ಗರ್ಭಿಣಿ ಮಹಿಳೆಗೆ ಬಸ್ ನಲ್ಲಿ ಹೆರಿಗೆ ಮಾಡಿಸಲು ಸಹಾಯ: ಕೆಎಸ್ ಆರ್ ಟಿಸಿ ನಿರ್ವಾಹಕಿ ನಡೆಗೆ ಮೆಚ್ಚುಗೆಯ ಮಹಾಪೂರ

ಹಾಸನ ಜಿಲ್ಲೆಯ ಶಾಂತಿಗ್ರಾಮದ ಬಳಿ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಗರ್ಭಿಣಿ ಮಹಿಳೆಯೊಬ್ಬರಿಗೆ ಹೆರಿಗೆ ಮಾಡಿಸಲು ಸಹಾಯ ಮಾಡಿದ ಬಸ್ ನಿರ್ವಾಹಕಿ ವಸಂತಮ್ಮ ಅವರ ನಡೆಗೆ ಮೆಚ್ಚುಗೆ ವ್ಯಕ್ತವಾಗತೊಡಗಿದೆ. 
ಗರ್ಭಿಣಿ ಮಹಿಳೆಗೆ ಬಸ್ ನಲ್ಲಿ ಹೆರಿಗೆ ಮಾಡಿಸಲು ಸಹಾಯ
ಗರ್ಭಿಣಿ ಮಹಿಳೆಗೆ ಬಸ್ ನಲ್ಲಿ ಹೆರಿಗೆ ಮಾಡಿಸಲು ಸಹಾಯ

ಹಾಸನ: ಹಾಸನ ಜಿಲ್ಲೆಯ ಶಾಂತಿಗ್ರಾಮದ ಬಳಿ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಗರ್ಭಿಣಿ ಮಹಿಳೆಯೊಬ್ಬರಿಗೆ ಹೆರಿಗೆ ಮಾಡಿಸಲು ಸಹಾಯ ಮಾಡಿದ ಬಸ್ ನಿರ್ವಾಹಕಿ ವಸಂತಮ್ಮ ಅವರ ನಡೆಗೆ ಮೆಚ್ಚುಗೆ ವ್ಯಕ್ತವಾಗತೊಡಗಿದೆ. 

ನಿರ್ವಾಹಕಿಯ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಬೇಲೂರಿನ ನಿಸ್ವಾರ್ಥ ಗೆಳೆಯರ ಬಳಗದ ಸ್ವಯಂ ಸೇವಕರು, ನಿರ್ವಾಹಕಿಯನ್ನು ಸನ್ಮಾನ ಮಾಡಿ ಗೌರವಿಸಿದ್ದಾರೆ. ಬೆಂಗಳೂರು-ಚಿಕ್ಕಮಗಳೂರು ನಡುವೆ ಸಂಚರಿಸುತ್ತಿದ್ದ ಬಸ್ ನಲ್ಲಿದ್ದ ಗರ್ಭಿಣಿ ಮಹಿಳೆಗೆ ಶಾಂತಿಗ್ರಾಮದ ಬಳಿ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಈ ವೇಳೆ ಬಸ್ ನಲ್ಲೇ ಹೆರಿಗೆ ಮಾಡಿಸಲು ವಸಂತಮ್ಮ ಸಹಾಯ ಮಾಡಿದ್ದರು.

ಹೆರಿಗೆಯ ನಂತರ ತಾಯಿ-ಮಗುವನ್ನು ಆಸ್ಪತ್ರೆಗೆ ದಾಖಲಿಸಲು ವಸಂತಮ್ಮ ಆಂಬುಲೆನ್ಸ್ ಗೆ ಕರೆ ಮಾಡಿದ್ದರು. ಅಷ್ಟೇ ಅಲ್ಲದೇ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿರುವುದರ ಬಗ್ಗೆ ಆಕೆಯ ಪೋಷಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು.

ಈ ಬಗ್ಗೆ ಮಾತನಾಡಿರುವ ನಿರ್ವಾಹಕಿ ವಸಂತಮ್ಮ, ಮನುಷ್ಯನಿಗೆ ಮಾನವೀಯತೆ ಮುಖ್ಯವಾಗಿದ್ದು, ಮಹಿಳೆಯಾಗಿದ್ದುಕೊಂಡು ಪ್ರಮುಖ ಸಂದರ್ಭದಲ್ಲಿ ಇನ್ನೊಬ್ಬ ಮಹಿಳೆಗೆ ಸಹಾಯ ಮಾಡುವುದು ಮುಖ್ಯ ಎಂದು ಹೇಳಿದ್ದಾರೆ. ವಸಂತಮ್ಮ ಅವರ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿ ಗೌರವ ಸಲ್ಲಿಸಿದ ಕಾರ್ಯಕ್ರಮದಲ್ಲಿ ನಿಸ್ವಾರ್ಥ ಎನ್ ಜಿಒದ ಸದಸ್ಯರಾದ ಇಂದ್ರೇಶ್, ಸುದರ್ಶನ, ವಿನಯ್, ರಾಜೇಶ್, ಕೌಶಿಕ್, ಪುರುಷೋತ್ತಮ್ ಹಾಜರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com