2022-23ರಲ್ಲಿ ಆರ್ಥಿಕತೆ ಶೇ.7.2 ಏರಿಕೆ: ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಹೊರಹೊಮ್ಮಿದ ಭಾರತ

ಅಂತಾರಾಷ್ಟ್ರೀಯ ಪ್ರತಿಕೂಲತೆಗಳ ನಡುವೆಯೂ 2022-23ರ ಹಣಕಾಸು ವರ್ಷದಲ್ಲಿ ದೇಶದ ಆಂತರಿಕ ಉತ್ಪನ್ನ (GDP) ದರ 7.2% ರಷ್ಟು ದಾಖಲಾಗಿದ್ದು, ಈ ಮೂಲಕ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಭಾರತ (India) ಹೊರಹೊಮ್ಮಿದ್ದು ಒಂದನೇ ಸ್ಥಾನದಲ್ಲೇ ಮುಂದುವರಿದಿದೆ.
ಭಾರತದ ಆರ್ಥಿಕತೆ
ಭಾರತದ ಆರ್ಥಿಕತೆ

ನವದೆಹಲಿ: ಅಂತಾರಾಷ್ಟ್ರೀಯ ಪ್ರತಿಕೂಲತೆಗಳ ನಡುವೆಯೂ 2022-23ರ ಹಣಕಾಸು ವರ್ಷದಲ್ಲಿ ದೇಶದ ಆಂತರಿಕ ಉತ್ಪನ್ನ (GDP) ದರ 7.2% ರಷ್ಟು ದಾಖಲಾಗಿದ್ದು, ಈ ಮೂಲಕ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಭಾರತ (India) ಹೊರಹೊಮ್ಮಿದ್ದು ಒಂದನೇ ಸ್ಥಾನದಲ್ಲೇ ಮುಂದುವರಿದಿದೆ.

2022-23 ರ ನಾಲ್ಕನೇ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆಯು ಶೇಕಡಾ 6.1 ರಷ್ಟು ಬೆಳವಣಿಗೆಯಾಗಿದ್ದು, ಇದು ವಾರ್ಷಿಕ ಬೆಳವಣಿಗೆಯ ದರವನ್ನು ಶೇಕಡಾ 7.2 ಕ್ಕೆ ಏರಿಕೆ ಮಾಡುತ್ತದೆ ಎಂದು ಅಧಿಕೃತ ಅಂಕಿಅಂಶಗಳು ಬುಧವಾರ ತೋರಿಸಿವೆ. 2021-22 ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ದರ 8.7% ದಾಖಲಾಗಿದ್ದರೆ ಚೀನಾ 8.1%, ಯುಕೆ 7.4% ರಷ್ಟು ದಾಖಲಾಗಿತ್ತು.

ಯಾವ ತ್ರೈಮಾಸಿಕದಲ್ಲಿ ಎಷ್ಟು?
Q1 – 13.5% (ಏಪ್ರಿಲ್‌-ಜೂನ್‌, 2022)
Q2 – 6.3% (ಜುಲೈ- ಸೆಪ್ಟೆಂಬರ್‌, 2022)
Q3 – 4.4% (ಅಕ್ಟೋಬರ್‌-ನವೆಂಬರ್‌, 2022)
Q4 – 6.1% (ಜನವರಿ- ಮಾರ್ಚ್‌, 2023)

ರಾಷ್ಟ್ರೀಯ ಅಂಕಿಅಂಶ ಕಚೇರಿ (NSO) ಬುಧವಾರ ಜಿಡಿಪಿ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ. 2023-24ರ ಹಣಕಾಸು ವರ್ಷದಲ್ಲಿ ಜಿಡಿಪಿ ದರ 6.5% ರಷ್ಟು ದಾಖಲಾಗಬಹುದು  ಎಂದು ಅಂದಾಜಿಸಿದೆ. 2021-22ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ದರ 8.7% ರಷ್ಟು ದಾಖಲಾಗಿತ್ತು. ಜಾಗತಿಕ ಆರ್ಥಿಕ ಹಿಂಜರಿತ, ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳ ಪರಿಸ್ಥಿತಿ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕಂಡುಬರುವ ಏರಿಳಿತಗಳು ದೇಶದ ಬೆಳವಣಿಗೆ ದರದ ಮೇಲೆ ಪರಿಣಾಮ ಬೀರಬಹುದು ಎಂದು ಆತಂಕ ವ್ಯಕ್ತಪಡಿಸಿದೆ.

ರಾಷ್ಟ್ರೀಯ ಖಾತೆಗಳ ಎರಡನೇ ಮುಂಗಡ ಅಂದಾಜಿನಲ್ಲಿ NSO 2022-23ಕ್ಕೆ ದೇಶದ ಬೆಳವಣಿಗೆಯನ್ನು ಶೇಕಡಾ 7 ಕ್ಕೆ ನಿಗದಿಪಡಿಸಿದೆ. 2023 ರ ಮೊದಲ ಮೂರು ತಿಂಗಳಲ್ಲಿ ಚೀನಾ 4.5 ಶೇಕಡಾ ಆರ್ಥಿಕ ಬೆಳವಣಿಗೆಯನ್ನು ದಾಖಲಿಸಿದೆ.

ಯಾವ ದೇಶದ ಜಿಡಿಪಿ ಎಷ್ಟು?
ಭಾರತ – 7.2%
ಇಂಡೋನೇಷ್ಯಾ – 5.3%
ಯುಕೆ – 4.1%
ಮೆಕ್ಸಿಕೋ -3.1%
ಚೀನಾ – 3%
ಫ್ರಾನ್ಸ್‌ – 2.6%
ಅಮೆರಿಕ – 2.1%

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com