
ಸಿಬಿಐ ಸಾಂದರ್ಭಿಕ ಚಿತ್ರ
ನವದೆಹಲಿ: ಹಾಕ್ ವಿಮಾನ ಭ್ರಷ್ಟಾಚಾರ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ ರೋಲ್ಸ್ ರಾಯ್ಸ್ ಹಾಗೂ ಅದರ ಹಿರಿಯ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಿದೆ.
ಹಾಕ್ 115 ಅತ್ಯಾಧುನಿಕ ತರಬೇತಿ ವಿಮಾನ ಖರೀದಿ ಹಗರಣ ಇದಾಗಿದ್ದು, ರೋಲ್ಸ್ ರಾಯ್ಸ್ ಪಿಎಲ್ ಸಿ, ಟಿಮ್ ಜೋನ್ಸ್, ರೋಲ್ಸ್ ರಾಯ್ಸ್ ಇಂಡಿಯಾ ಪ್ರೈವೆಟ್ ಲಿಮಿಟೇಡ್ ನ ನಿರ್ದೇಶಕ, ಆಪಾದಿತ ಶಸ್ತ್ರಾಸ್ತ್ರ ವಿತರಕರು ಸುಧೀರ್ ಚೌಧರಿ ಮತ್ತು ಭಾನು ಚೌಧಿರೆ ಮತ್ತು ಬ್ರಿಟಿಷ್ ಏರೋಸ್ಪೇಸ್ ಸಿಸ್ಟಮ್ಸ್ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದಾರೆ.
ಇದನ್ನೂ ಓದಿ: ಸಿಬಿಐ ನೂತನ ನಿರ್ದೇಶಕರಾಗಿ ಪ್ರವೀಣ್ ಸೂದ್ ಅಧಿಕಾರ ಸ್ವೀಕಾರ
ಸಿಬಿಐ 2016 ರಲ್ಲಿ ಪ್ರಾಥಮಿಕ ತನಿಖೆಯನ್ನು ದಾಖಲಿಸಿತ್ತು, ನಂತರ ಅದನ್ನು ಸಾಮಾನ್ಯ ಪ್ರಕರಣವಾಗಿ ಪರಿವರ್ತಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.