ನೂತನ ಸಂಸತ್​ ಭವನ ಭಾರತೀಯ ಸಂಸ್ಕೃತಿ ಬಿಂಬಿಸುತ್ತದೆ: ಉಪ ರಾಷ್ಟ್ರಪತಿ ಜಗದೀಪ್​ ಧನಕರ್​​ ಸಂದೇಶ ಓದಿದ ಉಪಸಭಾಪತಿ

ನೂತನ ಸಂಸತ್​ ಭವನ ಭಾರತೀಯ ಸಂಸ್ಕೃತಿ ಬಿಂಬಿಸುತ್ತದೆ. ಸಂಸತ್​ ಭವನ ವಿವಿಧತೆಯಲ್ಲಿ ಏಕತೆಯ ಸಂದೇಶ ಸಾರಲಿದೆ ಎಂದು ಉಪ ರಾಷ್ಟ್ರಪತಿ ಜಗದೀಪ್​ ಧನಕರ್​​ ಅವರು ಭಾನುವಾರ ಹೇಳಿದ್ದಾರೆ.
ಉಪಸಭಾಪತಿ ಹರಿವಂಶ್
ಉಪಸಭಾಪತಿ ಹರಿವಂಶ್

ನವದೆಹಲಿ: ನೂತನ ಸಂಸತ್​ ಭವನ ಭಾರತೀಯ ಸಂಸ್ಕೃತಿ ಬಿಂಬಿಸುತ್ತದೆ. ಸಂಸತ್​ ಭವನ ವಿವಿಧತೆಯಲ್ಲಿ ಏಕತೆಯ ಸಂದೇಶ ಸಾರಲಿದೆ ಎಂದು ಉಪ ರಾಷ್ಟ್ರಪತಿ ಜಗದೀಪ್​ ಧನಕರ್​​ ಅವರು ಭಾನುವಾರ ಹೇಳಿದ್ದಾರೆ.

ನೂತನ ಸಂಸತ್ ಭವನ ಉದ್ಘಾಟನೆ 2ನೇ ಹಂತದ ಕಾರ್ಯಕ್ರಮ ಆರಂಭವಾಗಿದ್ದು, ಕಾರ್ಯಕ್ರಮದಲ್ಲಿ ಉಪಸಭಾಪತಿ ಹರಿವಂಶ್ ಅವರು ಉಪ ರಾಷ್ಟ್ರಪತಿ ಜಗದೀಪ್​ ಧನಕರ್​​ ಅವರ ಸಂದೇಶ ಓದಿದರು.

ನೂತನ ಸಂಸತ್​ ಭವನ ಕಟ್ಟಡ ವಾಸ್ತು ಪ್ರಕಾರ ನಿರ್ಮಾಣವಾಗಿದೆ. ನೂತನ ಸಂಸತ್​ ಭವನ ಭಾರತೀಯ ಸಂಸ್ಕೃತಿ ಬಿಂಬಿಸುತ್ತದೆ. ಸಂಸತ್​ ಭವನ ವಿವಿಧತೆಯಲ್ಲಿ ಏಕತೆಯ ಸಂದೇಶ ಸಾರಲಿದೆ ಎಂದು ಉಪ ರಾಷ್ಟ್ರಪತಿಯವರು ತಿಳಿಸಿದ್ದಾರೆಂದು ಹೇಳಿದರು.

ಇದೇ ವೇಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಸಂದೇಶವನ್ನೂ ರಾಜ್ಯಸಭಾ ಉಪಸಭಾಪತಿ ಹರಿವಂಶ್ ಅವರು ಓದಿದರು.

ನೂತನ ಸಂಸತ್​ ಭವನದ ಉದ್ಘಾಟನಾ ದಿನವನ್ನು ಭಾರತದ ಇತಿಹಾಸದಲ್ಲಿ ಸ್ವರ್ಣಾಕ್ಷರದಲ್ಲಿ ಬರೆದಿಡುವ ದಿನವಾಗಿದೆ. ಈ ಸಂಸತ್​ ಭವನ ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಸಾಕ್ಷಿಯಾಗಿದೆ. ಭಾರತದ ಸಂಸ್ಕೃತಿ ಅನಾವರಣ ಆಗಿದೆ ಎಂದು ಹೇಳಿದರು.

ಬಳಿಕ ಮಾತನಾಡಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು, ಇಡೀ ದೇಶವೇ ಇಂದು ಈ ಕ್ಷಣಕ್ಕೆ ಸಾಕ್ಷಿಯಾಗಿದೆ. 2.5 ವರ್ಷಗಳಲ್ಲಿ ಈ ಹೊಸ ಸಂಸತ್ತನ್ನು ನಿರ್ಮಿಸಲಾಗಿದೆ. ಇದಕ್ಕೆ ಪ್ರಧಾನಿ ಮೋದಿಯವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆಂದು ಹೇಳಿದರು.

ಹೊಸ ಸಂಸತ್​ ಭವನ ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಸಾಕ್ಷಿ. ಭಾರತದ ಪ್ರಜಾಪ್ರಭುತ್ವದ ಪ್ರತೀಕ ಈ ನೂತನ ಸಂಸತ್​ ಭವನ. ಸ್ವತಂತ್ರ್ಯದ ಅಮೃತ್​ ಮಹೋತ್ಸವದಲ್ಲಿ ನೂತನ ಸಂಸತ್​​ ನಿರ್ಮಾಣವಾಗಿದೆ. ಸಾವಿರಾರು ಕಾರ್ಮಿಕರ ಬಲದಿಂದ ಈ ಸಂಸತ್​ ಭವನ ನಿರ್ಮಾಣವಾಗಿದೆ. ಲೋಕಸಭೆಯಲ್ಲಿ ಸದಸ್ಯರ ಚರ್ಚೆಯಿಂದ ಅನೇಕ ಕಾನೂನು ನಿರ್ಮಿಸಲಾಗಿದೆ.  ನೂತನ ಸಂಸತ್​ ಭವನ ಮಹತ್ವದ ವಿಚಾರಗಳ ಬಗ್ಗೆ ಚರ್ಚೆಗೆ ವೇದಿಕೆಯಾಗಿದೆ. ಸಂಸತ್ ಭವನ ಜನರ ಸಮಸ್ಯೆಗಳಿಗೆ ಸ್ಪಂದಿಸುವ ವೇದಿಕೆಯಾಗಲಿದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com