ಅಸ್ಸಾಂನಲ್ಲಿ ಮೊದಲ 'ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಪ್ರಧಾನಿ ಮೋದಿ ಚಾಲನೆ
ಪ್ರಧಾನಿ ನರೇಂದ್ರ ಮೋದಿ ಅವರಿಂದು ಅಸ್ಸಾಂನಲ್ಲಿ ಈಶಾನ್ಯ ಭಾರತದ ಮೊದಲ 'ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿ' ಗೆ ವರ್ಚುಯಲ್ ಮೂಲಕ ಚಾಲನೆ ನೀಡಿದರು. ಈ ರೈಲು ಪಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿ ನಿಲ್ದಾಣ ಮತ್ತು ಅಸ್ಸಾಂನ ಗುವಾಹಟಿ ನಡುವೆ ಚಲಿಸುತ್ತದೆ.
Published: 29th May 2023 01:01 PM | Last Updated: 29th May 2023 02:00 PM | A+A A-

ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಪ್ರಧಾನಿ ಮೋದಿ ಚಾಲನೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಂದು ಅಸ್ಸಾಂನಲ್ಲಿ ಈಶಾನ್ಯ ಭಾರತದ ಮೊದಲ 'ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿ' ಗೆ ವರ್ಚುಯಲ್ ಮೂಲಕ ಚಾಲನೆ ನೀಡಿದರು. ಈ ರೈಲು ಪಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿ ನಿಲ್ದಾಣ ಮತ್ತು ಅಸ್ಸಾಂನ ಗುವಾಹಟಿ ನಡುವೆ ಚಲಿಸುತ್ತದೆ.
ನಂತರ ಮಾತನಾಡಿದ ಪ್ರಧಾನಿ, ಅಸ್ಸಾಂ ಸೇರಿದಂತೆ ಇಡೀ ಈಶಾನ್ಯ ಭಾರತದ ರೈಲ್ವೆ ಸಂಪರ್ಕತೆಗೆ ಇಂದು ಮಹತ್ವದ ದಿನವಾಗಿದೆ. ಈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಜನರ ಜೀವನವನ್ನು ಸುಲಭಗೊಳಿಸುತ್ತದೆ ಮತ್ತು ಇದು ರಾಜ್ಯದ ಪ್ರವಾಸೋದ್ಯಮ ಕ್ಷೇತ್ರಕ್ಕೂ ಉತ್ತೇಜನ ನೀಡುತ್ತದೆ ಎಂದರು.
#WATCH | Prime Minister Narendra Modi virtually flags off the inaugural run of Northeast's first Vande Bharat Express train in Assam. The northeast-bound Vande Bharat will run between New Jalpaiguri Station in West Bengal and Guwahati in Assam. pic.twitter.com/xEjbXVMYAX
— ANI (@ANI) May 29, 2023
ಕಳೆದ 9 ವರ್ಷಗಳಲ್ಲಿ ನವ ಭಾರತ ನಿರ್ಮಾಣಕ್ಕಾಗಿ ಅಭೂತಪೂರ್ವ ಸಾಧನೆ ಮಾಡಲಾಗಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಡವರ ಕಲ್ಯಾಣ, ಯಾವುದೇ ತಾರತಮ್ಯ ಇಲ್ಲದೆ ಎಲ್ಲರಿಗೂ ಮೂಲಸೌಕರ್ಯ ಕಲ್ಪಿಸಲು ಹೆಚ್ಚಿನ ಆದ್ಯತೆ ನೀಡಿದೆ. ಅದಕ್ಕಾಗಿಯೇ ಈ ಮೂಲಸೌಕರ್ಯ ನಿರ್ಮಾಣ, ಒಂದು ರೀತಿಯಲ್ಲಿ ನಿಜವಾದ ಸಾಮಾಜಿಕ ನ್ಯಾಯ, ನಿಜವಾದ ಜಾತ್ಯತೀತತೆ ಎಂದು ಪ್ರಧಾನಿ ಹೇಳಿದರು.
2014 ರ ಮೊದಲು, ಈಶಾನ್ಯಕ್ಕೆ ರೈಲ್ವೆ ಬಜೆಟ್ ರೂ. 2,500 ಕೋಟಿ ಆಗಿತ್ತು. ಈಗ ಅದು ರೂ. 10.000 ಕೋಟಿಗೂ ಹೆಚ್ಚು ಅಂದರೆ 4 ಪಟ್ಟು ಏರಿಕೆಯಾಗಿದೆ. ಈಶಾನ್ಯದ ಎಲ್ಲಾ ಭಾಗಗಳನ್ನು ಶೀಘ್ರದಲ್ಲೇ ಬ್ರಾಡ್-ಗೇಜ್ ನೆಟ್ ವರ್ಕ್ ಮೂಲಕ ಸಂಪರ್ಕಿಸಲಾಗುವುದು. ಇದಕ್ಕಾಗಿ ರೂ.1 ಲಕ್ಷ ಕೋಟಿ ಖರ್ಚು ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.