
ಕಾರ್ಮಿಕರ ಸನ್ಮಾನಿಸುತ್ತಿರುವ ಪ್ರಧಾನಿ ಮೋದಿ.
ನವದೆಹಲಿ: ನೂತನ ಸಂಸತ್ ಭವನ ಕಟ್ಟಡ ನಿರ್ಮಾಣಕ್ಕಾಗಿ ಶ್ರಮಿಸಿದ ಕಾರ್ಮಿಕರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಸನ್ಮಾನ ಮಾಡಿದರು.
ಸಾಂಪ್ರದಾಯಿಕ ಶಾಲು ಹೊದಿಸಿ, ಸ್ಮರಣಿಕೆ ನೀಡುವ ಮೂಲಕ ಕಾರ್ಮಿಕರಿಗೆ ಪ್ರಧಾನಿ ಮೋದಿಯವರು ಗೌರವ ಸಲ್ಲಿಸಿದರು.
ಇದಕ್ಕೂ ಮುನ್ನ, ಮೋದಿ ಅವರು ಪುರೋಹಿತರಿಂದ ಪಡೆದ ಐತಿಹಾಸಿಕ ಸೆಂಗೋಲ್ ನ್ನು ಲೋಕಸಭೆಯ ಸಭಾಂಗಣದಲ್ಲಿ ಸ್ಪೀಕರ್ ಕುರ್ಚಿಯ ಪಕ್ಕದಲ್ಲಿ ಪ್ರತಿಷ್ಠಾಪನೆ ಮಾಡಿದರು.
ಆಗಸ್ಟ್ 14, 1947 ರಂದು ಬ್ರಿಟಿಷ್ ಗುಲಾಮಗಿರಿ ಆಳ್ವಿಕೆಯಿಂದ ಮುಕ್ತಿ ಪಡೆದ ಭಾರತಕ್ಕೆ ಅಧಿಕಾರವನ್ನು ಹಸ್ತಾಂತರಿಸುವ ಸೂಚಕವಾಗಿ ಸಂಗೋಲ್'ನ್ನು ಭಾರತೀಯಕರಿಗೆ ಬ್ರಿಟೀಷರು ನೀಡಿದ್ದರು.
ಸ್ವತಂತ್ರ ಭಾರತದ ಮೊದಲ ಪ್ರಧಾನಮಂತ್ರಿ ಜವಾಹರ್ ಲಾಲ್ ನೆಹರು ಅವರು ಬ್ರಿಟೀಷರಿಂದ ಈ ಸೆಂಗೋಲ್'ನ್ನು ಪಡೆದಿದ್ದರು.
ಸೆಂಗೋಲ್ ಆಡಳಿತಗಾರನು ಕಾನೂನಿನ ಅಡಿಯಲ್ಲಿರುತ್ತಾನೆ ಎಂಬುದರ ಸಂಕೇತವಾಗಿದೆ. ಜಗತ್ತನ್ನು ಸಂಕೇತಿಸುವ ಸೆಂಗೋಲ್‌ನ ಮಂಡಲವು ಶಿವನ ಪವಿತ್ರ ಗೂಳಿಯಾದ ನಂದಿಯ ಕೆತ್ತನೆಯಿಂದ ಒಳಗೊಂಡಿದೆ. ಚಿನ್ನದ ರಾಜದಂಡದ ಮೂಲವು ಚೋಳ ಸಾಮ್ರಾಜ್ಯದಲ್ಲಿ ಅದರ ಮೂಲವನ್ನು ಹೊಂದಿದೆ. ಒಬ್ಬ ರಾಜನಿಂದ ಮತ್ತೊಬ್ಬ ರಾಜನಿಗೆ ಅಧಿಕಾರದ ವರ್ಗಾವಣೆಯು ನ್ಯಾಯದ ಸಂಕೇತವಾದ ನಂದಿಯ ಕೆತ್ತನೆಯನ್ನು ಹೊಂದಿರುವ ಚಿನ್ನದ ಕೋಲು ಸೆಂಗೋಲ್ ನ್ನು ಹಸ್ತಾಂತರಿಸುವ ಮೂಲಕ ಗುರುತಿಸಲ್ಪಟ್ಟಿದೆ.