ಬಿಜೆಪಿ-ಆರ್‌ಎಸ್‌ಎಸ್ ಅಸ್ಪೃಶ್ಯತೆಯನ್ನು ಉತ್ತೇಜಿಸುತ್ತಿದೆ: ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್
ಬಿಜೆಪಿ-ಆರ್‌ಎಸ್‌ಎಸ್ ಸಮಾಜದಲ್ಲಿ ಅಸ್ಪೃಶ್ಯತೆಯನ್ನು ಉತ್ತೇಜಿಸುತ್ತಿದೆ ಎಂದು ಶುಕ್ರವಾರ ಆರೋಪಿಸಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು, ಅವರು ದೇಶದ ದಲಿತರನ್ನು "ಅಪ್ಪಿಕೊಳ್ಳುತ್ತಾರೆಯೇ"? ಎಂದು ಪ್ರಶ್ನಿಸಿದ್ದಾರೆ.
Published: 27th May 2023 01:05 AM | Last Updated: 27th May 2023 02:41 PM | A+A A-

ಅಶೋಕ್ ಗೆಹ್ಲೋಟ್
ಕೋಟಾ: ಬಿಜೆಪಿ-ಆರ್‌ಎಸ್‌ಎಸ್ ಸಮಾಜದಲ್ಲಿ ಅಸ್ಪೃಶ್ಯತೆಯನ್ನು ಉತ್ತೇಜಿಸುತ್ತಿದೆ ಎಂದು ಶುಕ್ರವಾರ ಆರೋಪಿಸಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು, ಅವರು ದೇಶದ ದಲಿತರನ್ನು "ಅಪ್ಪಿಕೊಳ್ಳುತ್ತಾರೆಯೇ"? ಎಂದು ಪ್ರಶ್ನಿಸಿದ್ದಾರೆ.
ಗೆಹ್ಲೋಟ್ ಅವರು ಇಂದು ಬರಾನ್ ಜಿಲ್ಲೆಯಲ್ಲಿ ಹಿಂದೂ ಸಮುದಾಯದ 2,111 ಮತ್ತು ಮುಸ್ಲಿಂ ಸಮುದಾಯದ 111 ಜೋಡಿಗಳು ಸೇರಿದಂತೆ 2,222 ಜೋಡಿಗಳ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದರು.
ಸಾಮೂಹಿಕ ವಿವಾಹ ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಗೆಹ್ಲೋಟ್, ಬಿಜೆಪಿ ಮತ್ತು ಆರ್ ಎಸ್ಎಸ್ ಜನರ ನಡುವೆ ಭಿನ್ನಾಭಿಪ್ರಾಯ ಮತ್ತು ತಾರತಮ್ಯವನ್ನು ಸೃಷ್ಟಿಸುತ್ತವೆ. ಅಲ್ಲದೆ ದೇಶದ ಜನರಲ್ಲಿ ಅಸ್ಪೃಶ್ಯತೆಯನ್ನು ಉತ್ತೇಜಿಸುತ್ತವೆ ಎಂದು ಆರೋಪಿಸಿದರು.
ಇದನ್ನು ಓದಿ: ಕರ್ನಾಟಕ ಗೆಲುವಿನ ನಂತರ ಇತರ ರಾಜ್ಯಗಳ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಸಜ್ಜು
"ಅವರು (ಬಿಜೆಪಿ-ಆರ್‌ಎಸ್‌ಎಸ್) ಹಿಂದೂ ಧರ್ಮದ ಬಗ್ಗೆ ಮಾತನಾಡುತ್ತಾರೆ ಮತ್ತು ತಾವೆಲ್ಲರೂ ಹಿಂದೂಗಳು ಎಂದು ಹೇಳುತ್ತಾರೆ. ಆದರೆ ಧರ್ಮವನ್ನು ಮೀರಿ ಕೆಲವು ನೈಜ ಕೆಲಸಗಳನ್ನು ಮಾಡಬೇಕು" ಎಂದು ಗೆಹ್ಲೋಟ್ ಹೇಳಿದ್ದಾರೆ.
"ಹಳ್ಳಿಗಳು ಮತ್ತು ನಗರ ಪ್ರದೇಶಗಳಲ್ಲಿ ಇನ್ನೂ ಅಸ್ಪೃಶ್ಯತೆ ಇದೆ. ಕೆಳವರ್ಗದವರ ಬಗ್ಗೆ ಮೇಲ್ವರ್ಗದವರು ತಾರತಮ್ಯ ಮಾಡುವುದು ಎಲ್ಲರಿಗೂ ತಿಳಿದಿದೆ" ಎಂದರು.