬೆನ್ನಟ್ಟಿ ದುಷ್ಕರ್ಮಿಗಳಿಂದ ಹಲ್ಲೆ, ರಕ್ಷಣೆಗೆ ಬಂದವರಿಗೆ ಚೂರಿ ಇರಿತ
ಹಿಂದೂ ಯುವಕನ ಜೊತೆ ಮುಸ್ಲಿಂ ಹುಡುಗಿಯೊಬ್ಬಳು ಡಿನ್ನರ್ ಗೆ ಹೋಗಿ ವಾಪಾಸ್ ಬರುವಾಗ ಗುಂಪೊಂದು ಹಲ್ಲೆ ನಡೆಸಿರುವ ಘಟನೆಯೊಂದು ಮಧ್ಯ ಪ್ರದೇಶದ ಇಂದೋರ್ ನಲ್ಲಿ ನಡೆದಿದೆ.
Published: 27th May 2023 12:37 PM | Last Updated: 27th May 2023 01:37 PM | A+A A-

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ದೃಶ್ಯದ ಫೋಟೋ.
ಇಂದೋರ್: ಹಿಂದೂ ಯುವಕನ ಜೊತೆ ಮುಸ್ಲಿಂ ಹುಡುಗಿಯೊಬ್ಬಳು ಡಿನ್ನರ್ ಗೆ ಹೋಗಿ ವಾಪಾಸ್ ಬರುವಾಗ ಗುಂಪೊಂದು ಹಲ್ಲೆ ನಡೆಸಿರುವ ಘಟನೆಯೊಂದು ಮಧ್ಯ ಪ್ರದೇಶದ ಇಂದೋರ್ ನಲ್ಲಿ ನಡೆದಿದೆ.
ಗುರುವಾರ ರಾತ್ರಿ ಮುಸ್ಲಿಂ ಹುಡುಗಿ, ಹಿಂದೂ ಯುವಕನ ಜೊತೆ ಹೊಟೇಲ್ ವೊಂದರಲ್ಲಿ ಊಟ ಮಾಡಿ ವಾಪಾಸ್ ಬರುತ್ತಿದ್ದು, ಈ ವೇಳೆ ಯುವಕರ ಗುಂಪೊಂದು ಇಬ್ಬರನ್ನು ತಡೆದು ಪ್ರಶ್ನೆ ಮಾಡಿದೆ.
ಮನೆಯಲ್ಲಿ ಹೇಳಿಯೇ ಹೊರ ಬಂದಿದ್ದೇವೆಂದು ಇಬ್ಬರೂ ಉತ್ತರಿಸಿದ್ದಾರೆ. ಈ ವೇಳೆ ಯುವಕರ ಗುಂಪು ಹಲ್ಲೆ ನಡೆಸಲು ಮುಂದಾಗಿದ್ದು. ಯುವತಿ ವಿರೋಧ ವ್ಯಕ್ತಪಡಿಸಿದ್ದಾಳೆ. ಈ ನಡುವೆ ಇಬ್ಬರು ವ್ಯಕ್ತಿಗಳು ಗುಂಪಿನಿಂದ ಇವರಿಬ್ಬರನ್ನು ರಕ್ಷಿಸಲು ಮುಂದೆ ಬಂದಿದ್ದಾರೆ. ಈ ವೇಳೆ ಗುಂಪಿನಲ್ಲಿದ್ದವರು ಯುವಕನನ್ನು ರಕ್ಷಿಸಲು ಬಂದವರಿಗೆ ಚಾಕುವಿನಿಂದ ಇರಿದಿದ್ದಾರೆ. ಕೂಡಲೇ ಇಬ್ಬರನ್ನೂ ರಕ್ಷಣೆ ಮಾಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ತಿಳಿದುಬಂದಿದೆ.
ಇದನ್ನೂ ಓದಿ: ಮಂಗಳೂರಿನಲ್ಲಿ ಮತ್ತೊಂದು ನೈತಿಕ ಪೊಲೀಸ್ ಗಿರಿ: ಯುವತಿಗೆ ಮಿಠಾಯಿ ಕೊಟ್ಟಿದ್ದಕ್ಕೆ ಮುಸ್ಲಿಂ ಯುವಕನ ಮೇಲೆ ಹಲ್ಲೆ
ಗುಂಪಿನಲ್ಲಿದ್ದವರೆಲ್ಲ 23-26 ವರ್ಷ ವಯಸ್ಸಿನ ಯುವಕರೆಂದು ಹೇಳಲಾಗುತ್ತಿದ್ದು, ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಉಳಿದವರಿಗಾಗಿ ಹುಡುಕಾಟ ಮುಂದುವರೆಸಿದ್ದಾರೆಂದು ವರದಿಗಳು ತಿಳಿಸಿವೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307 (ಕೊಲೆಗೆ ಯತ್ನ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಇದೂವರೆಗೆ ಏಳು ಆರೋಪಿಗಳನ್ನು ಗುರುತಿಸಲಾಗಿದೆ ಎಂದು ತುಕೋಗಂಜ್ ಪೊಲೀಸ್ ಠಾಣೆಯ ಉಸ್ತುವಾರಿ ಕಮಲೇಶ್ ಶರ್ಮಾ ತಿಳಿಸಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.